ಸಾರಾಂಶ
ನಾನು ಬಸವ ಧರ್ಮ (ಲಿಂಗಾಯತ)ದ ಅನುಯಾಯಿಯಾಗಿದ್ದು, ಜಾತಿ ಆಧಾರಿತ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಧರ್ಮ ಎಂದೇ ಬರೆಸುತ್ತೇನೆ. ಇನ್ನು, ಲಿಂಗಾಯತ ಮತ್ತು ವೀರಶೈವರಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದು, ಇಬ್ಬರ ಆಚರಣೆ ಬೇರೆಬೇರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಬೆಂಗಳೂರು : ನಾನು ಬಸವ ಧರ್ಮ (ಲಿಂಗಾಯತ)ದ ಅನುಯಾಯಿಯಾಗಿದ್ದು, ಜಾತಿ ಆಧಾರಿತ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಧರ್ಮ ಎಂದೇ ಬರೆಸುತ್ತೇನೆ. ಇನ್ನು, ಲಿಂಗಾಯತ ಮತ್ತು ವೀರಶೈವರಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದ್ದು, ಇಬ್ಬರ ಆಚರಣೆ ಬೇರೆಬೇರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವೀರಶೈವ ಮತ್ತು ಲಿಂಗಾಯತರಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ಬ್ರಾಹ್ಮಣರ ಉಪ ಜಾತಿಗಳಲ್ಲೂ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದೆ. ಅದೇ ರೀತಿ ನಮ್ಮಲ್ಲೂ ಇದೆ. ವೀರಶೈವರ ಆಚರಣೆಯೇ ಬೇರೆ-ಲಿಂಗಾಯತರ ಆಚರಣೆಯೇ ಬೇರೆ. ವೀರಶೈವರು ಹಿಂದು ಧರ್ಮದ ಒಂದು ಭಾಗ. ನಾವೆಲ್ಲರೂ ಲಿಂಗಾಯತರು, ವೀರಶೈವ ಅದರ ಒಂದು ಭಾಗವಷ್ಟೇ. ಬಸವಣ್ಣ ಶ್ರೇಷ್ಠ ಶೈವ. ನಾನು ಬಸವಣ್ಣ ಅವರ ಜಿಲ್ಲೆಯಿಂದ ಬಂದವನು. ನಾನು ಲಿಂಗಾಯತ ಧರ್ಮದ ಅನುಯಾಯಿಯಾಗಿದ್ದು. ಜಾತಿ ಆಧಾರಿತ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಸುತ್ತೇನೆ ಎಂದರು.
ಮೈಸೂರು ಸಮೀಕ್ಷೆ, ಮದ್ರಾಸ್ ಸಮೀಕ್ಷೆಯಲ್ಲೂ ಲಿಂಗಾಯತರು ಚಾತುರ್ವರ್ಣದ ಭಾಗವಲ್ಲ ಎಂದು ದಾಖಲಾಗಿದೆ. ಜೈನ, ಸಿಖ್ ಧರ್ಮದಂತೆ ಲಿಂಗಾಯತ ಧರ್ಮ ಎಂದು ಉಲ್ಲೇಖಿಸಲಾಗಿದೆ. ಅದರಲ್ಲೂ ಮದ್ರಾಸ್ ಸಮೀಕ್ಷೆಯಲ್ಲಿ ಶೈವರು, ವೈಷ್ಣವರು, ಲಿಂಗಾಯತರು ಎಂದು ದಾಖಲಾಗಿದೆ. ಲಿಂಗಾಯತ ಧರ್ಮದ ಕುರಿತು ಜನರಿಗೆ ಮೊದಲು ಅರ್ಥವಾಗಿರಲಿಲ್ಲ. ಈಗ ಅರ್ಥವಾಗುತ್ತಿದೆ. ಈ ಬಗ್ಗೆ ಈಗ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಮುಂದೆ ಇದರ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.
ಎಲ್ಲರೂ ಹಿಂದುಗಳೇ:
ಪ್ರಧಾನಿ ಮೋದಿ ಅವರೇ ಈ ಹಿಂದೆ ತಮ್ಮ ಭಾಷಣದಲ್ಲಿ ಹಿಂದು ಧರ್ಮವಲ್ಲ. ಅದು ಒಂದು ಜೀವನದ ವಿಧಾನ ಎಂದು ಹೇಳಿದ್ದರು. ಭೌಗೋಳಿಕವಾಗಿ ನಾವೆಲ್ಲರೂ ಹಿಂದುಗಳೇ. ದೇಶದ 140 ಕೋಟಿ ಜನರೂ ಭೌಗೋಳಿಕವಾಗಿ ಹಿಂದುಗಳು. ನಾವು ಹಿಂದುಗಳ ವಿರೋಧಿಗಳಲ್ಲ. ಆದರೆ, ನಮ್ಮ ನಿಲುವು ಸ್ಪಷ್ಟವಾಗಿದೆ. ನಾವು ಬಸವ ಧರ್ಮದ ಅನುಯಾಯಿಗಳು. ಇನ್ನು, ಲಿಂಗಾಯತ ಧರ್ಮ ಸ್ವೀಕರಿಸದವರು ಲಿಂಗಾಯತರ ವಿರೋಧಿಗಳು ಎಂದು ಹೇಳಲಾಗದು ಎಂದು ತಿಳಿಸಿದರು.
- ವೀರಶೈವ ಲಿಂಗಾಯತದ ಒಂದು ಭಾಗವಷ್ಟೇ
- ಗಣತೀಲಿ ನಾನು ಲಿಂಗಾಯತ ಎಂaದು ಬರೆಸುವೆ
ಬ್ರಾಹ್ಮಣರ ಉಪ ಜಾತಿಗಳಲ್ಲಿ ಇದ್ದಂತೆಯೇ ನಮ್ಮಲ್ಲೂ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದೆ. ನಮ್ಮ ಆಚರಣೆಗಳೇ ಬೇರೆ
ವೀರಶೈವರು ಹಿಂದೂ ಧರ್ಮದ ಒಂದು ಭಾಗ. ನಾವೆಲ್ಲರೂ ಲಿಂಗಾಯತರು, ವೀರಶೈವ ಅದರ ಒಂದು ಭಾಗವಷ್ಟೇ
ಮೈಸೂರು ಸಮೀಕ್ಷೆ, ಮದ್ರಾಸ್ ಸಮೀಕ್ಷೆಯಲ್ಲೂ ಲಿಂಗಾಯತರು ಚಾತುರ್ವರ್ಣದ ಭಾಗವಲ್ಲ ಎಂದು ದಾಖಲಾಗಿದೆ
ನಾನು ಲಿಂಗಾಯತ ಧರ್ಮದ ಅನುಯಾಯಿ. ಜನಗಣತಿಯ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ನಾನು ಬರೆಸುವೆ