ಸಾರಾಂಶ
ಪಾದರಕ್ಷೆಯಲ್ಲಿ ಅಡಗಿದ್ದ ವಿಷಕಾರಿ ಹಾವು ಕಚ್ಚಿ ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ : ಪಾದರಕ್ಷೆಯಲ್ಲಿ ಅಡಗಿದ್ದ ವಿಷಕಾರಿ ಹಾವು ಕಚ್ಚಿ ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ನಡೆದಿದೆ.
ಹಾವು ಕಡಿತದಿಂದ 41 ವರ್ಷದ ಮಂಜು ಪ್ರಕಾಶ್ ಮೃತ ದುರ್ದೈವಿ. ಚಪ್ಪಲಿ ಒಳಗಡೆ ಕೊಳಕು ಮಂಡಲ ಹಾವು ಇರುವುದನ್ನು ಗಮನಿಸದೆ ಧರಿಸಿ ಹೊರಗೆ ಹೋಗಿ ಬಂದು ಮಲಗಿರುವ ಸಮಯದಲ್ಲಿ ವಿಷವೇರಿ ಮೃತನಾಗಿದ್ದಾರೆ.
ಈ ಹಿಂದೆ ನಡೆದಿದ್ದ ಅಪಘಾತದಲ್ಲಿ ಕಾಲಿನ ಸ್ಪರ್ಶ ಕಳೆದುಕೊಂಡಿದ್ದ ಮೃತನಿಗೆ ಹಾವು ಕಚ್ಚಿದ ಸ್ಪರ್ಶ ಜ್ಞಾನವಾಗಿರಲಿಲ್ಲ. ನೆರೆಮನೆಯ ನಿವಾಸಿಗಳು ಚಪ್ಪಲಿಯಲ್ಲಿ ಹಾವು ಸೇರಿ ಕೊಂಡಿರುವುದನ್ನು ನೋಡಿ ತಿಳಿಸುವ ಹೊತ್ತಿಗೆ ಮಂಜು ಸಾವನ್ನಪ್ಪಿದ್ದು, ಚಪ್ಪಲಿ ಒಳಗಡೆ ಹಾವು ಕೂಡ ಸತ್ತಿದ್ದು ಕಂಡು ಬಂದಿದೆ.