ಬ್ಯಾಂಕ್ ಖಾತೆ, ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ ಕಾರ್ಯಕ್ರಮ

| Published : May 15 2025, 01:38 AM IST

ಸಾರಾಂಶ

ಪಾಲಡ್ಕ ಗ್ರಾಮ ಪಂಚಾಯಿತಿ ಹಾಗೂ ಕೆನರಾ ಬ್ಯಾಂಕ್ ಪುತ್ತಿಗೆ ಶಾಖೆ ವತಿಯಿಂದ ‘ಜನ್‌ಧನ್’ (ಜೀರೋ ಬ್ಯಾಲನ್ಸ್) ಖಾತೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ ಹಾಗೂ ನೋಂದಣಿ ಕಾರ್ಯಕ್ರಮ ಮೇ 14 ರಂದು ಪೂಪಾಡಿಕಲ್ಲು ನಾರಾಯಣಗುರು ಸಭಾಭವನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಪಾಲಡ್ಕ ಗ್ರಾಮ ಪಂಚಾಯಿತಿ ಹಾಗೂ ಕೆನರಾ ಬ್ಯಾಂಕ್ ಪುತ್ತಿಗೆ ಶಾಖೆ ವತಿಯಿಂದ ‘ಜನ್‌ಧನ್’ (ಜೀರೋ ಬ್ಯಾಲನ್ಸ್) ಖಾತೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ ಹಾಗೂ ನೋಂದಣಿ ಕಾರ್ಯಕ್ರಮ ಮೇ 14 ರಂದು ಪೂಪಾಡಿಕಲ್ಲು ನಾರಾಯಣಗುರು ಸಭಾಭವನದಲ್ಲಿ ನಡೆಯಿತು.

ಪಾಲಡ್ಕ ಪಂಚಾಯಿತಿ ಅಧ್ಯಕ್ಷರಾದ ಅಮಿತಾ ನಾಯ್ಕ್, ಕೆಎಂಎಫ್ ಮಾಜಿ ಅಧ್ಯಕ್ಷರಾದ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ ಸಾರ್ವಜನಿಕರಿಗೆ ಈ ರೀತಿಯ ಮಾಹಿತಿ ದೊರಕುವುದರಿಂದ ಸರ್ಕಾರದ ಹಲವಾರು ಕಾರ್ಯಕ್ರಮಗಳನ್ನು ಎಲ್ಲರಿಗೂ ತಲುಪಿಸಬಹುದು ಎಂದು ಶ್ಲಾಘಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಕ್ಷಿತಾ ಡಿ., ಕವಿತಾ ಎನ್. ಶೆಟ್ಟಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರು (ಕೆನರಾ ಬ್ಯಾಂಕ್ )ದ. ಕನ್ನಡ, ಮನು ಶಿವನ್ ಶಾಖಾ ವ್ಯವಸ್ಥಾಪಕರು (ಕೆನರಾ ಬ್ಯಾಂಕ್ ಪುತ್ತಿಗೆ), ಅಮೂಲ್ಯ ಕೆನರಾ ಬ್ಯಾಂಕ್ ಮಂಗಳೂರು ಹಾಗೂ ಪಂಚಾಯಿತಿ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು. ಲತೇಶ್. ಬಿ ಸ್ವಾಗತಿಸಿದರು.