ಸಾರಾಂಶ
‘ಧನಂಜಯ್ ನನ್ನ ತಮ್ಮ, ಅವರ ಮೇಲೆ ಅಪಾರ ಗೌರವವಿದೆ. ಅವರು ತಾನು ಬೆಳೆಯುವುದರ ಜೊತೆ ತನ್ನವರನ್ನು ಕೂಡ ಬೆಳೆಸುತ್ತಾರೆ. ಅವರ ದಾರಿ, ಅವರ ಕಷ್ಟ, ಅವರ ಮನಸ್ಸು ಎಲ್ಲವೂ ನನಗಿಷ್ಟ - ದುನಿಯಾ ವಿಜಯ್
ಸಿನಿವಾರ್ತೆ
‘ಧನಂಜಯ್ ನನ್ನ ತಮ್ಮ, ಅವರ ಮೇಲೆ ಅಪಾರ ಗೌರವವಿದೆ. ಅವರು ತಾನು ಬೆಳೆಯುವುದರ ಜೊತೆ ತನ್ನವರನ್ನು ಕೂಡ ಬೆಳೆಸುತ್ತಾರೆ. ಅವರ ದಾರಿ, ಅವರ ಕಷ್ಟ, ಅವರ ಮನಸ್ಸು ಎಲ್ಲವೂ ನನಗಿಷ್ಟ. ಅವರು ಮತ್ತು ಕಷ್ಟ ಪಟ್ಟು ದೊಡ್ಡ ಸ್ಥಾನಕ್ಕೆ ಬೆಳೆದ ಸತ್ಯದೇವ್ ನಟಿಸಿರುವ ಝೀಬ್ರಾ ಚಿತ್ರಕ್ಕೆ ದೊಡ್ಡ ಮಟ್ಟದ ಗೆಲುವು ಸಿಗಲಿ’.
- ಹೀಗೆ ಹೇಳಿದ್ದು ದುನಿಯಾ ವಿಜಯ್. ‘ಝೀಬ್ರಾ’ ನ.22ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್, ಸತೀಶ್ ನೀನಾಸಂ, ಪೂರ್ಣಚಂದ್ರ ಮೈಸೂರು, ಅಮೃತಾ ಅಯ್ಯಂಗಾರ್, ಸಪ್ತಮಿ ಗೌಡ, ನಾಗಭೂಷಣ ಹೀಗೆ ದೊಡ್ಡ ತಂಡವೇ ಸೇರಿತ್ತು.
ಬೆಂಗಳೂರಿಗೆ ಆಗಮಿಸಿದ್ದ ಸತ್ಯದೇವ್, ‘ನಾನು ಮತ್ತು ಧನು ಬೆಳೆದು ಬಂದ ರೀತಿ ಒಂದೇ ಥರ ಇದೆ. ಮೊದಲಿಗೆ ನಾನು ಬೆಂಗಳೂರಲ್ಲೇ ಕೆಲಸ ಮಾಡುತ್ತಿದ್ದೆ. ಜೊತೆಯಾಗಿ ನಟಿಸಿದ್ದೇವೆ. ಆಶೀರ್ವದಿಸಿ’ ಎಂದರು.
ಡಾಲಿ ಧನಂಜಯ್, ‘ಬ್ಯಾಂಕಿಂಗ್ ಹಿನ್ನೆಲೆಯ ಸಿನಿಮಾ. ಆರಂಭದಿಂದ ಅಂತ್ಯದವರೆಗೂ ನೋಡಿಸಿಕೊಂಡು ಹೋಗುತ್ತದೆ. ಇದನ್ನು ಕನ್ನಡ ಸಿನಿಮಾ ರೀತಿಯೇ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು.
ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣದ ಚಿತ್ರವನ್ನು ಈಶ್ವರ್ ಕಾರ್ತಿಕ್ ನಿರ್ದೇಶಿಸಿದ್ದಾರೆ. ಎಸ್ ಶ್ರೀಲಕ್ಷ್ಮಿ ರೆಡ್ಡಿ ಚಿತ್ರದ ಸಹ ನಿರ್ಮಾಪಕಿ. ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.