ಬಸವಾದಿ ಶರಣರು ಸಮ ಸಮಾಜದ ಸಂಕಲ್ಪ ಹೊಂದಿದ್ದರು-ಪ್ರೊ. ಮಾರುತಿ ಶಿಡ್ಲಾಪುರ

| Published : May 15 2024, 01:32 AM IST

ಬಸವಾದಿ ಶರಣರು ಸಮ ಸಮಾಜದ ಸಂಕಲ್ಪ ಹೊಂದಿದ್ದರು-ಪ್ರೊ. ಮಾರುತಿ ಶಿಡ್ಲಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಅನುಷ್ಠಾನ ಯೋಗ್ಯವಾದ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸಿದ ಬಸವಾದಿ ಶರಣರು ಭಕ್ತಿ ಜ್ಞಾನದ ಜೊತೆಗೆ ಸಮ ಸಮಾಜದ ಕನಸನ್ನು ನನಸಾಗಿಸುವ ಸಂಕಲ್ಪ ಹೊಂದಿದ್ದರು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪುರ ತಿಳಿಸಿದರು.

ರಾಣಿಬೆನ್ನೂರು: ಅನುಷ್ಠಾನ ಯೋಗ್ಯವಾದ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸಿದ ಬಸವಾದಿ ಶರಣರು ಭಕ್ತಿ ಜ್ಞಾನದ ಜೊತೆಗೆ ಸಮ ಸಮಾಜದ ಕನಸನ್ನು ನನಸಾಗಿಸುವ ಸಂಕಲ್ಪ ಹೊಂದಿದ್ದರು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪುರ ತಿಳಿಸಿದರು.ನಗರದ ನಾಗಶಾಂತಿ ಉನ್ನತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ವಚನ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಜ್ಞಾನದಿಂದ ಅಜ್ಞಾನದ ಕೇಡು ಸಾಧ್ಯ. ಅಂತಹ ಸುಜ್ಞಾನವನ್ನು ನೀಡಿದ ಬಸವಾದಿ ಶಿವಶರಣರು ಕನ್ನಡ ಸಾಹಿತ್ಯದ ಅಪರೂಪ ಚಿಂತಕರು. ಇಡೀ ಜಗತ್ತಿಗೆ ಬೇಕಾಗುವ ಸಮಾನತೆಯ ಸಂದೇಶವನ್ನು ಸಾರಿದರು. ಅದರಂತೆ ನಡೆದು ನುಡಿದರು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷೆ ರಾಜೇಶ್ವರಿ ಪಾಟೀಲ ಮಾತನಾಡಿ, ಶರಣರ ಸಂದೇಶಗಳನ್ನು ಸಾರುವುದೇ ಒಂದು ದೊಡ್ಡ ಕಾರ್ಯ. ವಚನಗಳು ಪ್ರಚಾರ ಪ್ರಸಾರಕ್ಕೆ ನಾವೆಲ್ಲ ಒಟ್ಟಾಗಿ ಮುಂದಾಗೋಣ. ಈಗಿನ ಮಕ್ಕಳಲ್ಲಿ ಬಹು ಮುಖ್ಯವಾಗಿ ವಚನ ಜಾಗೃತಿ ಮೂಡಿಸುವ ಅಗತ್ಯವಿದೆ. ಸದಾ ಕಾಲಕ್ಕೂ ಬದುಕಿನ ಸತ್ಯಗಳನ್ನು ಹೇಳುವ ವಚನ ಸಾಹಿತ್ಯ ನಮ್ಮೆಲ್ಲರ ಮನೆ ಮನೆಯ ಮಾತಾಗಬೇಕು. ಜಾತಿ ಧರ್ಮದ ಭೇದವಿಲ್ಲದೆ ಎಲ್ಲರಿಗೂ ಬೇಕಾಗುವ ವಚನಗಳು ನಮ್ಮೆಲ್ಲರ ಅಂತರಂಗವನ್ನು ಅರಳಿಸುತ್ತವೆ ಎಂದರು.ಬಸವಣ್ಣನವರ ಸಾಮಾಜಿಕ ಚಿಂತನೆ ಕುರಿತು ವೀಣಾ ಮಾಜಿಗೌಡರ ಮಾತನಾಡಿದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಗಾಯತ್ರಮ್ಮ ಕುರವತ್ತಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ವೀರೇಶ ಜಂಬಗಿ, ದಾನೇಶ್ವರಿ ಜಾಗೃತಿ ಅಕ್ಕನ ಬಳಗದ ಅಧ್ಯಕ್ಷೆ ಸುನಂದಮ್ಮ ತಿಳವಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಕೆ.ಎಚ್.ಮುಕ್ಕಣ್ಣನವರ, ಶಕುಂತಲಮ್ಮ ಜಂಬಗಿ ಅತಿಥಿಗಳಾಗಿ ಆಗಮಿಸಿದ್ದರು. ನಾಗಶಾಂತಿ ಉನ್ನತಿ ಪದವಿ ಪೂರ್ವ ಕಾಲೇಜಿನ ಬಸವರಾಜ ಪಾಟೀಲ ವಚನ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು. ಮಂಗಳಮ್ಮ ಪಾಟೀಲ, ಎಸ್.ಕೆ.ನೇಶ್ವಿ, ಎಸ್.ಎಚ್.ಪಾಟೀಲ, ಎಸ್.ಜಿ.ಮಾಕಾಳ ಮತ್ತಿತರರಿದ್ದರು.

ವಚನ ಗಾಯನ ಸ್ಪರ್ಧೆ ಫಲಿತಾಂಶ:ಕಿರಿಯರ ವಿದ್ಯಾರ್ಥಿ ವಿಭಾಗ: ಶ್ರದ್ಧಾ ಲಕ್ಕಣ್ಣನವರ (ಪ್ರಥಮ), ಪ್ರಣವ ಹಿರೇಮಠ (ದ್ವಿತೀಯ), ಭೂಮಿಕಾ ದಾನಪ್ಪನವರ (ತೃತೀಯ) ಹಿರಿಯ ವಿದ್ಯಾರ್ಥಿ ವಿಭಾಗ: ಸ್ಪೂರ್ತಿ ಚಪ್ಪರದಳ್ಳಿಮಠ (ಪ್ರಥಮ), ಸಮರ್ಥ ಚಪ್ಪರದಳ್ಳಿಮಠ(ದ್ವಿತೀಯ), ಸಿದ್ದಾಂತ ಮಾಕನವರ (ತೃತೀಯ)

ಹಿರಿಯರ ವಿಭಾಗದ: ಹೇಮಾ ತಾಳೋರ (ಪ್ರಥಮ), ಮಂಗಳಮ್ಮ ಪಾಟೀಲ (ದ್ವಿತೀಯ), ಕಾವ್ಯ ಚಪ್ಪರದಳ್ಳಿಮಠ (ತೃತೀಯ)