ಬಿದಿರು ಎಂಬುದು ಬಹುಪಯೋಗಿ ಬೆಳೆ : ಜೀವನೋಪಾಯಗಳ ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರ

| Published : Nov 09 2024, 01:23 AM IST / Updated: Nov 09 2024, 10:36 AM IST

ಬಿದಿರು ಎಂಬುದು ಬಹುಪಯೋಗಿ ಬೆಳೆ : ಜೀವನೋಪಾಯಗಳ ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬಿದಿರು ಬಹಳ ಮುಖ್ಯವಾದ, ಬಹುಪಯೋಗಿ ಬೆಳೆಯಾಗಿದ್ದು, ಭಾರತದಲ್ಲಿ ಅನೇಕ ಜೀವನೋಪಾಯಗಳ ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಜಗದೀಶ್ ತಿಳಿಸಿದರು.

  ಆನಂದಪುರ : ಬಿದಿರು ಬಹಳ ಮುಖ್ಯವಾದ, ಬಹುಪಯೋಗಿ ಬೆಳೆಯಾಗಿದ್ದು, ಭಾರತದಲ್ಲಿ ಅನೇಕ ಜೀವನೋಪಾಯಗಳ ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಜಗದೀಶ್ ತಿಳಿಸಿದರು.

ಅವರು ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಹಾಗೂ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಬೆಂಗಳೂರು ಅವರ ಸಹಯೋಗದೊಂದಿಗೆ ಕೃಷಿ ಆವರಣದಲ್ಲಿ 21 ವಿವಿಧ ಅಪರೂಪದ ಬಿದಿರು ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

2017ರಲ್ಲಿ ಕೇಂದ್ರ ಸರ್ಕಾರವು ಮರಗಳ ವರ್ಗದಿಂದ ಬಿದಿರನ್ನು ತೆಗೆದುಹಾಕಲು ಭಾರತೀಯ ಅರಣ್ಯ ಕಾಯಿದೆ 1927 ಅನ್ನು ತಿದ್ದುಪಡಿ ಮಾಡಿತು. ಮತ್ತು ಅದನ್ನು ಸಣ್ಣ ಅರಣ್ಯ ಉತ್ಪನ್ನವೆಂದು ಗೊತ್ತುಪಡಿಸಿತು. ಇದರ ಪರಿಣಾಮವಾಗಿ, ಇಚ್ಛೆಯುಳ್ಳ ಯಾರಾದರೂ ಯಾವುದೇ ಪರವಾನಗಿಗಳ ಅಗತ್ಯವಿಲ್ಲದೆ ಬಿದಿರು ಕೃಷಿಯನ್ನು ಕೈಗೊಳ್ಳಬಹುದು ಮತ್ತು ಬಿದಿರು ತೋಟವನ್ನು ಪ್ರಾರಂಭಿಸಬಹುದಾಗಿತ್ತು. ಇತ್ತೀಚಿನ ದಿನಗಳಲ್ಲಿ ಬಿದುರಿನ ಪ್ರಾಮುಖ್ಯತೆ, ಉದ್ಯೋಗಿಕರಣ ಹಾಗೂ ಗೃಹ ಬಳಕೆಯಲ್ಲಿ ಹೆಚ್ಚಾಗುತ್ತಿದೆ. ಈ ಉದ್ದೇಶದಿಂದ ಈ ಭಾಗದಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ವಿವಿಧ 21 ಜಾತಿಯ ಬಿದಿರುಗಳನ್ನು ನಾಟಿ ಮಾಡಿ ಸಂರಕ್ಷಿಸಲಾಗುವುದು ಎಂದರು.

ಸಂಶೋಧನಾ ನಿರ್ದೇಶಕರಾದ ಡಾ. ಎಸ್. ಪ್ರದೀಪ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ವಿಜ್ಞಾನಿ ಡಾ. ಸಿ. ಶರತ್, ಸಹಪಾಧ್ಯಾಪಕರಾದ ಡಾ. ಮಹೇಶ್ವರಪ್ಪ, ಎಚ್.ಆರ್. ರಶ್ಮಿತಾ, ಡಾ. ಮೋಹಿನಿ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.