ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಸದಸ್ಯತ್ವ ಪಡೆಯಿರಿ

| Published : Aug 17 2024, 12:56 AM IST

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಸದಸ್ಯತ್ವ ಪಡೆಯಿರಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಮಟ್ಟದ ಅಧ್ಯಕ್ಷ- ಉಪಾಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ನಿಂತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಸುವುದರ ಮೂಲಕ ಗೆಲವು ನಿಮ್ಮದಾಗಿಸಿಕೊಳ್ಳಬೇಕು

ಡಂಬಳ: ಕಾಂಗ್ರೆಸ್‌ ಪಕ್ಷದ ಶಕ್ತಿ ಯುತ್‌ ಕಾಂಗ್ರೆಸ್‌ ಆಗಿದ್ದು, ನಮ್ಮ ನಾಯಕ ರಾಹುಲ್‌ ಗಾಂಧಿ ಯುವಕರ ಭವಿಷ್ಯ ಕಟ್ಟುವ ನಿಟ್ಟಿನಲ್ಲಿ ಸದಾ ಚಿಂತಿಸಿ ಕಾಂಗ್ರೆಸ್‌ ಯುವ ನೇತಾರರು ಉತ್ತಮ ಸ್ಥಾನ ಹೊಂದಬೇಕು ಎನ್ನುವ ಹಿನ್ನೆಲೆ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದು, 18 ರಿಂದ 35 ವರ್ಷದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಸದಸ್ಯತ್ವ ನೋಂದಣಿ ಹೊಂದಬೇಕು ಎಂದು ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಜಿ. ಪಾಟೀಲ್ ಕರೆ ನೀಡಿದರು.

ಅವರು ರಾಜ್ಯಾದ್ಯಂತ ಆ. 20ರಿಂದ ಸೆ. 20ರ ವರೆಗೆ ನಡೆಯುವ ಕಾಂಗ್ರೆಸ್‌ ಸದಸ್ಯತ್ವ ನೋಂದಣಿ ಅಭಿಯಾನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡುವುದರ ಮೂಲಕ ಶಾಸಕ ಜಿ.ಎಸ್‌. ಪಾಟೀಲರ ಕೈ ಬಲಪಡಿಸಬೇಕು ಮತ್ತು ಜನತೆಯ ಧ್ವನಿಯಾಗಿ ಸೇವೆ ಮಾಡಲು ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಂತಿರುವ ಅಕ್ಷಯ ಪಾಟೀಲ ಅವರಿಗೆ ಹೆಚ್ಚಿನ ಬೆಂಬಲ ನೀಡಲು ಮುಂದಾಗಬೇಕು ಎಂದರು.

ಮುಂಡರಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಿ.ಡಿ.ಮೋರನಾಳ ಮಾತನಾಡಿ, ತಾಲೂಕು ಮಟ್ಟದ ಅಧ್ಯಕ್ಷ- ಉಪಾಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ನಿಂತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿಸುವುದರ ಮೂಲಕ ಗೆಲವು ನಿಮ್ಮದಾಗಿಸಿಕೊಳ್ಳಬೇಕು. ಅಕ್ಷಯ ಪಾಟೀಲ ಅವರನ್ನು ಗದಗ ಜಿಲ್ಲೆಯಿಂದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲು ಯುವಕರು ಮುಂದಾಗಬೇಕು ಎಂದರು.

ಯುತ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಅಭ್ಯರ್ಥಿ ಅಕ್ಷಯ ಪಾಟೀಲ ಮಾತನಾಡಿ, ಯುವಕರ ಶ್ರೇಯೋಭಿವೃದ್ಧಿಗಾಗಿ ದೇಶದಲ್ಲಿ ಸಾವಿರಾರರು ಕಂಪನಿಗಳು ನೆಲೆಸುವಂತೆ ಮಾಡಿ ನೂರಾರು ಸರ್ಕಾರಿ ಸಂಸ್ಥೆಗಳನ್ನು ನಿರ್ಮಾಣ ಮಾಡಿ ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೇಯಸ್ಸು ಕಾಂಗ್ರೆಸ್‌ ಪಕ್ಷದ್ದಾಗಿದೆ. ಆ ಹಿನ್ನೆಲೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳುವುದರ ಮೂಲಕ ನನಗೆ ಮತ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮಹೇಶ ಗಡಗಿ, ಕುಮಾರಸ್ವಾಮಿ ಹಿರೇಮಠ, ಸೋಮಣ್ಣ ಗುಡ್ಡದ, ಶರಣಪ್ಪ ಶಿರುಂದ, ಕನಕಮೂರ್ತಿ ನರೇಗಲ್ಲ, ಕಾಶಪ್ಪ ಅಳವಂಡಿ, ಜಾಕೀರ್‌ ಮೂಲಿಮನಿ, ಮುತ್ತಣ್ಣ ಕೊಂತಿಕಲ್ಲ, ಬಾಬು ಮೂಲಿಮನಿ, ಮರಿಯಪ್ಪ ಸಿದ್ದಣ್ಣವರ, ಹನಮರಡ್ಡಿ ಮೇಟಿ, ಶೇಖರಗೌಡ ಪಾಟೀಲ್, ಅಮರೇಶ ಹಿರೇಮಠ, ಬಸುರಡ್ಡಿ ಬಂಡಿಹಾಳ, ಶಂಕ್ರಪ್ಪ, ರಾಮನಗೌಡ ಪಾಟೀಲ್, ಹಾಲಪ್ಪ ಹರ್ತಿ, ಬಾಬುಸಾಬ ಸರಕಾವಾಸ, ನೂರಹಮ್ಮದ ಸರಕಾವಾಸ, ಶರಣು ಬಂಡಿಹಾಳ, ಭೀಮಪ್ಪ ಗದಗಿನ, ಸುರೇಶ ಗಡಗಿ, ಮಹಾಂತೇಶ ಮುಗಳಿ ಸೇರಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.