ಸಾರಾಂಶ
ಧರ್ಮಸ್ಥಳದ ಮಂಜುನಾಥನಿಗೆ ರಾಜ್ಯವಲ್ಲದೇ ಹೊರ ರಾಜ್ಯದಲ್ಲೂ ಭಕ್ತರಿದ್ದಾರೆ. ಬಿಜೆಪಿಗಿಂತ ಹೆಚ್ಚು ಕಾಂಗ್ರೆಸ್‌ನವರು ಧರ್ಮಸ್ಥಳಕ್ಕೆ ಹೋಗ್ತಾರೆ - ರಾಮಲಿಂಗಾರೆಡ್ಡಿ
ರಾಮನಗರ: ಧರ್ಮಸ್ಥಳದ ಮಂಜುನಾಥನಿಗೆ ರಾಜ್ಯವಲ್ಲದೇ ಹೊರ ರಾಜ್ಯದಲ್ಲೂ ಭಕ್ತರಿದ್ದಾರೆ. ಬಿಜೆಪಿಗಿಂತ ಹೆಚ್ಚು ಕಾಂಗ್ರೆಸ್‌ನವರು ಧರ್ಮಸ್ಥಳಕ್ಕೆ ಹೋಗ್ತಾರೆ. ಆರೋಪದ ವಾಸ್ತವಾಂಶ ಹೊರಬರಲಿ ಎಂದು ತನಿಖೆ ಮಾಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಧರ್ಮಸ್ಥಳ ಬುರುಡೆ ಕೇಸ್ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದೂಗಳೇ ಕೆಲವರು ಧರ್ಮಸ್ಥಳದ ವಿರುದ್ಧ ಮಾತನಾಡುತ್ತಿದ್ದರು. ಈಗ ಒಬ್ಬ ಮುಸುಕುಧಾರಿ ಹೆಣಗಳನ್ನು ಹೂತಿಟ್ಟಿದ್ದೇನೆ ಅಂತ ಬಂದಿದ್ದಾನೆ. ಈ ಹಿನ್ನೆಲೆಯಲ್ಲಿ ಇದಕ್ಕೊಂದು ಸ್ಪಷ್ಟ ಚಿತ್ರಣ ಬರಲಿ ಅಂತ ನಮ್ಮ ಸರ್ಕಾರ ಎಸ್ಐಟಿ ತನಿಖೆ ಮಾಡುತ್ತಿದೆ.
ಈ ಅಪಪ್ರಚಾರಗಳಿಗೆ ಅಂತ್ಯ ಹಾಡೋದಕ್ಕೆ ತನಿಖೆ ಆಗುತ್ತಿದೆ ಎಂದರು. ನಮಗೂ ಮಂಜುನಾಥನ ಮೇಲೆ ಭಕ್ತಿ ಇದೆ. ಏನೂ ಸಿಗಲಿಲ್ಲ ಅಂದರೆ ಅನಾಮಿಕ ವ್ಯಕ್ತಿ ಮೇಲೂ ಕೇಸ್ ಮಾಡುತ್ತೀವಿ ಎಂದರು.