ಭಾಷೆಯಲ್ಲಿನ ಅಸ್ಪೃಶ್ಯತೆಯನ್ನು ಹೊಡೆದು ಹಾಕಿದ ಬಸವಣ್ಣ: ಸದಾನಂದ ಪಾಟೀಲ್

| Published : Jul 02 2024, 01:33 AM IST

ಭಾಷೆಯಲ್ಲಿನ ಅಸ್ಪೃಶ್ಯತೆಯನ್ನು ಹೊಡೆದು ಹಾಕಿದ ಬಸವಣ್ಣ: ಸದಾನಂದ ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಗುರು ಬಸವಣ್ಣನವರು, ಮನುಷ್ಯ ಮನುಷ್ಯರ ನಡುವಿನ ಅಸ್ಪೃಶ್ಯತೆ ಮಾತ್ರವಲ್ಲ ಭಾಷೆಯಲ್ಲಿನ ಅಸ್ಪೃಶ್ಯತೆಯನ್ನು ಹೊಡೆದು ಹಾಕಲು ವಚನಾಂದೋಲನ ನಡೆಸಿ ಮನುಷ್ಯ ಪರಿಪೂರ್ಣನಾಗುವ, ಎಲ್ಲರಿಗೂ ಎಟುಕುವ ಸುಲಭ ಮಾರ್ಗವನ್ನು ಕಂಡು ಹಿಡಿದರು ಎಂದು ಸೊನ್ನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸದಾನಂದ ಪಾಟೀಲ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಜೇವರ್ಗಿ

ಪಟ್ಟಣದ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆ ಪ್ರೌಢ ಶಾಲೆ ಆವರಣದಲ್ಲಿ ಸೋಮವಾರ ಬಸವಕೇಂದ್ರದಿಂದ ಆಯೋಜಿಸಲಾಗಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು. ಬಸವಣ್ಣನ ಪೂರ್ವ ಯುಗದ ಸಾಮಾಜಿಕ ಜೀವನ ಅನೇಕ ಧಾರ್ಮಿಕ, ಶಾಸ್ತ್ರ ಕಟ್ಟು ಕಟ್ಟಳೆಗಳಿಂದ ಕೂಡಿತ್ತು. ಸ್ತ್ರೀ ಸಮಾನತೆಗಾಗಿ ಮನೆಯಿಂದ ಹೊರ ನಡೆದ ಬಸವಣ್ಣ ಸಮಾಜದಲ್ಲಿ ಮೂಢನಂಬಿಕೆ, ಕಂದಾಚಾರ ನಿವಾರಿಸಿ ಸಮಾನತೆ, ಸ್ವಾತಂತ್ರ್ಯ ತಂದು ಕೊಟ್ಟರು. ಶರಣರು, ಸಂತರು ಪುಣ್ಯ ಭೂಮಿ ಜೇವರ್ಗಿ ಯಾಗಿದ್ದು, ಚರಚಕ್ರವರ್ತಿ ಶ್ರೀ ಷಣ್ಮುಖ ಶಿವಯೋಗಿಗಳ ಕರ್ಮ ಭೂಮಿ ಜೇವರ್ಗಿ ಯಾಗಿದೆ. ಅವರ ವಚನಗಳನ್ನು ಮೈಗೂಡಿಸಿಕೊಂಡು ಪ್ರತಿಯೊಬ್ಬರು ಮುಂದೆ ಬರಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಸವಕೇಂದ್ರದ ತಾಲೂಕು ಘಟಕದ ಅಧ್ಯಕ್ಷ ಶರಣಬಸವ ಕಲ್ಲಾ, ಮಹಾಂತೇಶ ಸಾಹು ಹರವಾಳ, ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶಿವಣ್ಣಗೌಡ ಕಲ್ಲಹಂಗರಗಿ ಅಧ್ಯಕ್ಷತೆ ವಹಿಸಿದ್ದರು. ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಸುನಂದಾ ಕಲ್ಲಾ, ಪ್ರಾಥಮಿಕ ಶಾಲೆಯ ಮುಖ್ಯ ಗುರು ಜಗನ್ನಾಥ ಇಮ್ಮಣ್ಣಿ, ಈರಣ್ಣ ಭೂತಪೂರ, ಮಲ್ಲಿನಾಥ ಕಡ್ಲಿ ಅವರಾದ, ಮಲ್ಲಪ್ಪ ನಿಂಬರಗಿ, ನಿಂಗಣ್ಣ ಹಳಿಮನಿ, ರಾಮಣ್ಣ ತೊನಸನಳ್ಳಿ, ಲಿಂಗರಾಜ ಹಂಚಿನಾಳ, ಚಂದ್ರಕಾಂತ ಕುಲಕರ್ಣಿ, ಪರಸಪ್ಪ ತಳವಾರ, ಸೀತಾ ಗೌಡ್ರ, ಸಾವೀತ್ರಿ ಪಾಟೀಲ್, ವಿಜಯಕುಮಾರ ಚಟ್ಟಿ, ವಿರೇಶ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.