ಬಪ್ಪನಾಡು ದೇವಳ ಜಾತ್ರೆ ಪೇಟೆ ಸವಾರಿ

| Published : Mar 28 2024, 12:47 AM IST

ಸಾರಾಂಶ

ಪೇಟೆ ಸವಾರಿಯಲ್ಲಿ ಪಂಚಮಹಾಲ್ ಶ್ರೀ ಸದಾಶಿವ ದೇವಸ್ಥಾನದಲ್ಲಿ ಎರಡು ದೇವರುಗಳಿಗೆ ಏಕಕಾಲದಲ್ಲಿ ಪೂಜೆ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ವಿವಿಧ ಧಾರ್ಮಿಕ ವಿಧಿಗಳು ನಡೆದವು. ಶ್ರೀ ದೇವರ ಉತ್ಸವ ಬಲಿ, ಸಣ್ಣ ರಥೋತ್ಸವ, ಸ್ವರ್ಣ ಪಲ್ಲಕಿ ಉತ್ಸವ ಪೇಟೆ ಸವಾರಿ ಹಾಗೂ ಕಟ್ಟೆ ಪೂಜೆ ಕ್ಷೇತ್ರದ ತಂತ್ರಿ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ಪೇಟೆ ಸವಾರಿಯಲ್ಲಿ ಪಂಚಮಹಾಲ್ ಶ್ರೀ ಸದಾಶಿವ ದೇವಸ್ಥಾನದಲ್ಲಿ ಎರಡು ದೇವರುಗಳಿಗೆ ಏಕಕಾಲದಲ್ಲಿ ಪೂಜೆ ನಡೆಯಿತು.

ಈ ಸಂದರ್ಭ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಾರ್ಯನಿರ್ವಣಾಧಿಕಾರಿ ಜಯಮ್ಮ, ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ವಿದ್ವಾನ್ ನಾಗೇಶ್ ಬಪ್ಪನಾಡು, ಶಿವಶಂಕರ್ ಮತ್ತಿತರರು ಇದ್ದರು.