ಮತ್ತೆ ಮೋದಿ ಪ್ರಧಾನಿಯಾಗಿಸಲು ದೃಢಸಂಕಲ್ಪ ಮಾಡಿ

| Published : Jan 15 2024, 01:47 AM IST

ಮತ್ತೆ ಮೋದಿ ಪ್ರಧಾನಿಯಾಗಿಸಲು ದೃಢಸಂಕಲ್ಪ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಳಗಾವಿ ಗ್ರಾಮೀಣ, ದಕ್ಷಿಣ ಹಾಗೂ ಉತ್ತರ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶದಲ್ಲಿ ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಕರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ಕೊಟ್ಟರೂ ಗೆಲ್ಲಿಸಿ, ನರೇಂದ್ರ ಮೋದಿ ಅವರನ್ನೇ ಮತ್ತೆ ಪ್ರಧಾನಿಯಾಗಿಸಲು ಕಾರ್ಯಕರ್ತರು ದೃಢಸಂಕಲ್ಪ ಮಾಡಬೇಕು ಎಂದು ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.

ಇಲ್ಲಿನ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಳಗಾವಿ ಗ್ರಾಮೀಣ, ದಕ್ಷಿಣ ಹಾಗೂ ಉತ್ತರ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ವಿಚಾರವಾಗಿ ಕಾಂಗ್ರೆಸ್‌ನವರು ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕೋರಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಖಂಡರಲ್ಲಿನ ಕಿತ್ತಾಟದಿಂದ ಬಿಜೆಪಿ ಸೋಲಬೇಕಾಯಿತು. ಪಕ್ಷದಲ್ಲಿ ಇದ್ದುಕೊಂಡು ಕುತಂತ್ರ ಮಾಡಿದವರಿಗೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರೇ ಪಾಠ ಕಲಿಸಬೇಕು ಎಂದರು.

ರಾಮ ಒಂದು ಜಾತಿಗೆ ಸೀಮಿತವಲ್ಲ. ಆತ ಈ ಜಗತ್ತು ಕಂಡ ಮಹಾನ್‌ ಪುರುಷ. ಆತನ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮೂರು ವಿಧಾನಸಭೆ ಕ್ಷೇತ್ರಗಳ ಕಾರ್ಯಕರ್ತರಿಗೆ ಸಂಜಯ ಪಾಟೀಲ ವತಿಯಿಂದ ಹೆಲ್ಮೆಟ್‌ ವಿತರಿಸಲಾಯಿತು. ಸಂಸದೆ ಮಂಗಲ ಅಂಗಡಿ, ಮೇಯರ್‌ ಶೋಭಾ ಸೋಮನಾಚೆ, ಉಪಮೇಯರ್‌ ರೇಷ್ಮಾ ಪಾಟೀಲ, ಪಕ್ಷದ ರಾಜ್ಯ ವಕ್ತಾರ ಎಂ.ಬಿ.ಝಿರಲಿ, ಅನಿಲ ಬೆನಕೆ, ಉಜ್ವಲಾ ಬಡವಣ್ಣಾಚೆ, ಶಂಕರಗೌಡ ಪಾಟೀಲ, ಆರ್‌.ಎಸ್‌.ಮುತಾಲಿಕ, ಮುರುಘೇಂದ್ರಗೌಡ ಪಾಟೀಲ, ಸುಭಾಸ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ, ಎಫ್‌.ಎಸ್‌.ಸಿದ್ಧನಗೌಡರ ಇತರರಿದ್ದರು.