ಮಹಿಳೆಯರಿಗೂ ಇಷ್ಟಲಿಂಗ ಪೂಜೆಗೆ ಅವಕಾಶ ನೀಡಿದ್ದ ಬಸವಣ್ಣ: ಇಮ್ಮಡಿ ಬಸವರಾಜ ಸ್ವಾಮೀಜಿ

| Published : Jun 10 2024, 12:31 AM IST

ಸಾರಾಂಶ

ಅನುಭವ ಮಂಟಪದ ಮೂಲಕ ಬಸವಣ್ಣನವರು ಸಮಾಜ ತಿದ್ದಿದ್ದರು. ತಮ್ಮ ವಚನಗಳ ಮೂಲಕ ಸಮಾಜವನ್ನು ಜಾಗೃತಿ ಮೂಡಿಸಿದರು. ಸಮಾಜದಲ್ಲಿ ಎಲ್ಲಾ ಜನಾಂಗವರು ಒಂದೇ, ಯಾರೂ ಮೇಲಲ್ಲ, ಕೀಳಲ್ಲ .

ಕನ್ನಡಪ್ರಭ ವಾರ್ತೆ ಮಾಗಡಿ

ಪುರುಷರಿಗೆ ಇರುವಷ್ಟೇ ಸಮಾನ ಸ್ಥಾನಮಾನವನ್ನು ಮಹಿಳೆಯರಿಗೂ ಕೊಟ್ಟು, ಮಹಿಳೆಯರಿಗೆ ಲಿಂಗಧಾರಣೆ, ಧೀಕ್ಷಾ ಸಂಸ್ಕಾರಗಳಿಗೆ ಬಸವಣ್ಣನವರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಹೇಳಿದರು.

ಪಟ್ಟಣದ ವೀರಶೈವ ಲಿಂಗಾಯಿತ ಸಮುದಾಯದ ವತಿಯಿಂದ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಗಂಡು ಮತ್ತು ಹೆಣ್ಣು ಇಬ್ಬರೂ ಸಮಾಜದಲ್ಲಿ ಸಮಾನವಾಗಿ ಇರಬೇಕು, ಬೇಧ-ಭಾವ ಮಾಡಬಾರದು, ಎಲ್ಲಾ ವಿಷಯದಲ್ಲೂ ಇಬ್ಬರೂ ಸಮಾನರು ಎಂಬ ಭಾವನೆಯಿಂದ ನೋಡಬೇಕು ಎಂದು ಬಸವಣ್ಣನವರು ಪ್ರತಿಪಾದಿಸುತ್ತಿದ್ದರು. ಅವರು ಹಾಕಿಕೊಟ್ಟ ಬುನಾದಿ ಈಗ ಸಂವಿಧಾನದ ಮೂಲಕವೇ ಮಹಿಳೆಯರಿಗೂ ಸಮಾನ ಹಕ್ಕುಗಳು ಸಿಗುತ್ತಿವೆ ಎಂದು ತಿಳಿಸಿದರು.

ವೀರಶೈವ ಮಂಡಳಿಯ ಅಧ್ಯಕ್ಷ ರುದ್ರಮೂರ್ತಿ ಮಾತನಾಡಿ, ಬಸವಣ್ಣನವರು ಕಾಯಕವೇ ಕೈಲಾಸವೆಂದು ಘೋಷಿಸಿ, ಪ್ರತಿಯೊಬ್ಬರೂ ದುಡಿಯಬೇಕು, ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಬೇಕು ಎಂದು ತಿಳಿಸಿದ್ದು, 12ನೇ ಶತಮಾನದಲ್ಲಿಯೇ ಸರಳವಾದ ವಚನಗಳನ್ನು ರಚಿಸುವುದರ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಬಸವಣ್ಣನವರು ಮಾಡಿದ್ದರು ಎಂದು ಹೇಳಿದರು.

ವೀರಶೈವ ಮುಖಂಡ ಪೊಲೀಸ್ ವಿಜಿ ಮಾತನಾಡಿ, ಅನುಭವ ಮಂಟಪದ ಮೂಲಕ ಬಸವಣ್ಣನವರು ಸಮಾಜ ತಿದ್ದಿದ್ದರು. ತಮ್ಮ ವಚನಗಳ ಮೂಲಕ ಸಮಾಜವನ್ನು ಜಾಗೃತಿ ಮೂಡಿಸಿದರು. ಸಮಾಜದಲ್ಲಿ ಎಲ್ಲಾ ಜನಾಂಗವರು ಒಂದೇ, ಯಾರೂ ಮೇಲಲ್ಲ, ಕೀಳಲ್ಲ ಎಂದು ಸಾರುವುದರ ಮೂಲಕ ಸಮಾಜದಲ್ಲಿ ಸಮಾನತೆಯನ್ನು ತಂದ ಹರಿಕಾರ ಬಸವಣ್ಣನವರು ಎಂದು ತಿಳಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮುತ್ತಿನ ಪಲ್ಲಕ್ಕಿಯಲ್ಲಿ ಬಸವಣ್ಣ ಮೂರ್ತಿ ಕೂರಿಸಿ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ವೀರಶೈವ ಸಮಿತಿ ಗೌರವಾಧ್ಯಕ್ಷ ಎಂ.ಬಿ. ಶಿವಾನಂದ್, ಉಪಾಧ್ಯಕ್ಷ ಎಂ.ಆರ್.ಶಿವಕುಮಾರ್, ಸಹ ಕಾರ್ಯದರ್ಶಿ ಎಂ.ಬಿ. ರವಿಶಂಕರ್, ನಿರ್ದೇಶಕ ಮಹಂತೇಶ್. ಎಸ್. ನಟರಾಜ್, ಎಂ.ಎನ್. ಮಂಜುನಾಥ್, ಎಂ.ಆರ್. ಜಗದೀಶ್, ಸಮುದಾಯದ ಯುವ ಮುಖಂಡರಾದ ಎಂ.ಜೆ.ವಿಜಯ್, ಕೆ.ಎಂ.ಕೆ.ರಾಜು, ಪ್ರದೀಪ್, ರಂಜನ್‌ ಪ್ರಸಾದ್, ಎಂ.ಆರ್. ಚಂದ್ರಶೇಖರ್, ಎಂ.ಆರ್.ಶಿವಕುಮಾರ್, ರೋಹಿತ್, ಜಯದೇವ್, ಹರೀಶ್, ಯು.ವಿನಯ್, ಅನುಗಿರೀಶ್, ಯು.ಶರತ್, ಚಿರು, ಚರಣ್, ಪುರಸಭಾ ಸದಸ್ಯೆ ಶಿವರುದ್ರಮ್ಮ, ಅಕ್ಕನ ಬಳಗದ ಅಧ್ಯಕ್ಷೆ ಗಾಯಿತ್ರಿರಾಜು, ಪ್ರೇಮ ಜಯದೇವ್, ಟಿ.ಎಸ್.ಅನಿತಾ, ಮಾನಸ ವಿಜಯ್, ವಿಜಯಮ್ಮ ಮಲ್ಲಿಕಾರ್ಜುನ್, ಉಮಾ, ಮಮತ, ಆಚಲ, ಲಲಿತ ಸೇರಿ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು.