ಸಾರಾಂಶ
ಐತಿಹಾಸಿಕತೆ ಹೊಂದಿರುವ ಹಾಗೂ ನಾಡಪ್ರಭು ಕೆಂಪೇಗೌಡರ ಕಾಲದಲ್ಲೇ ರಾಮದುರ್ಗ ಎಂಬ ಹೆಸರಿನಲ್ಲಿ ಆಡಳಿತ ನಡೆಸಿದ ಶ್ರೀರಾಮನ ಬೆಟ್ಟದಿಂದ ಹೆಸರುವಾಸಿ ಆಗಿರುವ ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಸರ್ಕಾರ ಕೈ ಹಾಕಿರುವುದು ತಪ್ಪು.
ಧಾರವಾಡ:
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುತ್ತಿರುವ ಕ್ರಮವನ್ನು ಶ್ರೀರಾಮಸೇನೆ ತೀವ್ರವಾಗಿ ಖಂಡಿಸಿದ್ದು, ಒಂದು ವೇಳೆ ಈ ಪ್ರಯತ್ನ ಮಾಡಿದರೆ ಹುಷಾರ್ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಸೇನೆಯ ಪದಾಧಿಕಾರಿಗಳು, ಐತಿಹಾಸಿಕತೆ ಹೊಂದಿರುವ ಹಾಗೂ ನಾಡಪ್ರಭು ಕೆಂಪೇಗೌಡರ ಕಾಲದಲ್ಲೇ ರಾಮದುರ್ಗ ಎಂಬ ಹೆಸರಿನಲ್ಲಿ ಆಡಳಿತ ನಡೆಸಿದ ಶ್ರೀರಾಮನ ಬೆಟ್ಟದಿಂದ ಹೆಸರುವಾಸಿ ಆಗಿರುವ ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಸರ್ಕಾರ ಕೈ ಹಾಕಿರುವುದು ತಪ್ಪು. ಇದು ಸಮಾಜದ ಸ್ವಾಸ್ಥ್ಯ ಕೆದಕುವ ದುಸ್ಸಾಹಸವೂ ಆಗಿದೆ ಎಂದು ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
ಸರ್ಕಾರ ಎಚ್ಚೆತ್ತುಕೊಂಡು ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯ ಕ್ರಮ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಯಾರದೋ ಸ್ವ-ಹಿತಾಸಕ್ತಿಗಾಗಿ ಐತಿಹಾಸಿಕ ಹಿನ್ನೆಲೆ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಿದರೇ ಶ್ರೀರಾಮಸೇನೆ ಸುಮ್ಮನೇ ಇರುವುದಿಲ್ಲ ಎಂದು ಎಚ್ಚರಿಸಿದರು.ಶ್ರೀರಾಮಸೇನೆಯ ತಾಲೂಕು ಅಧ್ಯಕ್ಷ ಮೈಲಾರ ಗುಡ್ಡಪ್ಪನವರ, ಬಸವರಾಜ ದುರಗದ, ಪಾಂಡುರಂಗ ಎಮೋಜಿ, ಸೋಮು ಕಮತಗಿ, ನಿಜಗುಣಿ ಅಂಗಡಿ ಇದ್ದರು.