ವೃದ್ಧ ದಂಪತಿಗಳಿಗೆ ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಕೆ ಹಾಕಿ 84 ಲಕ್ಷ ರು. ವಂಚನೆ ಮಾಡುವ ಪ್ರಯತ್ನದಿಂದ ಪಾರುಮಾಡಿದ ಕಿನ್ನಿಗೋಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ರಾಯಿಸ್ಟನ್ ಹಾಗೂ ಮೂಲ್ಕಿ ಪೊಲೀಸರಿಗೆ ಕಿನ್ನಿಗೋಳಿ ಪರಿಸರದ ಜನತೆ ಹಾಗೂ ರಾಜಕೀಯ ನಾಯಕರು ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಮೂಲ್ಕಿ: ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆಯ ವೃದ್ಧ ದಂಪತಿಗಳಿಗೆ ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಕೆ ಹಾಕಿ 84 ಲಕ್ಷ ರು. ವಂಚನೆ ಮಾಡುವ ಪ್ರಯತ್ನದಿಂದ ಪಾರುಮಾಡಿದ ಕಿನ್ನಿಗೋಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ರಾಯಿಸ್ಟನ್ ಹಾಗೂ ಮೂಲ್ಕಿ ಪೊಲೀಸರಿಗೆ ಕಿನ್ನಿಗೋಳಿ ಪರಿಸರದ ಜನತೆ ಹಾಗೂ ರಾಜಕೀಯ ನಾಯಕರು ಪ್ರಶಂಸೆಯ ಸುರಿಮಳೆಗೈದಿದ್ದಾರೆ.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಕಿನ್ನಿಗೋಳಿಯ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸಕಾಲದಲ್ಲಿ ವಂಚನೆ ತಪ್ಪಿಸಿದಕ್ಕಾಗಿ ಕೆನರಾ ಬ್ಯಾಂಕ್ ಪ್ರಬಂಧಕ ರಾಯಿಸ್ಟನ್ ರಿಗೆ ಅಭಿನಂದನೆ ಸಲ್ಲಿಸಿ ಅವರನ್ನು ಗೌರವಿಸಿದ್ದಾರೆ. ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕಾರ್ಯದರ್ಶಿ ಮಂಜುನಾಥ ಕಂಬಾರ ಮತ್ತಿತರರಿದ್ದರು.ಶಾಸಕ ಉಮಾನಾಥ ಕೋಟ್ಯಾನ್ ಕಿನ್ನಿಗೋಳಿ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಬ್ಯಾಂಕ್ ನ ಪ್ರಬಂಧಕರನ್ನು ಗೌರವಿಸಿದ್ದಾರೆ. ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಆಳ್ವ, ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಭುವನಾಭಿರಾಮ ಉಡುಪ ಮತ್ತಿತರರಿದ್ದರು. ಮೂಲ್ಕಿ ಪೊಲೀಸರು ಸಕಾಲದಲ್ಲಿ ಆಗಮಿಸಿ ಬ್ಯಾಂಕ್ ಪ್ರಬಂಧಕ ಹಣವನ್ನು ತಡೆ ಹಿಡಿಯುವಂತೆ ತಿಳಿಸಿ ಅಪಾಯದಿಂದ ಪಾರು ಮಾಡಿದ ಮೂಲ್ಕಿ ಪೊಲೀಸರನ್ನು ದಾಮಸ್ ಕಟ್ಟೆ ಪರಿಸರದ ನಾಗರಿಕರು ಗೌರವಿಸಿದರು.