ಸರ್ಕಾರದ ಬೆಲೆ ನಿಯಂತ್ರಣ ಪಟ್ಟಿಗೆ ಸೇರದ ಎಲ್ಲಾ ಕ್ಯಾನ್ಸರ್ ಔಷಧಗಳ ವ್ಯಾಪಾರ ಮಾರ್ಜಿನ್ ಅನ್ನು ಗರಿಷ್ಠ ಶೇ.30ಕ್ಕೆ ಮಿತಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಬ್ರಾಂಡೆಡ್, ಜೆನೆರಿಕ್, ದೇಶೀಯವಾಗಿ ಉತ್ಪಾದಿಸಲಾಗುವ, ಆಮದು ಮಾಡಿಕೊಳ್ಳುವ, ಪೇಟೆಂಟ್ ಹೊಂದಿರುವ ಮತ್ತು ಪೇಟೆಂಟ್ ಇಲ್ಲದ ಔಷಧಗಳಿಗೆ ಇದು ಅನ್ವಯಿಸಲಿದೆ.
ನವದೆಹಲಿ: ಸರ್ಕಾರದ ಬೆಲೆ ನಿಯಂತ್ರಣ ಪಟ್ಟಿಗೆ ಸೇರದ ಎಲ್ಲಾ ಕ್ಯಾನ್ಸರ್ ಔಷಧಗಳ ವ್ಯಾಪಾರ ಮಾರ್ಜಿನ್ ಅನ್ನು ಗರಿಷ್ಠ ಶೇ.30ಕ್ಕೆ ಮಿತಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಬ್ರಾಂಡೆಡ್, ಜೆನೆರಿಕ್, ದೇಶೀಯವಾಗಿ ಉತ್ಪಾದಿಸಲಾಗುವ, ಆಮದು ಮಾಡಿಕೊಳ್ಳುವ, ಪೇಟೆಂಟ್ ಹೊಂದಿರುವ ಮತ್ತು ಪೇಟೆಂಟ್ ಇಲ್ಲದ ಔಷಧಗಳಿಗೆ ಇದು ಅನ್ವಯಿಸಲಿದೆ.
ಇದೇ ಮಾಸಾಂತ್ಯದಲ್ಲಿ ಜಾರಿಗೆ ಬರುವ ನಿರೀಕ್ಷೆ
ಈ ಆದೇಶವು ಇದೇ ಮಾಸಾಂತ್ಯದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದ್ದು, 35 ಪೇಟೆಂಟ್ ಔಷಧಗಳು ಸೇರಿದಂತೆ ಒಟ್ಟು 110 ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಈ ಕ್ರಮದಿಂದ ಕ್ಯಾನ್ಸರ್ ರೋಗಿಗಳಿಗೆ ವಾರ್ಷಿಕ ₹2,500 ಕೋಟಿ ಉಳಿತಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕೈಗೆಟುಕುವ ದರದಲ್ಲಿ ಒದಗಿಸುವುದು ಸರ್ಕಾರದ ಉದ್ದೇಶ
ವ್ಯಾಪಾರ ಮಾರ್ಜಿನ್ ಎಂದರೆ ಔಷಧ ತಯಾರಕರು ನಿಗದಿಪಡಿಸಿದ ಬೆಲೆ ಮತ್ತು ಔಷಧವನ್ನು ಮಾರಾಟ ಮಾಡುವಾಗ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಪಡೆಯುವ ಲಾಭದ ಅಂತರ. ಇದನ್ನು ನಿಯಂತ್ರಿಸುವ ಮೂಲಕ ಜೀವ ರಕ್ಷಕ ಕ್ಯಾನ್ಸರ್ ಔಷಧಗಳನ್ನು ಜನರಿಗೆ ಕೈಗೆಟುಕುವ ದರದಲ್ಲಿ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.
