ದ್ವೇಷ ಬಿತ್ತುವ ಭಾಷಣ : ಚಕ್ರವರ್ತಿ ಸೂಲಿಬೆಲೆ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್ಐಆರ್‌ ದಾಖಲು

| N/A | Published : Mar 18 2025, 07:24 AM IST

Chakravarthy sulibele
ದ್ವೇಷ ಬಿತ್ತುವ ಭಾಷಣ : ಚಕ್ರವರ್ತಿ ಸೂಲಿಬೆಲೆ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್ಐಆರ್‌ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದು ಯುವಕರು ಅನ್ಯಧರ್ಮದ ಯುವತಿಯರನ್ನು ಮದುವೆಯಾಗುವಂತೆ ಕರೆ ನೀಡಿದ್ದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸೋಮವಾರ ಎಫ್ಐಆರ್‌ ದಾಖಲಾಗಿದೆ.

ಉಳ್ಳಾಲ: ವಿಶ್ವ ಹಿಂದೂ ಪರಿಷತ್‌ನಿಂದ ಉಳ್ಳಾಲ ತಾಲೂಕು ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆದಿದ್ದ ಬೃಹತ್ ಪಾದಯಾತ್ರೆ ಸಮಾರೋಪದ ಭಾಷಣದಲ್ಲಿ ಹೆಣ್ಣು ಸಿಗದ ಹಿಂದು ಯುವಕರು ಅನ್ಯಧರ್ಮದ ಯುವತಿಯರನ್ನು ಮದುವೆಯಾಗುವಂತೆ ಕರೆ ನೀಡಿದ್ದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸೋಮವಾರ ಎಫ್ಐಆರ್‌ ದಾಖಲಾಗಿದೆ.

 ಯುವ ಕಾಂಗ್ರೆಸ್‌ ಉಳ್ಳಾಲ ನಗರಾಧ್ಯಕ್ಷ ಅಬ್ದುಲ್ ರಶೀದ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.  

ಧರ್ಮಗಳೊಳಗೆ ದ್ವೇಷ ಬಿತ್ತುವ ಮಾತುಗಳನ್ನಾಡಿರುವುದಾಗಿ ಸೂಲಿಬೆಲೆ ಅವರು ಅಂದಿನ ಭಾಷಣದಲ್ಲಿ ‘ಎಲ್ಲಿಯವರೆಗೆ ಲವ್ ಜಿಹಾದ್ ಬಗ್ಗೆ ನಾವು ಮಾತಾನಾಡುತ್ತ ಇರೋಣ?, ನಮ್ಮ ಗಂಡು ಮಕ್ಕಳು ಹುಡುಗಿ ಸಿಕ್ಕಿಲ್ಲಂತಾ ಎಷ್ಟು ದಿನ ಹೇಳುತ್ತಿರಾ, ಸ್ವಲ್ಪ ಬೇರೆಯವರನ್ನು ನೋಡ್ರಪ್ಪ, ಪಕ್ಕದ ಸಮಾಜದಲ್ಲೂ ಸಮಸ್ಯೆ ಇದೆ ಅಲ್ವ, ಅವರಿಗೆ ಧೈರ್ಯ ತುಂಬೋ ಕೆಲಸ ಮಾಡಿ’ ಎಂದು ಹಿಂದೂ ಸಮಾಜದ ಯುವಕರಿಗೆ ಕರೆ ನೀಡಿದ್ದರು.