ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ ಮತ್ತು ಶಾಲಾ ಮಕ್ಕಳ ಬಿಸಿಯೂಟ ಕಾರ್ಯಕ್ರಮ ಗುಣಮಟ್ಟ ಪರಿಶೀಲನೆಯನ್ನು ಪ್ರತೀ ತಿಂಗಳು ಮಾಡುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಬೆಂಗಳೂರು : ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ ಮತ್ತು ಶಾಲಾ ಮಕ್ಕಳ ಬಿಸಿಯೂಟ ಕಾರ್ಯಕ್ರಮ ಗುಣಮಟ್ಟ ಪರಿಶೀಲನೆಯನ್ನು ಪ್ರತೀ ತಿಂಗಳು ಮಾಡುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

16 ಹೊಸ ಇಂದಿರಾ ಕ್ಯಾಂಟೀನ್‌ ಉದ್ಘಾಟನಾ ಕಾರ್ಯಕ್ರಮ

ನಗರದ ನೆಹರು ಪ್ಲಾನಿಟೋರಿಯಂನಲ್ಲಿ ಆಯೋಜಿಸಿದ್ದ 16 ಹೊಸ ಇಂದಿರಾ ಕ್ಯಾಂಟೀನ್‌ ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಹಾರ ಭದ್ರತಾ ಕಾಯ್ದೆ ದೇಶಕ್ಕೆ ಒಂದು ದೊಡ್ಡ ಶಕ್ತಿ ತುಂಬುವ ಕಾಯ್ದೆ. ಇದರಡಿ ತರಲಾಗಿರುವ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ ಮತ್ತು ಬಿಸಿಯೂಟ ಕಾರ್ಯಕ್ರಮಗಳು ನಮ್ಮ ಹೃದಯಕ್ಕೆ ಹತ್ತಿರವಾದ ಯೋಜನೆಗಳು.

ಗುಣಮಟ್ಟ ಪರಿಶೀಲಿಸುವ ಕೆಲಸ ಮಾಡಬೇಕು

ಪ್ರತಿ ಕ್ಷೇತ್ರದಲ್ಲೂ ಆಯಾ ಶಾಸಕರು, ಅಧಿಕಾರಿಗಳು ಪ್ರತಿ ತಿಂಗಳು ಮೂರೂ ಯೋಜನೆಗಳ ಗುಣಮಟ್ಟ ಪರಿಶೀಲಿಸುವ ಕೆಲಸ ಮಾಡಬೇಕು. ಇಂದಿರಾ ಕ್ಯಾಂಟೀನ್‌ನಲ್ಲಿ ನೌಕರರು ಸ್ವತಃ ಪ್ರತಿದಿನ ಊಟ ಮಾಡಿ ಗುಣಮಟ್ಟ ಪರಿಶೀಲಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಇಬ್ಬರು ಸಚಿವರಿಗೆ ಸೂಚನೆ ನೀಡಿದ್ದೇನೆ. ಅದನ್ನು ಅವರು ಮಾಡುತ್ತಾರೆ ಎಂದರು.