ಸಾರಾಂಶ
ಬಿಪಿಎಲ್‌ನಿಂದ ಎಪಿಎಲ್‌ಗೆ ಪಡಿತರ ಚೀಟಿ ಬದಲಾದ ಹಿನ್ನೆಲೆಯಲ್ಲಿ ಕೆಲ ಅರ್ಹ ಫಲಾನುಭವಿಗಳು ಕಾರ್ಡ್‌ಗಳನ್ನು ಹಿಡಿದುಕೊಂಡು ನಗರ, ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಿಗೆ ಅಲೆಯುತ್ತಿದ್ದ ದೃಶ್ಯ ಗುರುವಾರ ಕಂಡುಬಂದಿತು.
- ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾದ ಕಾರ್ಡ್: ಗೋಳಾಟ
- - - ದಾವಣಗೆರೆ: ಬಿಪಿಎಲ್‌ನಿಂದ ಎಪಿಎಲ್‌ಗೆ ಪಡಿತರ ಚೀಟಿ ಬದಲಾದ ಹಿನ್ನೆಲೆಯಲ್ಲಿ ಕೆಲ ಅರ್ಹ ಫಲಾನುಭವಿಗಳು ಕಾರ್ಡ್‌ಗಳನ್ನು ಹಿಡಿದುಕೊಂಡು ನಗರ, ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಿಗೆ ಅಲೆಯುತ್ತಿದ್ದ ದೃಶ್ಯ ಗುರುವಾರ ಕಂಡುಬಂದಿತು.ಕಳೆದ 4 ದಶಕಗಳಿಂದಲೂ ಬಿಪಿಎಲ್ ಕಾರ್ಡ್ ಪಡೆದು ಜೀವನ ಸಾಗಿಸುತ್ತಿರುವ ಕಡುಬಡವರ ಕುಟುಂಬಗಳು ತಮಗೆ ಸರ್ಕಾರ ನೀಡಿದ್ದ ಬಿಪಿಎಲ್ ಕಾರ್ಡ್ ಬದಲಿಗೆ ಎಪಿಎಲ್ ಕಾರ್ಡ್ ಆಗಿ ಬದಲಾವಣೆಯಾದ ಹಿನ್ನೆಲೆ ತಾಲೂಕು ಕಚೇರಿಗೆ ಜನರು ಎಡತಾಕುತ್ತಿದ್ದಾರೆ.
ಮೂವರು ಮಕ್ಕಳಿರುವ ವೃದ್ಧ ದಂಪತಿ ಕಡು ಬಡವರು. ಒಬ್ಬ ಮಗ ಬೇರೆಯಾಗಿದ್ದಾನೆ. ನಮಗೆ ಈಗ ಯಾರು ದಿಕ್ಕು? ನಮಗೆ ನೀಡುತ್ತಿದ್ದ ಅನ್ನಕ್ಕೂ ಈಗ ಕತ್ತರಿ ಹಾಕಲಾಗಿದೆ. ಹೀಗಾದರೆ ಜೀವನ ನಡೆಸುವುದಾದರೂ ಹೇಗೆಂದು ಕಣ್ಣೀರು ಹಾಕಿದರು.ಮತ್ತೋರ್ವ ಮಹಿಳೆ ಮಾತನಾಡಿ, ಕೆಲವರಿಗೆ ₹40 ಸಾವಿರ ಆದಾಯ ಮಿತಿ ಸರ್ಟಿಫಿಕೇಟ್ ಇದೆ. ಈಗ ₹40 ಸಾವಿರಕ್ಕೆ ಮತ್ತೊಂದು ಸೊನ್ನೆ ಸೇರಿಕೊಂಡಿದ್ದರಿಂದ ಅದು ₹40 ಸಾವಿರದಿಂದ ₹4 ಲಕ್ಷ ಆಗಿದೆ. ಹಾಗಾಗಿ, ಬಡ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಿದೆ. ಯಾವ ಐಟಿ, ಗಿಟಿ ರಿಟರ್ನ್ಸ್ ಇಲ್ಲ. ಜಿಎಸ್‌ಟಿ, ಗೀಎಸ್‌ಟಿನೂ ನಮ್ಮದು ಇಲ್ಲ. ಆದರೂ, ನಮ್ಮ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೇಷನ್ ಅಂಗಡಿ (ನ್ಯಾಯಬೆಲೆ ಅಂಗಡಿ)ಗಳಿಗೆ ಹೋದಾಗ ಬಿಪಿಎಲ್ ಕಾರ್ಡ್ ರದ್ದು ವಿಷಯ ಗೊತ್ತಾದ ಮಹಿಳೆಯರು, ವೃದ್ಧರು, ಕಡುಬಡವರು ಆಯಾ ತಾಲೂಕು ಕಚೇರಿಗಳಿಗೆ ಅಲೆದಾಟ ಶುರುಮಾಡಿದ್ದಾರೆ. ಅರ್ಹರ ಬಿಪಿಎಲ್ ಕಾರ್ಡ್‌ಗಳು ರದ್ದಾಗಿರುವುದಕ್ಕೆ ಜನರು ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.- - - (ಸಾಂದರ್ಭಿಕ ಚಿತ್ರ)