ಬಸವಣ್ಣನವರ ಕಾಯಕವೇ ಕೈಲಾಸ ಮನುಕುಲಕ್ಕೇ ಮಹಾ ಸಂದೇಶ

| Published : May 13 2024, 12:07 AM IST

ಬಸವಣ್ಣನವರ ಕಾಯಕವೇ ಕೈಲಾಸ ಮನುಕುಲಕ್ಕೇ ಮಹಾ ಸಂದೇಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ವಿಶ್ವವಿದ್ಯಾಲಯದಲ್ಲಿ ವಿಶ್ವ ಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ವಚನಕಾರನ ಜೊತೆಗೆ ತತ್ವಜ್ಞಾನಿಯಾಗಿದ್ದ ಬಸವಣ್ಣನವರು 12ನೇ ಶತಮಾನದ ಮಹಾನ್ ಸಮಾಜ ಸುಧಾರಕರು. ಇವರ ''''''''ಕಾಯಕವೇ ಕೈಲಾಸ'''''''' ತತ್ವ-ಸಂದೇಶವು ಸರ್ವಕಾಲಕ್ಕೂ ಪ್ರಚಲಿತವಾಗಿದ್ದು, ಅವರ ಒಂದೊಂದು ವಚನವೂ ಜೀವನಕ್ಕೆ ಪಾಠವಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕಲಾ ನಿಕಾಯದ ಡಿನ್ ಪ್ರೊ.ಪಿ. ಭಾಸ್ಕರ್ ಹೇಳಿದರು.

ಇಲ್ಲಿನ ವಿವಿ ಸಭಾಂಗಣದಲ್ಲಿ ವಿಶ್ವ ಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬೆಳಕು ತಂದವರು ಬಸವಣ್ಣನವರು. ಮೇಲು ಕೀಳು ಎಂಬ ಭೇದ ಬಹಳಷ್ಟು ತೀವ್ರವಾಗಿದ್ದ ಕಾಲದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕವೇ ಸಮಾಜ ತಿದ್ದುವ ಕೆಲಸ ಮಾಡಿದರು. ಕ್ರಾಂತಿ ಬೀಜ ಬಿತ್ತಿದರು. ಇವರು ರಾಜನೀತಿಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆಯ ಮೂಲಕ ಸಾರ್ವಜನಿಕರಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅವಿರತವಾಗಿ ಶ್ರಮಿಸಿದರು. ಬಸವಣ್ಣನವರ ಮಾತು, ತತ್ವ, ಆದರ್ಶ ಪಾಲಿಸಿ ಜೀವನ ನಡೆಸಿದರೆ ಬದುಕು ಸುಖಮಯ. ಇಂತಹ ಗುರುವಿನ ಆದರ್ಶ ನಾವೆಲ್ಲರೂ ಪಾಲಿಸಲೇಬೇಕು ಎಂದು ಸಂದೇಶ ನೀಡಿದರು.

ವಿಜ್ಞಾನ ನಿಕಾಯಗಳದ ಡಿನ್ ಪ್ರೊ. ಸಿ. ಎಸ್. ಪಾರ್ವತಿ ಮಾತನಾಡಿದರು. ಅಭಿಯಂತರ ಪಂಪಾಪತಿ, ರಸಾಯನ ಶಾಸ್ತ್ರವಿಭಾಗದ ಉಪನ್ಯಾಸಕ ಡಾ. ಯಮುನಪ್ಪಗೌಡ, ಬೋಧಕೇತರ ಸಿಬ್ಬಂದಿ ಮೋಹನ್, ಆನಂದ್ ಬಡಿಗೇರ್ ಸೇರಿದಂತೆ ಇತರರು ಭಾಗವಹಿಸಿದ್ದರು. ಇಂಗ್ಲೀಷ್ ಅಧ್ಯಯನ ವಿಭಾಗದ ಉಪನ್ಯಾಸಕ ಅನಿಲ್ ಅಪ್ರಾಳ್ ಕಾರ್ಯಕ್ರಮ ನಿರೂಪಿಸಿದರು.