ಬೇಸಿಗೆಯಲ್ಲಿ ದಟ್ಟಣೆ ನಿರ್ವಹಣೆಗೆ ಬೆಂಗಳೂರಿಂದ ಇಲ್ಲಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ

| N/A | Published : Mar 29 2025, 09:15 AM IST

prayagraj mahakumbh 2025 railway update trains cancelled sangam station closed

ಸಾರಾಂಶ

ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ಮಧ್ಯ ರೈಲ್ವೆಯು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ ಮುಂಬೈ ಮತ್ತು ಎಸ್‌ಎಂವಿಟಿ ಬೆಂಗಳೂರು ನಡುವೆ 13 ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ.

  ಬೆಂಗಳೂರು : ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ಮಧ್ಯ ರೈಲ್ವೆಯು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ ಮುಂಬೈ ಮತ್ತು ಎಸ್‌ಎಂವಿಟಿ ಬೆಂಗಳೂರು ನಡುವೆ 13 ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ.

ಸಿಎಸ್ಎಂಟಿ ಮುಂಬೈ-ಎಸ್ಎಂವಿಟಿ ಬೆಂಗಳೂರು-ಸಿಎಸ್ಎಂಟಿ ಮುಂಬೈ ವಿಶೇಷ ಎಕ್ಸ್‌ಪ್ರೆಸ್ (01013) ಏಪ್ರಿಲ್ 5, 12, 19, 26, ಮೇ 3, 10, 17, 24, 31 ಮತ್ತು ಜೂನ್ 7, 14, 21, 28 (ಶನಿವಾರ) ರಂದು ಸಿಎಸ್ಎಂಟಿ ಮುಂಬೈನಿಂದ ಮಧ್ಯಾಹ್ನ 12:30ಕ್ಕೆ ಹೊರಟು, ಅದೇ ದಿನ ರಾತ್ರಿ 11:55ಕ್ಕೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ತಲುಪಲಿದೆ.

ಎಸ್ಎಂವಿಟಿ ಬೆಂಗಳೂರು - ಸಿಎಸ್ಎಂಟಿ ಮುಂಬೈ ವಿಶೇಷ ಎಕ್ಸ್‌ಪ್ರೆಸ್ (01014) ಏಪ್ರಿಲ್ 6, 13, 20, 27, ಮೇ 4, 11, 18, 25 ಮತ್ತು ಜೂನ್ 1, 8, 15, 22, 29 (ಭಾನುವಾರ) ದಂದು ಎಸ್ಎಂವಿಟಿ ಬೆಂಗಳೂರಿನಿಂದ 04:40ಕ್ಕೆ ಹೊರಟು, ಮರುದಿನ 04:05ಕ್ಕೆ ಸಿಎಸ್ಎಂಟಿ ಮುಂಬೈ ತಲುಪಲಿದೆ.

ಎರಡೂ ದಿಕ್ಕುಗಳಲ್ಲಿ ದಾದರ, ಥಾಣೆ, ಕಲ್ಯಾಣ್, ಲೋನಾವಾಲ, ಪುಣೆ, ಸತಾರಾ, ಕರಾಡ್, ಸಾಂಗ್ಲಿ, ಮಿರಜ್, ಕುಡಚಿ, ರಾಯಬಾಗ್, ಘಟಪ್ರಭಾ, ಬೆಳಗಾವಿ, ಲೋಂಡಾ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಎಸ್ಎಂಎಂ ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬಿರೂರು, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಈ ರೈಲಿನಲ್ಲಿ 22 ಬೋಗಿಗಳಿದ್ದು, ಅವುಗಳಲ್ಲಿ 1-ಎಸಿ ಟು ಟೈರ್, 5-ಎಸಿ ತ್ರಿ ಟೈರ್, 10-ಸ್ಲೀಪರ್ ಕ್ಲಾಸ್, 4-ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2-ಎಸ್‌ಎಲ್‌ಆರ್‌ಡಿ ಬೋಗಿಗಳಿವೆ ಎಂದು ಪ್ರಕಟಣೆ ತಿಳಿಸಿದೆ.