ಏ.15 ರಿಂದ ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರ

| Published : Mar 21 2025, 12:38 AM IST

ಏ.15 ರಿಂದ ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದಲ್ಲಿ ಅಭ್ಯಾಸಿ ಟ್ರಸ್ಟ್‌ನ ಅಧ್ಯಕ್ಷ ಕಿರಣ್ ಗಿರ್ಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಭ್ಯಾಸಿ ಟ್ರಸ್ಟ್ ವತಿಯಿಂದ ಏ.15 ರಿಂದ ಮೇ 15ರವರೆಗೆ ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರವನ್ನು ನಗರದ ಸೇಂಟ್ ಜೋಸೆಫ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಅಭ್ಯಾಸಿ ಟ್ರಸ್ಟ್‌ನ ಅಧ್ಯಕ್ಷ ಕಿರಣ್ ಗಿರ್ಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7 ರಿಂದ 14 ವರ್ಷದೊಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬದಾಗಿದ್ದು, ಒಂದು ತಿಂಗಳವರಗೆ ಪ್ರತಿ ದಿನ ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30ರವರೆಗೆ ಶಿಬಿರ ನಡೆಯಲಿದೆ ಎಂದರು. ವಿವಿಧ ಕ್ಷೇತ್ರದ ಪ್ರತಿಭಾವಂತ ಕಲಾವಿದರು, ಶಿಕ್ಷಕರಿಂದ ಅಭಿನಯ, ನಾಟಕ, ಸಂಗೀತ, ಕಥೆ, ರಂಗಾಟಗಳು, ಪುಸ್ತಕ ಓದು, ಚಿತ್ರಕಲೆ, ಕರಕುಶಲತೆ, ಕ್ಷೇತ್ರ ಪ್ರವಾಸ, ಮಕ್ಕಳ ಸಿನಿಮಾ ವೀಕ್ಷಣೆ, ಮಕ್ಕಳ ಸಂತೆ, ಗೊಂಬೆ ತಯಾರಿ, ಪರಿಸರ ನಡಿಗೆ, ಯೋಗ, ವ್ಯಾಯಾಮ, ಉರಗ ಪ್ರಾತ್ಯಕ್ಷಿಕೆ ಮುಂತಾದ ಚಟುವಟಿಕೆಗಳು ಹಾಗೂ ಶಿಬಿರದ ಕೊನೆಯ ದಿನ ಮಕ್ಕಳಿಂದ ಗೀತ ಗಾಯನ ಹಾಗೂ ನಾಟಕ ಪ್ರದರ್ಶನವನ್ನು ಏರ್ಪಡಿಸಿ ತರಬೇತಿಯ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದರು.

ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರದ ಕುರಿತು ಹೆಚ್ಚಿನ ಮಾಹಿತಿಗೆ ಹಾಗೂ ಮಗುವಿನ ಹೆಸರನ್ನು ನೋಂದಾಯಿಸಿಕೊಳ್ಳಲು 7411491077, 3108301194 ಅನ್ನು ಸಂಪರ್ಕಿಸಬಹುದು.

ಸಂತ ಜೋಸೆಫ್‌ರ ಮಹಿಳಾ ಅಭಿವೃದ್ಧಿ ಕೇಂದ್ರದ ಆಡಳಿತಾಧಿಕಾರಿ ಸಿಸ್ಟರ್ ಮರಿಯಾ ಜೋಷ್ ಮಾತನಾಡಿ, ಜಾನಪದ ಕರೆಗೆ ಹೆಸರಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಇತ್ತಿಚೇಗೆ ಜಾನಪದ ಕಲೆಗೆ ಯುವಜನರು ಆಸಕ್ತಿ ತೋರುತ್ತಿಲ್ಲ. ಡಿಜಿಟಲ್‌ ಹಿಂದೆ ಬಿದ್ದಿದ್ದಾರೆ ಇಂಥ ಸಮಯದಲ್ಲಿ ಅಭ್ಯಾಸಿ ಟ್ರಸ್ಟ್ ಪ್ರಾರಂಭಿಸಿ ಬೇಸಿಗೆ ಶಿಬಿರವನ್ನು ಆಯೋಜಿಸಿ ಮಕ್ಕಳಲ್ಲಿ ಜಾನಪದ ಕಲೆಯ ಬೀಜ ಬಿತ್ತುತ್ತಿರುವ ಯುವಕರನ್ನು ಅಭಿನಂದಿಸಿ ಸಹಕರಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಿಬಿರದ ಸಂಚಾಲಕಿ ನಂದಿನಿ, ಜ್ಯೋತಿ, ರವಿಚಂದ್ರಪ್ರಸಾದ್ ಇದ್ದರು.