ಜಾತಿ ರಹಿತ ಸಮಾಜ ನಿರ್ಮಿಸಿದ ಬಸವಾದಿ ಶರಣರು

| Published : May 13 2024, 12:04 AM IST

ಜಾತಿ ರಹಿತ ಸಮಾಜ ನಿರ್ಮಿಸಿದ ಬಸವಾದಿ ಶರಣರು
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದಲ್ಲಿ ಬಸವಾದಿ ಶರಣರು ಜಾತಿರಹಿತ ಸಮಾಜಕ್ಕೆ ಮನ್ನಣೆ ನೀಡಿ ಅದರಂತೆ ಬದುಕಿದವರು. ಅನೇಕ ಮಠಗಳು ಬಸವಣ್ಣನವರ ಸಿದ್ಧಾಂತಗಳನ್ನು ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ ಎಂದು ವಿಶ್ರಾಂತ ಪೊಲೀಸ್ ವರಿಷ್ಠಾಧಿಕಾರಿ ಸುಭಾಸ ಗುಡಿಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

12ನೇ ಶತಮಾನದಲ್ಲಿ ಬಸವಾದಿ ಶರಣರು ಜಾತಿರಹಿತ ಸಮಾಜಕ್ಕೆ ಮನ್ನಣೆ ನೀಡಿ ಅದರಂತೆ ಬದುಕಿದವರು. ಅನೇಕ ಮಠಗಳು ಬಸವಣ್ಣನವರ ಸಿದ್ಧಾಂತಗಳನ್ನು ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ ಎಂದು ವಿಶ್ರಾಂತ ಪೊಲೀಸ್‌ ವರಿಷ್ಠಾಧಿಕಾರಿ ಸುಭಾಸ ಗುಡಿಮನಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ, ತಾಲೂಕು, ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಬಸವಣ್ಣನವರ ಕುರಿತು ನಡೆದ ಚಿಂತನಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆ ಸಮಾಜದ ರಚನೆ ಮೂಲ ಮಂತ್ರವಾಗಿತ್ತು. ಅಂತರ್ಜಾತಿ ವಿವಾಹ ಬಸವಣ್ಣನವರ ತತ್ವಗಳು ಎಲ್ಲರ ರಕ್ತಗತವಾಗಿ ರೂಢಿಸಿಕೊಳ್ಳಬೇಕು. ವಚನಗಳನ್ನು ಅಥ೯ ಮಾಡಿಕೊಂಡು ಜೀವನ ಪಾವನ ಮಾಡಿಕೊಳ್ಳಬೇಕು ಎಂದರು.

ನ್ಯಾಯವಾದಿ ಮಹಮ್ಮದ ಗೌಸ ಹವಾಲ್ದಾರ ಮಾತನಾಡಿ, ವಿಶ್ವಕ್ಕೆ ವಚನದ ಮೂಲಕ ಜ್ಞಾನ ದ ಬೆಳಕು ನೀಡಿದ ವಿಶ್ವ ಗುರು ಬಸವಣ್ಣ. ವೈಚಾರಿಕ ಕಲ್ಪನೆ ಮೂಲಕ ಸಮ ಸಮಾಜ ರಚಿಸಿದವರು ಬಸವಣ್ಣ . ಕಾಯಕಕ್ಕೆ ಪ್ರಧಾನ ಸ್ಥಾನ ನೀಡಿದವರು ಅಪ್ಪ ಬಸವಣ್ಣನವರು. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ ಎಂದರು.

ಡಾ.ಮಾಧವ ಗುಡಿ ಮಾತನಾಡಿ, ಸಾಮಾಜಿಕ ಕ್ರಾಂತಿ ಮಾಡಿದ ಪ್ರಥಮರು. ದಯವಿಲ್ಲದ ಧರ್ಮಕ್ಕೆ ಮಹತ್ವವಿಲ್ಲ. ಸಕಲ ಜೀವಿಗಳಿಗೆ ಲೇಸನ್ನು ಬಯಸುವುದೇ ಮಾನವೀಯ ಮೌಲ್ಯ. ಮೌಢ್ಯಗಳನ್ನು ಸಮಾಜದಿಂದ ಕಿತ್ತು ಹಾಕುವ ಬಸವಣ್ಣನವರ ಸಂಕಲ್ಪವಾಗಿತ್ತು. ಇಂದು ಬಸವಣ್ಣನವರ ವಿಚಾರಗಳು ವಿಶ್ವವೇ ಸ್ವೀಕರಿಸಿದೆ ಎಂದರು.

ಸಾಹಿತಿ ಶಿಲ್ಪಾ ಬಸ್ಮೆ ಮಾತನಾಡಿ, ಅಂತರ್ಜಾತಿಯ ವಿವಾಹದಿಂದ ಕಲ್ಯಾಣ ಕ್ರಾಂತಿಗೆ ಕಾರಣವಾಯಿತು. ಪ್ರಸಾದ ಸೇವೆಯಲ್ಲಿ ಬೇಧ ಮಾಡದೇ ಒಂದೇ ಪಂಕ್ತಿಯಲ್ಲಿ ಪ್ರಸಾದ ಮಾಡಬೇಕಾಗಿದ್ದರಿಂದ ಅನೇಕರು ಬಸವಣ್ಣನವರಿಗೆ ವಿರೋಧವಾಯಿತು. ಜಾತಿ ಮತ ಪಂಥಗಳು ಸಮಾಜದಿಂದ ದೂರಾಗಬೇಕು ಎಂದು ಪ್ರತಿಪಾದಿಸಿದ ಬಸವಣ್ಣನವರನ್ನು ಬಿಜ್ಜಳ ಅರಸ ಚಾಡಿಮಾತು ಕೇಳಿ ಅವರನ್ನು ಅರಮನೆಯಿಂದ ಹೊರಹಾಕಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಬಸವರಾಜ ಆಜೂರ ಅವರು, ಬಸವಣ್ಣನವರು ನಮ್ಮ ಜಿಲ್ಲೆಯಲ್ಲಿ ಜನ್ಮ ತಾಳಿದ್ದರಿಂದ ನಮ್ಮೆಲ್ಲರಿಗೂ ಹೆಮ್ಮೆ. ಬಸವ ಚಿಂತನೆಗಳು ಅತ್ಯವಶ್ಯ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಪ್ರಾಚಾರ್ಯ ಸಿದ್ರಾಮಯ್ಯ ಲಕ್ಕುಂಡಿಮಠ, ವಿದ್ಯಾವತಿ ಅಂಕಲಗಿ, ರಾಜೇಸಾಬ ಶಿವನಗುತ್ತಿ, ಪ್ರೊ.ಸಿದ್ದು ಸವಳಸಂಗ, ಅಹಮ್ಮದ ವಾಲೀಕಾರ, ಟಿ.ಆರ್ ಹಾವಿನಾಳ, ಶಾಂತಾ ವಿಭೂತಿ, ಶೇಷರಾವ ಮಾನೆ, ಎಂ.ಎಂ ಕಲಾಸಿ, ಮಡಿವಾಳಮ್ಮ ನಾಡಗೌಡ, ಸುರೇಶ ಪೂಜಾರಿ, ಸಂಗಮೇಶ ಕರೆಪ್ಪಗೋಳ, ಗಂಗಮ್ಮ ರೆಡ್ಡಿ, ಪ್ರಕಾಶಸಿಂಗ ರಜಪೂತ, ಚೈತನ್ಯ ಮುದ್ದೇಬಿಹಾಳ, ಲಕ್ಷ್ಮಿ ಬಿರಾದಾರ, ಜಿ.ಎಸ್ ಬಳ್ಳೂರ ಮುಂತಾದವರು ಉಪಸ್ಥಿತರಾಗಿದ್ದರು. ಡಾ ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೋ ಸುಭಾಶಚಂದ್ರ ಕನ್ನೂರ ಸ್ವಾಗತಿಸಿ ಪರಿಚಯಿಸಿದರು. ಅನ್ನಪೂರ್ಣ ಬೆಳ್ಳನವರ ನಿರೂಪಿಸಿದರು.

ಮಹಿಳಾ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಪೂಜಾ ಅಂಗಡಿ, ರಾಗಿಣಿ ಪೂಜಾರ, ಚೈತ್ರಾವತಿ ನೀಲಪ್ಪನವರ ವಚನ ಗಾಯನ ಮಾಡಿದರು, ನೂತನವಾಗಿ ಇಂಡಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವೈ.ಟಿ ಪಾಟೀಲ, ಸಿ.ಎಸ್ ಝಳಕಿ, ಆನಂದ ಕೆಂಬಾವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.