ಸಾರಾಂಶ
- ಕದಳಿ ಮಹೋತ್ಸವ, ಮುಳ್ಳುಗದ್ದುಗೆ ಉತ್ಸವ, ಕುಸ್ತಿ ಪಂದ್ಯಾವಳಿ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ದೊಡ್ಡಕೇರಿಯಲ್ಲಿ ಡಿ.8ರಂದು ಶ್ರೀ ಬೀರಲಿಂಗೇಶ್ವರ ಕಾರ್ತಿಕೋತ್ಸವ ಹಾಗೂ ಕದಳಿ ಮಹೋತ್ಸವ, ಡಿ.9ರಂದು ಬೀರಪ್ಪ ದೇವರ ಪವಾಡ ಕಾರ್ಯಕ್ರಮ, ಡಿ.10 ರಂದು ಬೀರಪ್ಪ ಮುಳ್ಳುಗದ್ದುಗೆ ಉತ್ಸವ ಹಾಗೂ ಕೆಂಡದರ್ಚನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಯಮಾನ್ ಎಚ್.ಬಿ. ಗಿಡ್ಡಪ್ಪ ಹೇಳಿದರು.ಶುಕ್ರವಾರ ದೇವಸ್ಥಾನ ಆವರಣದಲ್ಲಿ ಕಾರ್ಯಕ್ರಮಗಳ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಡಿ.10ರಂದು ಬೆಳಗ್ಗೆ ಮುಳ್ಳುಗದ್ದುಗೆ ಉತ್ಸವ ಹಾಗೂ ಮೊಳೆ ಪಲ್ಲಕ್ಕಿ ಉತ್ಸವಗಳು, ಕೆಂಡ ಹಾಯುವ ಕಾರ್ಯಕ್ರಮಗಳು ನಡೆಯಲಿವೆ. ಅನಂತರ ದೇವರ ಪಲ್ಲಕ್ಕಿಗಳ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ಪ್ರಸಾದ ವಿತರಣೆಯು ದೊಡ್ಡಕೇರಿಯ ದೇವಸ್ಥಾನ ಆವರಣದಲ್ಲಿ ಸಂಪನ್ನಗೊಳ್ಳಲಿದೆ ಎಂದರು.
ಕುರುಬ ಸಮಾಜದ ಮುಖಂಡ ತೆಂಗಿನಮರದ ಮಾದಪ್ಪ ಮಾತನಾಡಿ, ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಲಭಾಗದ ಅಖಾಡದಲ್ಲಿ ಡಿ.11ರಿಂದ 13ರವರೆಗೆ ರಾಜ್ಯಮಟ್ಟದ ಬಯಲು ಖಾಟಾ ಜಂಗೀ ಕುಸ್ತಿಗಳು ಜರುಗಲಿವೆ. ರಾಜ್ಯದ ವಿವಿಧ ಭಾಗಗಳಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪೈಲ್ವಾನರು ಭಾಗವಹಿಸಲಿದ್ದಾರೆ. ಉತ್ತಮ ಕುಸ್ತಿಪಟುಗಳಿಗೆ ಬೆಳ್ಳಿಗದೆ, ₹15 ಸಾವಿರದಿಂದ ₹25 ಸಾವಿರದವರೆಗೆ ಹಾಗೂ ರಾಜ್ಯಮಟ್ಟದ ಕುಸ್ತಿ ಪೈಲ್ವಾನರಿಗೆ ಇನ್ನೂ ಹೆಚ್ಚಿನ ಮೊತ್ತದ ಬಹುಮಾನ ನಿಗದಿಪಡಿಸಲಾಗಿದೆ ಎಂದರು.ಮೊದಲನೇ ದಿನದ ಕುಸ್ತಿ ಪಂದ್ಯಾವಳಿಗಳು ಎಚ್.ಬಿ. ಗಿಡ್ಡಪ್ಪ ಅಧ್ಯಕ್ಷತೆ, 2ನೇ ದಿನದ ಪಂದ್ಯಾವಳಿಗಳು ತೆಂಗಿನಮರದ ಮಾದಪ್ಪ ಅಧ್ಯಕ್ಷತೆ, 3ನೇ ದಿನದ ಕುಸ್ತಿ ಪಂದ್ಯಾವಳಿಗಳು ಬೀರಲಿಂಗೇಶ್ವರ ದೇವರ ಟ್ರಸ್ಟ್ ಕಮಿಟಿ ವತಿಯಿಂದ ಜರುಗಲಿವೆ. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್, ತಾಪಂ ಇಒ, ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಹೊರಗಿನಿಂದ ಬಂದಂತಹ ಕುಸ್ತಿ ಪೈಲ್ವಾನರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರು ಕಾರ್ತಿಕೋತ್ಸವ ಹಾಗೂ ಕುಸ್ತಿ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭ ದೇವರ ಗಣಮಕ್ಕಳಾದ ಅಣ್ಣಪ್ಪ ಸ್ವಾಮಿ, ಪ್ರಭುಸ್ವಾಮಿ, ಬುದ್ದಿವಂತ ಪರಸಣ್ಣಾರ ನರಸಿಂಹಪ್ಪ, ಗೌಡರ ನರಸಪ್ಪ, ಮುಖಂಡರಾದ ಎಚ್.ಡಿ. ವಿಜೇಂದ್ರಪ್ಪ, ಬಿಸಾಟಿ ನಾಗರಾಜಪ್ಪ, ಇಟ್ಟಿಗೆ ಬಸಣ್ಣ, ಬೂದ್ಯಪ್ಪ, ಪೈಲ್ವಾನ ಸಿದ್ದಪ್ಪ, ಕಾಳಿಂಗಪ್ಪ, ಸತ್ತಿಗೆ ಮಂಜಪ್ಪ, ಸುರೇಶ್, ಕುಸ್ತಿ ಕಮಿಟಿ ಅಧ್ಯಕ್ಷರಾದ ಎಚ್.ಬಿ. ಅಣ್ಣಪ್ಪ, ಗೌರವಾಧ್ಯಕ್ಷರಾದ ಎನ್.ಕೆ. ಆಂಜನೇಯ, ಸಮಾಜದ ಮುಖಂಡರು ಹಾಜರಿದ್ದರು.
- - - -6ಎಚ್.ಎಲ್.ಐ1: