ಇತ್ತೀಚೆಗೆ ರಾಜಸ್ತಾನದ ನೀಮ್ರಾಣದಲ್ಲಿರುವ ಹಾಟ್ ಮಾಂಡೆ ರಾಜ್‌ಪುತನ ಪ್ಯಾಲೇಸ್‌ನಲ್ಲಿ ನಡೆದ ‘ಮಿಸೆಸ್ ಇಂಡಿಯಾ ವರ್ಲ್ಡ್‌ವೈಡ್ ಸೀಸನ್ ೧೫’ ಸ್ಪರ್ಧೆಯಲ್ಲಿ ಒಮಾನ್ ದೇಶವನ್ನು ಪ್ರತಿನಿಧಿಸಿದ, ಮೂಲತಃ ಮಂಗಳೂರಿನ ಶ್ವೇತಾ ಕೋಟ್ಯಾನ್ ಅವರು ಎಲಿಮೆಂಟ್ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.
ಮಂಗಳೂರು: ಇತ್ತೀಚೆಗೆ ರಾಜಸ್ತಾನದ ನೀಮ್ರಾಣದಲ್ಲಿರುವ ಹಾಟ್ ಮಾಂಡೆ ರಾಜ್‌ಪುತನ ಪ್ಯಾಲೇಸ್‌ನಲ್ಲಿ ನಡೆದ ‘ಮಿಸೆಸ್ ಇಂಡಿಯಾ ವರ್ಲ್ಡ್‌ವೈಡ್ ಸೀಸನ್ ೧೫’ ಸ್ಪರ್ಧೆಯಲ್ಲಿ ಒಮಾನ್ ದೇಶವನ್ನು ಪ್ರತಿನಿಧಿಸಿದ, ಮೂಲತಃ ಮಂಗಳೂರಿನ ಶ್ವೇತಾ ಕೋಟ್ಯಾನ್ ಅವರು ಎಲಿಮೆಂಟ್ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ವೇತಾ ಕೋಟ್ಯಾನ್, ಪ್ರಶಸ್ತಿ ಗೆದ್ದಿರುವುದು ತುಂಬಾನೆ ಖುಷಿಯಾಗಿದೆ. ಹಲವು ಸ್ಪರ್ಧಿಗಳ ನಡುವೆ ಪೈಪೋಟಿಯ ನಡುವೆಯೂ ಪ್ರಶಸ್ತಿ ನನ್ನ ಪಾಲಾಗಿರುವುದು ಸಂತಸದ ಕ್ಷಣ. ಈ ಗೆಲುವು ಕೇವಲ ಒಂದು ಪ್ರಶಸ್ತಿ ಅಥವಾ ಕಿರೀಟವಲ್ಲ. ಕುಟುಂಬ, ವೃತ್ತಿ ಮತ್ತು ವೈಯಕ್ತಿಕ ಜವಾಬ್ದಾರಿಗಳನ್ನು ಸಮತೋಲದಲ್ಲಿಟ್ಟುಕೊಂಡು ಕನಸುಗಳನ್ನು ಬೆನ್ನಟ್ಟುವ ಆತ್ಮವಿಶ್ವಾಸ ಸ್ವಯಂ ಬೆಳವಣಿಗೆ ಹಾಗೂ ಹೋರಾಟದ ಸಂಕೇತ ಎಂದರು.ಪ್ರಮುಖರಾದ ಶ್ರೀಲಕ್ಷ್ಮೀ, ಸಿದ್ಧಾರ್ಥ್ ಶೆಟ್ಟಿ, ಪ್ರಜ್ವಲ್, ಹರೀಶ್ ಶೆಟ್ಟಿ ಇದ್ದರು.