ಇಂದಿನಿಂದ ಆನ್‌ಲೈನಲ್ಲೇ ಬಿಡಿಎ ಆಸ್ತಿ ತೆರಿಗೆ ಪಾವತಿಗೆ ಅವಕಾಶ

| Published : May 10 2024, 01:33 AM IST

ಇಂದಿನಿಂದ ಆನ್‌ಲೈನಲ್ಲೇ ಬಿಡಿಎ ಆಸ್ತಿ ತೆರಿಗೆ ಪಾವತಿಗೆ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಬಿಡಿಎ ಆಸ್ತಿ ತೆರಿಗೆ ಆನ್‌ಲೈನ್‌ ವ್ಯವಸ್ಥೆ ಸುಧಾರಿಸಿದೆ. ಶುಕ್ರವಾರದಿಂದಲೇ ವೆಬ್‌ನಲ್ಲಿ ಹಣ ಪಾವತಿಸಬಹುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆಸ್ತಿ ತೆರಿಗೆಯನ್ನು ಪಾವತಿಸಲು ಕೊಂಡಿಯನ್ನು(ಲಿಂಕ್‌) ತೆರೆಯಲಾಗಿದ್ದು, ಇಂದಿನಿಂದಲೇ ತೆರಿಗೆದಾರರು ಆಸ್ತಿ ತೆರಿಗೆಯನ್ನು ಆನ್‌ಲೈನ್‌ ಮೂಲಕ ಪಾವತಿಸಬಹುದಾಗಿದೆ.

ಪ್ರತಿ ವರ್ಷ ಮಾರ್ಚ್‌, ಏಪ್ರಿಲ್‌ ತಿಂಗಳಲ್ಲೇ ಆಸ್ತಿ ತೆರಿಗೆ ಪಾವತಿಸಲು ಬಿಡಿಎ ವೆಬ್‌ಸೈಟ್‌ನಲ್ಲಿ ಅವಕಾಶ ಮಾಡಿಕೊಡುತ್ತಿತ್ತು. ಆದರೆ, ಈ ಬಾರಿ ತಾಂತ್ರಿಕ ತೊಂದರೆ ಮತ್ತು ಚುನಾವಣೆ ಹಿನ್ನೆಲೆಯಲ್ಲಿ ತೆರಿಗೆದಾರರಿಗೆ ಆಸ್ತಿ ತೆರಿಗೆ ಪಾವತಿಸುವ ಲಿಂಕ್‌ ನೀಡಿರಲಿಲ್ಲ.

ಗುರುವಾರ ಬಿಡಿಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ https://app.bda.karnataka.gov.in/bdaptax-citizen/login ಆನ್‌ಲೈನ್‌ ಕೊಂಡಿಯನ್ನು(ಲಿಂಕ್‌) ನೀಡಿದ್ದು, ತೆರಿಗೆದಾರರು ತಮ್ಮ ಆಸ್ತಿ ತೆರಿಗೆ ಪಾವತಿಸಬಹುದಾಗಿದೆ.

ಈ ಹಿಂದೆ ಮಾರ್ಚ್-ಏಪ್ರಿಲ್‍ನಲ್ಲೇ ವಾರ್ಷಿಕ ತೆರಿಗೆ ಪಾವತಿಸಲು ದರ ನಿಗದಿ ಮಾಡಲಾಗುತ್ತಿತ್ತು. ಆದರೆ ನವೀಕೃತ ಬಿಡಿಎ ವೆಬ್‍ಸೈಟ್‍ನಲ್ಲಿ ಇದರ ಬಗ್ಗೆ ಮಾಹಿತಿ ಇರಲಿಲ್ಲ. ಇದರಿಂದ ತೆರಿಗೆದಾರರಿಗೂ ಸಮಸ್ಯೆಯುಂಟಾಗಿತ್ತು. ವೆಬ್‌ಸೈಟ್‌ನಲ್ಲಿ ಇಂತಹ ತಾಂತ್ರಿಕ ಸಮಸ್ಯೆ ಇದ್ದರೂ ಈವರೆಗೂ ಬಿಡಿಎ ತೆರಿಗೆದಾರರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರಿಂದಾಗಿ ತೆರಿಗೆದಾರರು ಆಸ್ತಿ ತೆರಿಗೆ ಪಾವತಿಗಾಗಿ ಬಿಡಿಎ ಕಚೇರಿ, ಬೆಂಗಳೂರು ಒನ್‌ ಕಚೇರಿಗಳಿಗೆ ನಿತ್ಯವೂ ಅಲೆದಾಡುವಂತಾಗಿತ್ತು.