ಸಾರಾಂಶ
Bescom lineman succumbs to death
ಸಿರಿಗೆರೆ: ಬೆಸ್ಕಾಂನಲ್ಲಿ ಮಾರ್ಗದಾಳಾಗಿ ಕೆಲಸ ಮಾಡುತ್ತಿದ್ದ ರಾಜೇಶ್ (೨೮) ಮಂಗಳವಾರ ತಡರಾತ್ರಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.
ಸಮೀಪದ ವಿಜಾಪುರ ಗ್ರಾಮದ ನಿವಾಸಿಯಾಗಿದ್ದ ರಾಜೇಶ್ ಕಳೆದ ಎರಡು ದಿನಗಳಿಂದ ತನ್ನ ಕೆಲಸ ಮುಗಿಸಿಕೊಂಡು ಹುಟ್ಟೂರಿಗೆ ತೆರಳುತ್ತಿದ್ದರು. ನೇಣಿಗೆ ಬಳಸಿರುವ ಸೀರೆಯನ್ನು ಎರಡು ದಿನಗಳ ಹಿಂದೆಯೇ ಜಮೀನಿಗೆ ಸಾಗಿಸಿಟ್ಟುಕೊಂಡಿದ್ದರು ಎಂದು ಹೇಳಲಾಗಿದೆ. ಮಂಗಳವಾರ ರಾತ್ರಿ ತಮ್ಮ ಜಮೀನಿಗೆ ತೆರಳಿ ಮರಕ್ಕೆ ಸೀರೆಯಿಂದ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಭರಮಸಾಗರ ಸಮುದಾಯ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಯಿತು. ಪ್ರಕರಣ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.----
ಫೋಟೊ: ಸಾವಿಗೆ ಶರಣಾಗಿರುವ ಬೆಸ್ಕಾಂ ನೌಕರ ರಾಜೇಶ್