ಬನಹಟ್ಟಿ: ಭಾರಿ ಮಳೆಗೆ ಕುಸಿದು ಬಿದ್ದ ಮೈದಾನದ ಗೋಡೆ

| Published : Aug 17 2024, 12:56 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಅವಳಿ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಸೋಮವಾರ ಪೇಟೆ, ಮಂಗಳವಾರ ಪೇಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳೆಲ್ಲವೂ ಹಳ್ಳದಂತೆ ಕಂಡು ಬಂದವು. ರಸ್ತೆಗಳು ಜಲಾವೃತವಾಗಿ ವಾಹನಗಳು ಹಾಗೂ ಜನರ ಸಂಚಾರಕ್ಕೆ ಪರದಾಟವನ್ನು ನಡೆಸಿದರು. ಇನ್ನು, ಇಲ್ಲಿಯ ಎಸ್‌ಆರ್‌ಎ ಕಾಲೇಜು ಮೈದಾನಕ್ಕಿರುವ ತಡೆಗೋಡೆಯು ನೀರಿನ ರಭಸಕ್ಕೆ ಕುಸಿದು ಬಿದ್ದಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನೀರಿನ ರಭಸ ಜೋರಾಗಿದ್ದದ್ದರಿಂದ ತಡೆಯ ಅರ್ಧಭಾಗ ಕುಸಿದು ಬಿದ್ದಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಅವಳಿ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಸೋಮವಾರ ಪೇಟೆ, ಮಂಗಳವಾರ ಪೇಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳೆಲ್ಲವೂ ಹಳ್ಳದಂತೆ ಕಂಡು ಬಂದವು. ರಸ್ತೆಗಳು ಜಲಾವೃತವಾಗಿ ವಾಹನಗಳು ಹಾಗೂ ಜನರ ಸಂಚಾರಕ್ಕೆ ಪರದಾಟವನ್ನು ನಡೆಸಿದರು. ಇನ್ನು, ಇಲ್ಲಿಯ ಎಸ್‌ಆರ್‌ಎ ಕಾಲೇಜು ಮೈದಾನಕ್ಕಿರುವ ತಡೆಗೋಡೆಯು ನೀರಿನ ರಭಸಕ್ಕೆ ಕುಸಿದು ಬಿದ್ದಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನೀರಿನ ರಭಸ ಜೋರಾಗಿದ್ದದ್ದರಿಂದ ತಡೆಯ ಅರ್ಧಭಾಗ ಕುಸಿದು ಬಿದ್ದಿತು. ಚರಂಡಿಗಳು ತುಂಬಿಕೊಂಡ ಪರಿಣಾಮ ಮಳೆಯ ನೀರಿನ ರಭಸಕ್ಕೆ ಹತ್ತಾರು ಮನೆಗಳೊಳಗೆ ನೀರು ನುಗ್ಗಿದೆ. ಕೆಲ ಮನೆಗಳ ಕೈ ಮಗ್ಗದ ಕೋಣೆಗಳಿಗೂ ನೀರು ನುಗ್ಗಿದ ಪರಿಣಾಮ ಭೀಮ್‌ಗಳಿಗೆ ಹಾನಿಯಾಗಿರುವ ವರದಿಯಾಗಿದೆ. ಒಂದು ಗಂಟೆ ಕಾಲ ನಗರದಲ್ಲಿ ಹಳ್ಳದಂತೆ ನೀರು ಹರಿಯಿತು. ಗುಡ್ಡದ ಪ್ರದೇಶದಿಂದ ಅಪಾರ ಪ್ರಮಾಣದ ನೀರು ಹರಿದು ಬಂದ ಕಾರಣ ನಗರಾದ್ಯಂತ ನೀರು ಆವರಿಸಿ ನಾಗರಿಕರಲ್ಲಿ ಮುಳುಗಡೆ ಭೀತಿ ಆವರಿಸಿತ್ತು.