ಕ್ಯಾನ್ಸರ್‌ ರೋಗದ ಬಗ್ಗೆ ಎಚ್ಚರಿಕೆ ವಹಿಸಿ: ಡಾ.ಶೋಭಾ ಶ್ಯಾವಿ

| Published : Mar 10 2024, 01:45 AM IST

ಕ್ಯಾನ್ಸರ್‌ ರೋಗದ ಬಗ್ಗೆ ಎಚ್ಚರಿಕೆ ವಹಿಸಿ: ಡಾ.ಶೋಭಾ ಶ್ಯಾವಿ
Share this Article
  • FB
  • TW
  • Linkdin
  • Email

ಸಾರಾಂಶ

ಇಳಕಲ್ಲ ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಇಳಕಲ್ಲ ಲಯನ್ಸ್‌ ಸಂಸ್ಥೆ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ತ್ರೀರೋಗ ತಜ್ಞೆ ಡಾ.ಶೋಭಾ ಶ್ಯಾವಿ ಮಾತನಾಡಿ, ವಿದ್ಯಾರ್ಥಿನಿಯರು ಕ್ಯಾನ್ಸರ್‌ ರೋಗದ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು. ರಾಸಾಯನಿಕ ಮಿಶ್ರಿತ ರಸ್ತೆ ಬದಿಯ ಆಹಾರ ಸೇವಿಸಬಾರದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ವಿದ್ಯಾರ್ಥಿನಿಯರು ಕ್ಯಾನ್ಸರ್‌ ರೋಗದ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು. ರಾಸಾಯನಿಕ ಮಿಶ್ರಿತ ರಸ್ತೆ ಬದಿಯ ಆಹಾರ ಸೇವಿಸಬಾರದು ಎಂದು ನಗರದ ಶ್ಯಾವಿ ಸಂಜೀವಿನಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಶೋಭಾ ಶ್ಯಾವಿ ತಿಳಿಸಿದರು.

ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಇಳಕಲ್ಲ ಲಯನ್ಸ್‌ ಸಂಸ್ಥೆ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಯಾವುದೇ ರೋಗಗಳು ಉಲ್ಬಣಗೊಳ್ಳುವುದಕ್ಕಿಂತ ಮುಂಚೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. ರೋಗಗಳು ಪ್ರಾಥಮಿಕ ಹಂತದಲ್ಲಿದ್ದಾಗಲೇ ಚಿಕಿತ್ಸೆ ನೀಡುವುದು ಸುಲಭ. ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಮಕ್ಕಳಿಗೆ ತಿಳಿಸಿ, ಕ್ಯಾನ್ಸರ್ ಕುರಿತು ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜಕುಮರ ಕಾಟ್ವಾ ಮಾತನಾಡಿದರು. ಲಯನ್ಸ್ ಕ್ಲಬ್‌ ಸದಸ್ಯರಾದ ಡಾ.ವಿಠ್ಠಲ ಶ್ಯಾವಿ, ಡಾ.ಸಂತೋಷ ಪೂಜಾರ, ಸಿ.ಎಸ್. ಜುಂಜಾ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಗೋಟೂರ ವೇದಿಕೆ ಮೇಲೆ ಇದ್ದರು.

ಲಯನ್ಸ್ ಕ್ಲಬ್‌ ಸದಸ್ಯರಾದ ರವಿಶಂಕರ ಬಸವಾ, ನರಸಿಂಹ ಸಾಕಾ, ಏಕನಾಥ್ ರಾಜೋಳ್ಳಿ, ಪ್ರಕಾಶ ಕರಡಿ, ಡಾ.ಟಿಪ್ಪು ಭಂಡಾರಿ, ನಾಗರಾಜ ಸಜ್ಜನ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲಯನ್ಸ್‌ ಸಂಸ್ಥೆ ಹಾಘೂ ಬಾಲಕಿಯರ ಪ್ರೌಢಶಾಲೆಯವರು ಡಾ.ಶ್ಯಾವಿ ದಂಪತಿಯನ್ನು ಗೌರವಿಸಿ ಸತ್ಕರಿಸಿದರು.