ನಾವು ಸಾಧಿಸಿದ ಪ್ರತಿ ಹೆಜ್ಜೆಯ ಹಿಂದೆ ಒಬ್ಬ ಗುರುವಿದ್ದಾನೆ. ಅಜ್ಞಾನವನ್ನು ಓಡಿಸಿ ಜ್ಞಾನವನ್ನು ಬೆಳಗುವ ಗುರುವಿಗೆ ಗುಲಾಮನಾದರೆ ಸಾಕಷ್ಟು ವಿದ್ಯೆ ಮತ್ತು ಜ್ಞಾನ ದೊರೆಯುವುದಲ್ಲದೆ ಅವರ ಆಶೀರ್ವಾದದಿಂದ ಜೀವನದಲ್ಲಿ ಶ್ರೇಷ್ಠ ಸ್ಥಾನಮಾನವನ್ನು ಗಳಿಸಲು ಸಾಧ್ಯ. ಅಂತಹವರಿಗೆ ನಾವು ಮನದಿಂದ ಕೃತಜ್ಞತೆ ವ್ಯಕ್ತಪಡಿಸುವ ದಿನ ಎಂದು ದೊಡ್ಡಣ್ಣ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಿ.ನಾರಾಯಣಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ನಾವು ಸಾಧಿಸಿದ ಪ್ರತಿ ಹೆಜ್ಜೆಯ ಹಿಂದೆ ಒಬ್ಬ ಗುರುವಿದ್ದಾನೆ. ಅಜ್ಞಾನವನ್ನು ಓಡಿಸಿ ಜ್ಞಾನವನ್ನು ಬೆಳಗುವ ಗುರುವಿಗೆ ಗುಲಾಮನಾದರೆ ಸಾಕಷ್ಟು ವಿದ್ಯೆ ಮತ್ತು ಜ್ಞಾನ ದೊರೆಯುವುದಲ್ಲದೆ ಅವರ ಆಶೀರ್ವಾದದಿಂದ ಜೀವನದಲ್ಲಿ ಶ್ರೇಷ್ಠ ಸ್ಥಾನಮಾನವನ್ನು ಗಳಿಸಲು ಸಾಧ್ಯ. ಅಂತಹವರಿಗೆ ನಾವು ಮನದಿಂದ ಕೃತಜ್ಞತೆ ವ್ಯಕ್ತಪಡಿಸುವ ದಿನ ಎಂದು ದೊಡ್ಡಣ್ಣ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಿ.ನಾರಾಯಣಪ್ಪ ಹೇಳಿದರು.ಹೆಗ್ಗನಹಳ್ಳಿಯ ದೊಡ್ಡಣ್ಣ ವಿದ್ಯಾಸಂಸ್ಥೆ, ದೀಪಶ್ರೀ ನರ್ಸರಿ ಮತ್ತು ಪ್ರಾಥಮಿಕ ಪ್ರೌಢಶಾಲೆಯ 1999 -2000 ಸಾಲಿನ 10 ನೇ ತರಗತಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಗುರುವಂದನ ಸಮಾರಂಭ ಹಾಗೂ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಪೀಣ್ಯದ ರೋಟರಿ ಬೆಂಗಳೂರು ಉದ್ಯೋಗದ ಆಡಿಟೋರಿಯಂನಲ್ಲಿ ಸುಮಾರು 50ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಹಳೆಯ ವಿದ್ಯಾರ್ಥಿಗಳಾದ ಯತೀಶ್, ಎಲ್ಲೇಶ್, ವಿಜಯ್ ಕುಮಾರ್, ಚೈತ್ರಾ ಶಿಲ್ಪ ಅವರ ನೇತೃತ್ವದಲ್ಲಿ ನಡೆದ ಸಮ್ಮಿಲನದಲ್ಲಿ ಅಕ್ಷರ ಕಲಿಸಿದ ಗುರುಗಳಿಗೆ ಸನ್ಮಾನಿಸಿ ಗೌರವಿಸಿದರು.ದೊಡ್ಡಣ್ಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಲಕ್ಷ್ಮೀ ವೆಂಕಟೇಶ್ವರ ಸಾಯಿ ಬಾಬಾ ಟ್ರಸ್ಟ್ ಧರ್ಮದರ್ಶಿ ಎಸ್.ಎನ್. ಮೋಹನ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಹಳೇ ವಿದ್ಯಾರ್ಥಿಗಳ ಒಗ್ಗೂಡುವಿಕೆಯಿಂದ ಮತ್ತಷ್ಟು ಶಾಲೆಗೆ ಒಳ್ಳೆಯ ಕೆಲಸ ಮಾಡಬೇಕಿದೆ. ದೊಡ್ಡಣ್ಣ ಶಾಲೆ ಆರಂಭದಿಂದಲೂ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬರುತ್ತಿದ್ದು ಈ ಶಾಲೆಯಲ್ಲಿ ಓದಿ ಸಬಲರಾದವರು ಸಹಾಯ ಮಾಡಿದರೆ ಅದು ಸಾರ್ಥಕವಾಗುತ್ತದೆ ಎಂದರು. ಗುರುವಂದನೆ ಸ್ವೀಕರಿಸಿದ ದೊಡ್ಡಣ್ಣ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ನಾಗರಾಜು ಮಾತನಾಡಿ ಕಲ್ಲಿನಲ್ಲಿಯೂ ಚಿಗುರನ್ನು ಬೆಳೆಸುವ ಶಕ್ತಿ ಇರುವುದು ಗುರುಗಳಿಗೆ ಮಾತ್ರ. ವಿದ್ಯಾರ್ಥಿಗಳನ್ನು ಪ್ರತಿಹಂತದಲ್ಲೂ ತಿದ್ದಿತೀಡಿ ಉತ್ತಮ ಪ್ರಜೆ ಮಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. ಅಂತಹ ಗುರುಗಳಿಗೆ 25 ವರ್ಷದ ನಂತರವೂ ನಮ್ಮನ್ನು ಗುರುತಿಸಿ ಸನ್ಮಾನಿಸಿ ಗೌರವ ನೀಡುತ್ತಿರುವುದು ಸಂತಸದ ವಿಷಯ ಎಂದರು.ಕಾರ್ಯಕ್ರಮದಲ್ಲಿ ದೊಡ್ಡಣ್ಣ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಿ. ನಾರಾಯಣಪ್ಪ ಹಾಗೂ ಕಾರ್ಯದರ್ಶಿ ಹಾಗೂ ಲಕ್ಷ್ಮೀ ವೆಂಕಟೇಶ್ವರ ಸಾಯಿ ಬಾಬಾ ಟ್ರಸ್ಟ್ ಧರ್ಮದರ್ಶಿ ಎಸ್.ಎನ್. ಮೋಹನ್ ಕುಮಾರ್, ಮುಖ್ಯೋಪಾಧ್ಯಾಯ ಪರ್ವತಯ್ಯ, ನಾಗರಾಜು, ಶಿಕ್ಷಕರಾದ ಲೋಕೇಶಪ್ಪ, ಬಸವರಾಜು,ಪುಟ್ಟೇಗೌಡ ಮತ್ತಿತರರು ಇದ್ದರು.