ಸಾರಾಂಶ
ಖಾನಾಪುರ ತಾಲೂಕಿನ ದಟ್ಟಾರಣ್ಯದಲ್ಲಿರುವ ಗ್ರಾಮಸ್ಥರು ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಚಟ್ಟದ ಮೇಲೆ 8 ಕಿಮೀ ಸಾಗಿಸಿರುವ ಘಟನೆ ನಡೆದಿದೆ.
ಬೆಳಗಾವಿ : ಖಾನಾಪುರ ತಾಲೂಕಿನ ದಟ್ಟಾರಣ್ಯದಲ್ಲಿರುವ ಗ್ರಾಮಸ್ಥರು ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳನ್ನು ಆಸ್ಪತ್ರಗೆ ಸಾಗಿಸಲು ಪರದಾಡುತ್ತಿದ್ದು, ತಾಲೂಕಿನ ಗುಂಜಿ ಹೋಬಳಿಯ ಕೊಂಗಳಾ ಗ್ರಾಮದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಚಟ್ಟದ ಮೇಲೆ 8 ಕಿಮೀ ಸಾಗಿಸಿರುವ ಘಟನೆ ನಡೆದಿದೆ.
ವೆಂಕಟ (52) ಎಂಬುವರು ಅನಾರೋಗ್ಯಿದಿಂದ ಬಳಲುತ್ತಿದ್ದರು. ಸುರಿಯುತ್ತಿರುವ ಮಳೆಯ ನಡುವೆಯೇ ಪಾಂಡ್ರಿ ನದಿ ಮೇಲೆ ಚಟ್ಟದ ಮೇಲೆ ರೋಗಿಯನ್ನು ಸಾಗಿಸಲಾಗಿದೆ. ಈ ಘಟನೆ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಅನಾರೋಗ್ಯದಿಂದ ಬಳುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಗ್ರಾಮಸ್ಥರು ಹೊತ್ತುಕೊಂಡು ಸಾಗಿಸಿರುವುದು ನಮ್ಮ ಗಮನಕ್ಕೆ ಬಂದಿದೆ.
ಇದು ಅರಣ್ಯ ಪ್ರದೇಶವಾಗಿದ್ದರಿಂದ ಇಲ್ಲಿ ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸ ಮಾಡಲು ಬಾರದು. ಕಾಡಂಚಿನಲ್ಲಿರುವ ಗ್ರಾಮಸ್ಥರಿಗೆ ಪುನರ್‌ವಸತಿ ಕಲ್ಪಿಸಲು ಜನರನ್ನು ಕಾಡಿನಿಂದ ಹೊರಗಡೆ ತರುವ ಕೆಲಸ ಮಾಡುತ್ತಿದ್ದೇವೆ. ಜನವಸತಿ ಕೇಂದ್ರಗಳಿಗೆ ಬಂದರೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದಿದ್ದಾರೆ.