ಕೌಟುಂಬಿಕ ದೌರ್ಜನ್ಯದ ಕಾಯ್ದೆ ಅರಿವಿರಲಿ: ನ್ಯಾಯಾಧೀಶೆ ರೇಷ್ಮಾ

| Published : Feb 23 2024, 01:46 AM IST

ಕೌಟುಂಬಿಕ ದೌರ್ಜನ್ಯದ ಕಾಯ್ದೆ ಅರಿವಿರಲಿ: ನ್ಯಾಯಾಧೀಶೆ ರೇಷ್ಮಾ
Share this Article
  • FB
  • TW
  • Linkdin
  • Email

ಸಾರಾಂಶ

ಶೇಕಡಾ 40ರಿಂದ 50ರಷ್ಟು ಮಹಿಳೆಯರಿಗೆ ಕೋರ್ಟ್‌ ಮುಖಾಂತರ ಪರಿಹಾರ ತೆಗೆದುಕೊಳ್ಳಬೇಕೆಂಬ ಪರಿಜ್ಞಾನವು ಇರುವುದಿಲ್ಲ.

ಕಾರವಾರ:

ಕೌಟುಂಬಿಕ ದೌರ್ಜನ್ಯ ಕಾಯ್ದೆ ಸಿವ್ಹಿಲ್ ಸ್ವರೂಪದ ಕಾನೂನು ಆಗಿದ್ದು, ಮಹಿಳಾ ಸಬಲೀಕರಣಕ್ಕೆ ದೊಡ್ಡ ಹೆಜ್ಜೆಯಾಗಿದೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ಮಹಿಳೆಯರು ಹಾಗೂ ಸಾರ್ವಜನಿಕರು ತಿಳಿದಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ರೇಷ್ಮಾ ಜೆ ರೊಡ್ರಿಗಸ್ ತಿಳಿಸಿದರು.ಅವರು ಗುರುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ತ್ರೀಶಕ್ತಿ ಸಭಾಭವನದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಅನುಷ್ಠಾನದಲ್ಲಿ ಭಾಗಿದಾರ ಇಲಾಖೆಗಳ ಪಾತ್ರ ಕುರಿತು ಎರಡು ದಿನಗಳ ಓರಿಯಂಟೇಷನ್ ತರಬೇತಿ ಉದ್ಘಾಟಿಸಿ ಮಾತನಾಡಿದರು.ಪತಿ-ಪತ್ನಿಯರ ಮಧ್ಯದಲ್ಲಿ ಅಷ್ಟೇ ಅಲ್ಲದೆ ಗಂಡ, ಅತ್ತೆ, ನಾದಿನಿ ಹಾಗೂ ಇನ್ನಿತರರಿಗೂ ಈ ಕಾಯ್ದೆ ವಿಸ್ತರಣೆಯಾಗುತ್ತದೆ ಎಂದರು.ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ದೇವಿದಾಸ ರಾಯ್ಕರ್, ಹೆಚ್ಚಿನ ಪ್ರಕರಣಗಳಲ್ಲಿ ತಾಯಂದಿರೇ ನೊಂದ ಮಹಿಳೆಯಾಗಿರುತ್ತಾರೆ. ಶೇಕಡಾ 40ರಿಂದ 50ರಷ್ಟು ಮಹಿಳೆಯರಿಗೆ ಕೋರ್ಟ್‌ ಮುಖಾಂತರ ಪರಿಹಾರ ತೆಗೆದುಕೊಳ್ಳಬೇಕೆಂಬ ಪರಿಜ್ಞಾನವು ಇರುವುದಿಲ್ಲ ಎಂದು ಹೇಳಿದರು.ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಅನ್ನಪೂರ್ಣ ವಸ್ತ್ರದ ಮಾತನಾಡಿ, ಕೌಟುಂಬಿಕ ಸಮಸ್ಯೆಯ ಪ್ರಕರಣಗಳು ದಾಖಲಿಸಿದಾಗ ಅದಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳು, ಕೋರ್ಟಿಗೆ ದಾಖಲಿಸಿದ ನಂತರ ವಿಫಲವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ ಎಂದರು..ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕುನೂರ ಮಾತನಾಡಿ, ಲಿಂಗ ತಾರತಮ್ಯ ಹೊಗಲಾಡಿಸಬೇಕು ಮತ್ತು ಮಹಿಳಾ ಉದ್ಯೋಗಕ್ಕೆ ಹೆಚ್ಚಿನ ಬೆಂಬಲ ನೀಡಬೇಕು ಎಂದರು.ಡಿವೈಎಸ್ಪಿ ವೆಲೆಂಟಿನ್ ಡಿಸೋಜಾ ಹಾಗೂ ವಿವಿಧ ಭಾಗೀದಾರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲಾ ನಿರೂಪಣಾಧಿಕಾರಿ ವಿರೂಪಾಕ್ಷಗೌಡ ಹಾಗೂ ಹಿರಿಯ ಸಹಾಯಕ ನಿರ್ದೇಶಕಿ ಲಕ್ಷ್ಮೀದೇವಿ ಸ್ವಾಗತಿಸಿದರು.