ಸಂಶೋಧನೆಯಿಂದ ಮೂಲಭೂತ ಸಮಸ್ಯೆ ಪರಿಹರಿಸಿ: ಪ್ರೊ.ಎನ್.ಎಮ್.ಬುಜರ್ಕೆ

| Published : Feb 05 2024, 01:51 AM IST

ಸಂಶೋಧನೆಯಿಂದ ಮೂಲಭೂತ ಸಮಸ್ಯೆ ಪರಿಹರಿಸಿ: ಪ್ರೊ.ಎನ್.ಎಮ್.ಬುಜರ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್ ನಗರದ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗಣಿತ ವಿಭಾಗದಿಂದ ಕಾರ್ಯಾಗಾರ ಜರುಗಿತು.

ಬೀದರ್:

ಸಂಶೋಧನೆ ಮಾಡಿದರೆ ಯಾವುದೇ ಕ್ಷೇತ್ರವಿರಲಿ, ಆ ಕ್ಷೇತ್ರದಲ್ಲಿನ ಮೂಲಭೂತ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕೆಂದು ಇನ್ಸಾದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎನ್.ಎಮ್.ಬುಜರ್ಕೆ ನುಡಿದರು.

ನಗರದ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗಣಿತ ವಿಭಾಗದಿಂದ ಫೆ.1ರಂದು ಏರ್ಪಡಿಸಿದ ಇನಾಗುರಲ್ ಫಂಕ್ಷನ್ ಆಫ್ ಇನ್ಶಾ ಲೆಕ್ಚರ್ ಹಾಗೂ ಬೆಂಗಳೂರಿನ ನ್ಯಾಷನಲ್ ಸೈನ್ಸ್ ಅಕಾಡೆಮಿ ಇಂಡಿಯನ್ ಇನ್ಸಿಟ್ಯೂಷನ್ ಆಫ್ ಸೈನ್ಸ್ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ವಿಷಯದ ಬಗ್ಗೆ ನಮ್ಮ ತಿಳುವಳಿಕೆ ವಿಸ್ತರಿಸಬೇಕು, ಆಧುನಿಕ ಸಮಾಜದಲ್ಲಿ ಶಿಕ್ಷಕರು ಬೋಧನೆ ಮತ್ತು ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮಾರ್ಗದರ್ಶಿ ದೀಪವಾಗಬೇಕು. ಮುಂದಿನ ದಿನಗಳಲ್ಲಿ ಸಂಶೋಧನೆಯಲ್ಲಿ ಹೆಚ್ಚು ತೊಡಗಿರುವ ರಾಷ್ಟ್ರ ಜಗತ್ತನ್ನು ಆಳುತ್ತದೆ ಎಂದು ಬುಜರ್ಕೆ ನುಡಿದರು.

ನಿವೃತ್ತ ಉಪ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ.ಶೆಟಕಾರ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಹಂಗರಗಿ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಪ್ರೊ.ರವಿ ಸುರ್ಯಾನ್, ಪ್ರೊ.ಕೆ.ಗೀತಾರಾಣಿ, ಪ್ರೊ.ಎನ್.ಸಂದೀಪ, ಕಾಲೇಜಿನ ಐಕ್ಯೂಎಸಿ ಸಂಯೋಜಕ ರಾಜಮೋಹನ ಪರದೇಶಿ, ಪ್ರೊ.ಅನೀಲಕುಮಾರ ಚಿಕ್ಕಮಣ್ಣೂರ, ಡಾ.ವಿನೋದ ಕಾಳೇಕರ, ಪದ್ಮೀನಿ ಕಾಜಿ ಮತ್ತಿತರರಿದ್ದರು.