2025-26ನೇ ಹಣಕಾಸು ವರ್ಷದಲ್ಲಿ ಭಾರತಕ್ಕೆ 5.58 ಲಕ್ಷ ಕೋಟಿ ರು. ಬಂಡವಾಳ ಹರಿದು ಬಂದಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.18ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ 1.22 ಲಕ್ಷ ಕೋಟಿ ರು. ಎಫ್‌ಡಿಐ ಸ್ವೀಕರಿಸಿರುವ ಕರ್ನಾಟಕ ದೇಶದಲ್ಲೇ ಮತ್ತೊಮ್ಮೆ 2ನೇ ಸ್ಥಾನದಲ್ಲಿದೆ

ನವದೆಹಲಿ: 2025-26ನೇ ಹಣಕಾಸು ವರ್ಷದಲ್ಲಿ ಭಾರತಕ್ಕೆ 5.58 ಲಕ್ಷ ಕೋಟಿ ರು. ಬಂಡವಾಳ ಹರಿದು ಬಂದಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.18ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ 1.22 ಲಕ್ಷ ಕೋಟಿ ರು. ಎಫ್‌ಡಿಐ ಸ್ವೀಕರಿಸಿರುವ ಕರ್ನಾಟಕ ದೇಶದಲ್ಲೇ ಮತ್ತೊಮ್ಮೆ 2ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವರದಿ ಹೇಳಿದೆ. 1.76 ಲಕ್ಷ ಕೋಟಿ ಹೂಡಿಕೆಯೊಂದಿಗೆ ಮಹಾರಾಷ್ಟ್ರ ಈ ಸಲವೂ ಮೊದಲ ಸ್ಥಾನದಲ್ಲಿದೆ. 54000 ಕೋಟಿ ಎಫ್‌ಡಿಐನೊಂದಿಗೆ ಗುಜರಾತ್‌ 3ನೆ ಸ್ಥಾನ ಪಡೆದಿದೆ.

2025-26ರಲ್ಲಿ ಭಾರತಕ್ಕೆ 5.58 ಲಕ್ಷ ಕೋಟಿ ರು. ವಿದೇಶಿ ನೇರ ಬಂಡವಾಳ ಹೂಡಿಕೆ

ಕೇಂದ್ರದ ಕೈಗಾರಿಕಾ ಉತ್ತೇಜನಾ ಮತ್ತು ಆಂತರಿಕ ವ್ಯಾಪಾರ ಇಲಾಖೆ ಬಿಡುಗಡೆ ಮಾಡಿರುವ ವರದಿ ಅನ್ವಯ 2025-26ರಲ್ಲಿ ಭಾರತಕ್ಕೆ 5.58 ಲಕ್ಷ ಕೋಟಿ ರು. ವಿದೇಶಿ ನೇರ ಬಂಡವಾಳ ಹೂಡಿಕೆ ಹರಿದುಬಂದಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.18ರಷ್ಟು ಹೆಚ್ಚು.

ಸಿಂಗಾಪುರ ನಂ.1:

ಕಳೆದ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಸಿಂಗಾಪುರದ ಮೂಲಕ 1.88 ಲಕ್ಷ ಕೋಟಿ ರು.ಬಂಡವಾಳ ಹೂಡಿಕೆ ಆಗಿದೆ. ಈ ಮೂಲಕ ಅದು ಮೊದಲ ಸ್ಥಾನದಲ್ಲಿದೆ. ಇನ್ನು 2ನೇ ಸ್ಥಾನದಲ್ಲಿರುವ ಅಮೆರಿಕದ ಎಫ್‌ಡಿಐ ಪ್ರಮಾಣ 1 ಲಕ್ಷ ಕೋಟಿ ರು.ನಷ್ಟಿತ್ತು. ಇದು ಹಿಂದಿನ ವರ್ಷಕ್ಕಿಂತ ಬುಹುತೇಕ ದ್ವಿಗುಣವಾಗಿದೆ. ನಂತರದ ಸ್ಥಾನಗಳಲ್ಲಿ ಮಾರಿಷಸ್‌, ಜಪಾನ್‌, ನೆದರ್ಲೆಂಡ್‌ ದೇಶಗಳಿವೆ ಎಂದು ವರದಿ ಹೇಳಿದೆ.