ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್‌ ಚೇತನ ಬಸವಣ್ಣನವರು

| Published : May 24 2024, 12:51 AM IST

ಸಾರಾಂಶ

೧೨ನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣನವರು, ಅನುಭವ ಮಂಟಪದಲಿ ಮಹಿಳೆಯರಿಗೆ ಪುರುಷರ ಸರಿಸಮಾನವಾಗಿ ಸ್ಥಾನಮಾನ ನೀಡಿದವರಾಗಿದ್ದರು. ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾ ದಿವ್ಯ ಚೇತನರು ಅಣ್ಣ ಬಸವಣ್ಣನವರು ಎಂದು ಶ್ರೀ ದಾನೇಶ್ವರಿ ಮಹಿಳಾ ಸಂಘದ ಅಧ್ಯಕ್ಷೆ ಅನ್ನಪೂರ್ಣ ಶೆಟ್ಟರ ಹೇಳಿದರು.

ಶಿಗ್ಗಾಂವಿ: ೧೨ನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣನವರು, ಅನುಭವ ಮಂಟಪದಲಿ ಮಹಿಳೆಯರಿಗೆ ಪುರುಷರ ಸರಿಸಮಾನವಾಗಿ ಸ್ಥಾನಮಾನ ನೀಡಿದವರಾಗಿದ್ದರು. ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾ ದಿವ್ಯ ಚೇತನರು ಅಣ್ಣ ಬಸವಣ್ಣನವರು ಎಂದು ಶ್ರೀ ದಾನೇಶ್ವರಿ ಮಹಿಳಾ ಸಂಘದ ಅಧ್ಯಕ್ಷೆ ಅನ್ನಪೂರ್ಣ ಶೆಟ್ಟರ ಹೇಳಿದರು. ಪಟ್ಟಣದ ಶ್ರೀ ಫಕ್ಕೀರೇಶ್ವರ ಸಭಾ ಭವನದಲ್ಲಿ ನಡೆದ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಜಾತಿ ಭೇದ ಭಾವ ತೊರೆದು ಸರ್ವ ಜನಾಂಗದವರು ಸಾಮರಸ್ಯದಿಂದ ಬದುಕು ಸಾಗಿಸಲು ಭೋದಿಸಿ, ಸಮಾಜದಲ್ಲಿ ಸಮಾನತೆ ಸಾರಲು ಶ್ರಮಿಸಿದವರಾಗಿದ್ದರು ಎಂದು ಹೇಳಿದರು. ಸವಣೂರಿನ ಅಕ್ಕನಬಳಗದ ಅಧ್ಯಕ್ಷೆ ಅಲಕಾ ಸಿಂಧೂರ ಮಾತನಾಡಿ, ವಿಶ್ವ ಗುರು ಬಸವಣ್ಣನವರು ಮಹಿಳಾ ಹಕ್ಕುಗಳ ಪ್ರತಿಪಾದಕರಾಗಿದ್ದರು. ಮಹಿಳೆಯರಿಗೆ ಶಿಕ್ಷಣದ ಹಕ್ಕನ್ನು ನೀಡಲು ಧ್ವನಿ ಎತ್ತಿದವರಾಗಿದ್ದು, ಮಹಿಳೆಯರು ಸಾಮಾಜಿಕ, ಧಾರ್ಮಿಕ, ರಾಜಕೀಯವಾಗಿ ಮುಂದೆ ಬರುವಂತೆ ಪ್ರೋತ್ಸಾಹಿಸಿದವರಾಗಿದ್ದು, ಅಂತರ್ಜಾತಿ ವಿವಾಹ ಮಾಡಿಸುವ ಮೂಲಕ ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಪ್ರೇರೇಪಿಸಿದವರಾಗಿದ್ದರು. ಮೂರ್ತಿ ಪೂಜೆಗಿಂತ ಕಾಯಕವೇ ಕೈಲಾಸ ಎಂದು ಸಾರುವ ಮೂಲಕ ಸಮಾಜದಲ್ಲಿರುವ ಮೌಢ್ಯಗಳ ಆಚರಣೆಗಳನ್ನು ಹೋಡೆದೋಡಿಸಲು ಕರೆ ನೀಡಿದವರು ಅಣ್ಣ ಬಸವಣ್ಣನವರು ಎಂದು ಹೇಳಿದರು. ಕಾರ್ಯಕ್ರಮಕ್ಕೂ ಪೂರ್ವ ಅಣ್ಣ ಬಸವಣ್ಣನವರ ಬಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನೂತನವಾಗಿ ಪ್ರಾರಂಭಿಸಲಾದ ಕ್ವೀನ್ ಬೀ ಕ್ಲಬ್‌ನ್ನು ಅಲಕಾ ಸಿಂಧೂರ ಉದ್ಘಾಟಿಸಿದರು. ರಾಜೇಶ್ವರಿ ಬೂಶೆಟ್ಟಿ, ಲತಾ ಕೊಲ್ಲಾವರ, ಕವಿತಾ ಪಾಟೀಲ, ವಿದ್ಯಾ ಕೂಲಿ, ಶೀಲಾ ಕಲ್ಯಾಣಮಠ, ನಂದಾ ಕೂಲಿ, ದೀಪಾ ಮಾ.ಪ.ಶೆಟ್ಟರ, ನೀಲಮ್ಮ, ಸುಜಾತಾ, ಸುಧಾ, ನೀರ್ಮಲಾ, ಶೋಭಾ, ಸಹನಾ, ಶಿವಲೀಲಾ, ವೀಣಾ ಸೇರಿದಂತೆ ಮಹಿಳಾ ಮಂಡಳದ ಸರ್ವ ಸದಸ್ಯರು ಉಪಸ್ಥಿತರಿದ್ದರು.