ಬಂಜಾರ ಟ್ರಸ್ಟ್, ನೌಕರರ ಸಂಘದಿಂದ ಹಿರಿಯ ನೌಕರರಿಗೆ ಸನ್ಮಾನ

| Published : Mar 26 2024, 01:00 AM IST

ಸಾರಾಂಶ

ಬಂಜಾರ ಭಾಷಾ ಅಕಾಡೆಮಿಯ ನಿರ್ದೇಶಕ ಸಣ್ಣರಾಮ ನಾಯ್ಕ ಮಾತನಾಡಿ, ಹೊಸಪೇಟೆಯ ಬಂಜಾರ ಹಿಲ್ಸ್‌ ನಲ್ಲಿ ದೇವಸ್ಥಾನದ ಪ್ರಾರಂಭವಾಗಿದೆ.

ಹೊಸಪೇಟೆ: ನಗರದ ಬಂಜಾರ ಸಮಾಜದ ಸಂತ ಸೇವಾಲಾಲ್ ಮಾತಾ ಮರಿಯಮ್ಮ ದೇವಸ್ಥಾನ ಬಂಜಾರ ಹಿಲ್ಸ್‌ನಲ್ಲಿ ನಿವೃತ್ತ ಹಾಗೂ ವೃತ್ತಿನಿರತ ಹಿರಿಯ ನೌಕರರಿಗೆ ಭಾನುವಾರ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.ಸಂತ ಸೇವಾಲಾಲ್ ಹಾಗೂ ಮಾತೇ ಮರಿಯಮ್ಮ ದೇವಿಗೆ ಪೂಜೆ ಸಲ್ಲಿಸಿ ಸೇವಾಲಾಲ್ ಹಾಡನ್ನು ಗಾಯಕ ವಾಲ್ಯಾ ನಾಯ್ಕ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಬಂಜಾರ ಭಾಷಾ ಅಕಾಡೆಮಿಯ ನಿರ್ದೇಶಕ ಸಣ್ಣರಾಮ ನಾಯ್ಕ ಮಾತನಾಡಿ, ಹೊಸಪೇಟೆಯ ಬಂಜಾರ ಹಿಲ್ಸ್‌ ನಲ್ಲಿ ದೇವಸ್ಥಾನದ ಪ್ರಾರಂಭವಾಗಿದೆ. ಮುಂದೊಂದು ದಿನ ಸೊರಗೊಂಡನ ಕೊಪ್ಪ (ಭಾಯಾಗಡ ) ಮಾದರಿಯಲ್ಲಿ ಹೆಸರುವಾಸಿ ಆಗಲಿ ಎಂದು ಆಶಿಸುವೆ ಎಂದರು.ಸಂಘದ ಮಾಜಿ ಅಧ್ಯಕ್ಷ ಎಲ್‌.ಡಿ. ಲಕ್ಷ್ಮಣ ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ನಿವೃತ್ತ ಪಿಎಸ್ಐಗಳಾದ ವಿರೇಶ್ ನಾಯ್ಕ, ಬಿ.ಡಿ. ರಜಪೂತ, ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ನಾರಾಯಣ ನಾಯ್ಕ, ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಧಿಕಾರಿ ವಿ.ಎಸ್‌. ಜಗದೀಶ್, ಕೆಪಿಟಿಸಿಎಲ್‌ನ ಇಇ ತೇಜ್ಯಾ ನಾಯ್ಕ, ಹಿರಿಯ ನೌಕರರಾದ ಶೆಟ್ಟಿ ನಾಯ್ಕ, ಭೀಮಾನಾಯ್ಕ , ಗೋವಿಂದ ನಾಯ್ಕ ಅವರನ್ನು ಸನ್ಮಾನಿಸಲಾಯಿತು.ಪ್ರಧಾನ ಟ್ರಸ್ಟಿ ಆರ್‌. ರಾಮಜೀ ನಾಯ್ಕ, ನೌಕರರ ಸಂಘದ ಅಧ್ಯಕ್ಷ ಶಿವರಾಮ್ ನಾಯ್ಕ, ಮುಖಂಡರಾದ ಡಿ. ಕೃಷ್ಣ ನಾಯ್ಕ, ಚಂದ್ರಶೇಖರ ನಾಯ್ಕ, ವೆಂಕಟೇಶ್ ನಾಯ್ಕ, ಹೇಮ್ಲಾ ನಾಯ್ಕ, ಎಲ್. ರಮೇಶ್ ನಾಯ್ಕ, ಹಂಪಿ, ನಾರಾಯಣ ನಾಯ್ಕ, ಎಂ.ಸಿ. ಗುಡಿಮನಿ, ಕುಮಾರ್ ನಾಯ್ಕ, ಭೀಮಾ ನಾಯ್ಕ, ಬದ್ರಿ ನಾರಾಯಣ ನಾಯ್ಕ ಸೇರಿದಂತೆ ಟ್ರಸ್ಟ್ ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.