ಅರಣ್ಯ ಭೂಮಿ ಒತ್ತುವರಿಯಲ್ಲಿ ದೇಶದಲ್ಲೇ ಕರ್ನಾಟಕ ನಂ.3 - ಕರ್ನಾಟಕದಲ್ಲಿ 863 ಚ.ಕಿ.ಮೀ ಅರಣ್ಯ ಒತ್ತುವರಿ

| N/A | Published : Apr 02 2025, 10:52 AM IST

forest

ಸಾರಾಂಶ

ದೇಶದ 25 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 13000 ಚದರ ಕಿಲೋಮೀಟರ್‌ನಷ್ಟು ಅರಣ್ಯ ಭೂಮಿ ಒತ್ತುವರಿ ಆಗಿದೆ. ಹೀಗೆ ಒತ್ತುವರಿಯಾದ ಪ್ರದೇಶವು ದೆಹಲಿ, ಸಿಕ್ಕಿಂ ಮತ್ತು ಗೋವಾ ರಾಜ್ಯಗಳ ಒಟ್ಟು ವಿಸ್ತೀರ್ಣಕ್ಕಿಂತಲೂ ಹೆಚ್ಚು.

ನವದೆಹಲಿ: ದೇಶದ 25 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 13000 ಚದರ ಕಿಲೋಮೀಟರ್‌ನಷ್ಟು ಅರಣ್ಯ ಭೂಮಿ ಒತ್ತುವರಿ ಆಗಿದೆ. ಹೀಗೆ ಒತ್ತುವರಿಯಾದ ಪ್ರದೇಶವು ದೆಹಲಿ, ಸಿಕ್ಕಿಂ ಮತ್ತು ಗೋವಾ ರಾಜ್ಯಗಳ ಒಟ್ಟು ವಿಸ್ತೀರ್ಣಕ್ಕಿಂತಲೂ ಹೆಚ್ಚು.

 ಅರಣ್ಯ ಭೂ ಅತಿಕ್ರಮಣದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತನಗೆ ಸಲ್ಲಿಸಿದ ಮಾಹಿತಿಯನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಿದೆ. ಅದರನ್ವಯ 25 ರಾಜ್ಯಗಳಲ್ಲಿ ಒಟ್ಟು 13056 ಚ.ಕಿ.ಮೀ ನಷ್ಟು ಅರಣ್ಯ ಒತ್ತುವರಿಯಾಗಿದೆ. ಇನ್ನೂ 10 ರಾಜ್ಯಗಳು ಅರಣ್ಯ ಭೂಮಿ ಒತ್ತುವರಿ ಮಾಹಿತಿ ಸಲ್ಲಿಸಬೇಕಿದೆ ಎಂದು ಹೇಳಿದೆ.

2024ರ ಮಾರ್ಚ್‌ವರೆಗಿನ ಅಂಕಿ ಅಂಶಗಳ ಪ್ರಕಾರ 5460.9 ಕಿ.ಮೀ ಅರಣ್ಯ ಭೂಮಿ ಒತ್ತುವರಿಯೊಂದಿಗೆ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಅಸ್ಸಾಂ ರಾಜ್ಯವಿದ್ದು, 3620.9 ಕಿ.ಮೀ ಅರಣ್ಯಭೂಮಿ ಒತ್ತುವರಿಯಾಗಿದೆ, ಇನ್ನು ಕರ್ನಾಟಕ ಮೂರನೇಯ ಸ್ಥಾನದಲ್ಲಿದ್ದು ಇಲ್ಲಿ 863. 08 ಕಿ.ಮೀ ಪ್ರದೇಶ ಒತ್ತುವರಿಯಾಗಿದೆ ಎಂದಿದೆ.