ಸಾರಾಂಶ
ಒಟ್ಟು 2 ಸಾವಿರ ಕಿಮೀ ಪ್ರಯಾಣ ಕ್ರಮಿಸಬೇಕಾಗಿದೆ. ಪ್ರತಿನಿತ್ಯ 100 ಕಿ.ಮೀ ಸೈಕಲ್ ತುಳಿಯುತ್ತೇವೆ ಎನ್ನುತ್ತಾರೆ ಯುವಕರು.
ಬಳ್ಳಾರಿ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ದಯಾನಿಧಿ ಹಾಗೂ ಶರಣು ಎಂಬ ಇಬ್ಬರು ಯುವಕರು ಸೈಕಲ್ ಯಾತ್ರೆ ಕೈಗೊಂಡಿದ್ದು, ಶುಕ್ರವಾರ ಬಳ್ಳಾರಿ ಮೂಲಕ ತೆರಳಿದರು.
ಒಟ್ಟು 2 ಸಾವಿರ ಕಿಮೀ ಪ್ರಯಾಣ ಕ್ರಮಿಸಬೇಕಾಗಿದೆ. ಪ್ರತಿನಿತ್ಯ 100 ಕಿ.ಮೀ ಸೈಕಲ್ ತುಳಿಯುತ್ತೇವೆ. ಬೆಳಗಿನ ಜಾವವೇ ಪ್ರಯಾಣ ಶುರು ಮಾಡುತ್ತೇವೆ. ದಾರಿಯಲ್ಲಿ ಸಿಕ್ಕ ದೇವಾಲಯಗಳಲ್ಲಿ ವಾಸ್ತವ್ಯ ಹೂಡುತ್ತೇವೆ. ದಾರಿ ಮಧ್ಯದಲ್ಲಿ ಜನರು ನೀಡಿದ ಆಹಾರ ಸೇವಿಸಿಕೊಂಡು ಪ್ರಯಾಣ ಮುಂದುವರಿಸುತ್ತೇವೆ. ಆಂಧ್ರಪ್ರದೇಶ, ಮಹಾರಾಷ್ಟ್ರ ಮೂಲಕ ಅಯೋಧ್ಯೆ ತಲುಪುತ್ತೇವೆ ಎಂದರು.ಶ್ರೀರಾಮನ ಮೇಲಿನ ಭಕ್ತಿಗಾಗಿ ಅಯೋಧ್ಯೆಗೆ ಸೈಕಲ್ ಮೇಲೆ ಪ್ರಯಾಣ ಮಾಡುವ ನಿರ್ಧಾರ ಕೈಗೊಂಡೆವು. ಕುಟುಂಬ ಸದಸ್ಯರು ಸಹ ಪ್ರೋತ್ಸಾಹಿಸಿದರು. ಈವರೆಗೆ ಎಲ್ಲೂ ಸಮಸ್ಯೆಯಾಗಿಲ್ಲ. ಆರೋಗ್ಯವಾಗಿದ್ದೇವೆ. ನಿರ್ದಿಷ್ಟ ಸಮಯಕ್ಕೆ ಅಯೋಧ್ಯೆ ತಲುಪುವ ವಿಶ್ವಾಸವಿದೆ. ದಾರಿಯುದ್ದಕ್ಕೂ ಸಾರ್ವಜನಿಕರು ನಮಗೆ ಪ್ರೋತ್ಸಾಹಿಸುತ್ತಿದ್ದಾರೆ. ಅನ್ನ, ನೀರು ಕೊಟ್ಟು ಕಳಿಸಿಕೊಡುತ್ತಿದ್ದಾರೆ ಎಂದರು.