1500 ಇದ್ದ ವಿದ್ಯಾಸಿರಿ ವಿದ್ಯಾರ್ಥಿವೇತನ ₹2000ಕ್ಕೆ ಹೆಚ್ಚಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

| N/A | Published : Apr 19 2025, 07:57 AM IST

CM Siddaramaiah (Photo/ANI)
1500 ಇದ್ದ ವಿದ್ಯಾಸಿರಿ ವಿದ್ಯಾರ್ಥಿವೇತನ ₹2000ಕ್ಕೆ ಹೆಚ್ಚಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ‘ವಿದ್ಯಾಸಿರಿ’ ಯೋಜನೆಯಡಿ ನೀಡುತ್ತಿರುವ ಮಾಸಿಕ 1500 ರು. ವಿದ್ಯಾರ್ಥಿವೇತನವನ್ನು 2000 ರು.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬೆಂಗಳೂರು :  ಉನ್ನತ ಶಿಕ್ಷಣದ ವೇಳೆ ಹಾಸ್ಟೆಲ್‌ ಸೌಲಭ್ಯ ದೊರೆಯದ ಮಡಿವಾಳ ಸೇರಿ ಎಲ್ಲಾ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ‘ವಿದ್ಯಾಸಿರಿ’ ಯೋಜನೆಯಡಿ ನೀಡುತ್ತಿರುವ ಮಾಸಿಕ 1500 ರು. ವಿದ್ಯಾರ್ಥಿವೇತನವನ್ನು 2000 ರು.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಡಿವಾಳರು ಸೇರಿ ಹಿಂದುಳಿದ ವರ್ಗದವರ ಮಕ್ಕಳು ನಗರ ಪ್ರದೇಶಗಳಲ್ಲಿ ಸ್ವಂತ ವಸತಿ ಖರ್ಚು ಬರಿಸಿಕೊಂಡು ವಿದ್ಯಾಭ್ಯಾಸ ಮಾಡುವುದು ಕಷ್ಟ. 

ನಾವೆಲ್ಲ ಓದುವಾಗ ರೂಂ ಮಾಡಿಕೊಂಡು ಹೋಟೆಲ್‌ನಿಂದ ಸಾಂಬರ್ ತಂದು ಅನ್ನ ಮಾಡಿಕೊಂಡು ಊಟ ಮಾಡುತ್ತಿದ್ದುದು ಗೊತ್ತಿದೆ. ಈ ಕಾರಣಕ್ಕಾಗಿ ನಾನು ಹಾಸ್ಟೆಲ್‌ ಪ್ರವೇಶ ಸಿಗದ ಮಕ್ಕಳಿಗಾಗಿ ವಿದ್ಯಾಸಿರಿ ಯೋಜನೆ ರೂಪಿಸಿ ಮಾಸಿಕ ₹1500 ನೀಡಲಾಗುತ್ತಿದೆ. ಈಗ ಅದು ಸಾಲುವುದಿಲ್ಲ. ಹಾಗಾಗಿ ₹2000ಕ್ಕೆ ಹೆಚ್ಚಿಸಲಾಗುವುದು. ಇದರಿಂದ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ₹20,000 ಸಿಗುತ್ತದೆ ಎಂದರು.