ನಂಜನಗೂಡಿನಲ್ಲಿ ಮುಸ್ಲಿಂ ಬಾಂಧವರಿಂದ ಬಕ್ರೀದ್ ಹಬ್ಬ

| Published : Jun 18 2024, 12:51 AM IST

ಸಾರಾಂಶ

ಈ ಹಬ್ಬದಲ್ಲಿ ಬಡವ-ಬಲ್ಲಿದ ಎಂಬ ಬೇಧ- ಭಾವ ಸಲ್ಲದು, ಅಂತೆಯೇ ತ್ಯಾಗ, ಭಕ್ತಿ, ಸ್ನೇಹ, ಪ್ರೀತಿ, ಬಾಂಧವ್ಯ ಹಾಗೂ ಐಕ್ಯತೆಯ ಸಂಕೇತವಾಗಿ ಉಳ್ಳವರು ಬಡವರಿಗೆ ಹಾಗೂ ವೃದ್ಧರೊಂದಿಗೆ, ಹಂಚಿ ತಿನ್ನುವುದರ ಸಂಕೇತವಾಗಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಪಟ್ಟಣದ ಈದ್ಗಾ ಮೊಹಲ್ಲಾದಲ್ಲಿರುವ ಬೃಹತ್ ಮೈದಾನದಲ್ಲಿ ಪಟ್ಟಣದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಮೂಲಕ ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ವೈಭವದಿಂದ ಆಚರಿಸಿದರು.

ಪಟ್ಟಣದ ಚಾಮಲಾಪುರದ ಬೀದಿಯಲ್ಲಿರುವ ಜಾಮೀಯಾ ಮಸೀದಿಯಿಂದ ಈದ್ಗಾ ಮಸೀದಿಯವರೆಗೆ ಪ್ರಾರ್ಥನೆ ಸಲ್ಲಿಸಲು ಒಟ್ಟಾಗಿ ಬಂದ ಮುಸ್ಲಿಂ ಬಾಂಧವರು. ಈದ್ಗಾ ಮೈದಾನದಲ್ಲಿ ಸಹಸ್ರಾರಾರು ಸಂಖ್ಯೆಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಒಬ್ಬರಿಗೊಬ್ಬರು ಶುಭಾಷಯ ವಿನಿಮಯ ಮಾಡಿಕೊಂಡರು.

ಈ ಹಬ್ಬದಲ್ಲಿ ಬಡವ-ಬಲ್ಲಿದ ಎಂಬ ಬೇಧ- ಭಾವ ಸಲ್ಲದು, ಅಂತೆಯೇ ತ್ಯಾಗ, ಭಕ್ತಿ, ಸ್ನೇಹ, ಪ್ರೀತಿ, ಬಾಂಧವ್ಯ ಹಾಗೂ ಐಕ್ಯತೆಯ ಸಂಕೇತವಾಗಿ ಉಳ್ಳವರು ಬಡವರಿಗೆ ಹಾಗೂ ವೃದ್ಧರೊಂದಿಗೆ, ಹಂಚಿ ತಿನ್ನುವುದರ ಸಂಕೇತವಾಗಿದೆ. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ, ಶಾಂತಿಯ ವಾತಾವರಣ ನಿರ್ಮಾಣವಾಗಲಿ, ಹಿಂದೂ ಮತ್ತು ಮುಸ್ಲಿಂಮರು ಒಂದೇ ತಾಯಿಯ ಮಕ್ಕಳಂತೆ ಕೂಡಿ ಬಾಳುವಂತಾಗಲಿ ಎಂದು ಅಲ್ಲಾ ನಲ್ಲಿ ಪ್ರಾರ್ಥಿಸಿರುವುದಾಗಿ ಧರ್ಮ ಗುರುಗಳಾದ ಮುಸಭೀರ್ ಅಹಮದ್ ಧರ್ಮ ಸಂದೇಶವನ್ನು ನೀಡಿದರು.

ಶಾಸಕ ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕರಾದ ಬಿ. ಹರ್ಷವರ್ಧನ್, ಕಳಲೆ ಕೇಶವಮೂರ್ತಿ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಯ ಕೋರಿದರು.

ಕೆಪಿಸಿಸಿ ಸದಸ್ಯ ಕೆ. ಮಹಮದ್ ಅಕ್ಬರ್ ಆಲೀಂ, ಮುಖಂಡರಾದ ಎಂ. ಅಬ್ದುಲ್ ಖಾದರ್, ಮುಜೀಫ್, ಮುನಾವರ್, ಸಿಟಿಜನ್ ಶಾಲೆ ಅಧ್ಯಕ್ಷ ಮಹಮೊದ್ ಅಲಿ, ಯುನಿಟ್ ಶಾಲೆ ಅಧ್ಯಕ್ಷ ಸೈಯದ್ ಪ್ರಮುಖರು ಇದ್ದರು.