ಬೆಂಗಳೂರು ಜಲ ಮಂಡಳಿಯಿಂದ ಮಳವಳ್ಳಿಗೆ ಅಗತ್ಯ ಸೌಲಭ್ಯ ನೀಡಿ: ಶಾಸಕ ನರೇಂದ್ರಸ್ವಾಮಿ

| Published : Oct 17 2024, 12:12 AM IST

ಬೆಂಗಳೂರು ಜಲ ಮಂಡಳಿಯಿಂದ ಮಳವಳ್ಳಿಗೆ ಅಗತ್ಯ ಸೌಲಭ್ಯ ನೀಡಿ: ಶಾಸಕ ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿಯೊಂದಿಗೆ ಸಪ್ತನದಿಗಳನ್ನು ಜೋಡಿಸಿ ಬೆಂಗಳೂರಿಗೆ ನೀರು ಕೊಡುತ್ತಿದ್ದೇವೆ. ಅಂತಹ ಸೌಭಾಗ್ಯ ಮಳವಳ್ಳಿಗೆ ಸೇರಿದೆ. ಜಲಮಂಡಳಿಯಿಂದ ಮಳವಳ್ಳಿಯ ಪ್ರಾಥಮಿಕ ಶಿಕ್ಷಣಕ್ಕಾಗಿ ಕ್ಲಷ್ಟರ್‌ಗೊಂದು ಮಲ್ಟಿ ಮೀಡಿಯಾ ನೀಡಬೇಕು. ಜಲ ಮಂಡಳಿಯಲ್ಲಿ ಟೆಕ್ನಿಕಲ್ ಹಾಗೂ ಗ್ರೂಪ್ ಡಿ ಹುದ್ದೆಯಲ್ಲಿ ಮಳವಳ್ಳಿ ಜನರಿಗೆ ಸಿಂಹಪಾಲು ಉದ್ಯೋಗ ನೀಡಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಬೆಂಗಳೂರು ಜನರಿಗೆ ಕುಡಿಯುವ ನೀರು ನೀಡುತ್ತಿರುವ ಮಳವಳ್ಳಿ ತಾಲೂಕಿಗೆ ಜಲಮಂಡಳಿ ವತಿಯಿಂದ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.

ಬೆಂಗಳೂರಿಗೆ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳವಳ್ಳಿ ತಾಲೂಕಿನಿಂದ ರಾಜಧಾನಿ ಬೆಂಗಳೂರಿಗೆ ನೀರು ಕೊಡುತ್ತಿರುವುದು ಹೆಮ್ಮೆಯ ವಿಷಯ. ಇದರಿಂದ ಮಳವಳ್ಳಿಗೆ ಲಾಭವಿಲ್ಲ ಎಂದರು.

ಕಾವೇರಿಯೊಂದಿಗೆ ಸಪ್ತನದಿಗಳನ್ನು ಜೋಡಿಸಿ ಬೆಂಗಳೂರಿಗೆ ನೀರು ಕೊಡುತ್ತಿದ್ದೇವೆ. ಅಂತಹ ಸೌಭಾಗ್ಯ ಮಳವಳ್ಳಿಗೆ ಸೇರಿದೆ. ಜಲಮಂಡಳಿಯಿಂದ ಮಳವಳ್ಳಿಯ ಪ್ರಾಥಮಿಕ ಶಿಕ್ಷಣಕ್ಕಾಗಿ ಕ್ಲಷ್ಟರ್‌ಗೊಂದು ಮಲ್ಟಿ ಮೀಡಿಯಾ ನೀಡಬೇಕು. ಜಲ ಮಂಡಳಿಯಲ್ಲಿ ಟೆಕ್ನಿಕಲ್ ಹಾಗೂ ಗ್ರೂಪ್ ಡಿ ಹುದ್ದೆಯಲ್ಲಿ ಮಳವಳ್ಳಿ ಜನರಿಗೆ ಸಿಂಹಪಾಲು ಉದ್ಯೋಗ ನೀಡಬೇಕು. ಜಲ ಮಂಡಳಿ ಆವರಣದಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು.

ಶಾಸಕ ಮನವಿಗೆ ಸ್ಪಂದಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಅಂಬೇಡ್ಕರ್ ಭವನ ನಿರ್ಮಾಣಕ್ಕೆ 5 ಕೋಟಿ ಹಣ ಬಿಡುಗಡೆಗೊಳಿಸಲಾಗುವುದು, ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ಮಳವಳ್ಳಿ ತಾಲೂಕಿನ ಅಭಿವೃದ್ಧಿಗೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕ್ಷೇತ್ರದಿಂದ ಅಭಿನಂದಿಸಿದರು. ವೇದಿಕೆಯಲ್ಲಿ ತೊರೆಕಾಡನಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ಕೆ.ತೇಜ್ ಕುಮಾರ್ (ಶ್ಯಾಂ) ಇದ್ದರು.