ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು ಇಲ್ಲಿನ ಭಗತ್ ಸಿಂಗ್ (ಸೂಪರ್ ಮಾರ್ಕೇಟ್) ವೃತ್ತದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್ ಆರ್ಗನೈಜೇಶನ್ (ಎಐಡಿವೈಒ), ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಶನ್ (ಎಐಡಿಎಸ್ಒ) ಹಾಗೂ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಭಗತ್ ಸಿಂಗ್ ಅವರ ಜನ್ಮದಿನ ಕಾರ್ಯಕ್ರಮವನ್ನು ಎಐಡಿವೈಒ ಜಿಲ್ಲಾ ಘಟಕ ಕಾರ್ಯದರ್ಶಿ ವಿನೋದ್ ಕುಮಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯದ ಜತೆಗೆ ಜಾತಿ ಪದ್ಧತಿ, ಕೋಮುವಾದದಂತ ಸಾಮಾಜಿಕ ಪಿಡುಗುಗಳ ವಿರುದ್ಧ ರಾಜಿ ರಹಿತವಾಗಿ ಹೋರಾಟ ನಡೆಸಿದ ಮಹಾನ್ ವೀರರಲ್ಲಿ ಭಗತ್ ಸಿಂಗ್ ಹಾಗೂ ನೇತಾಜಿ ಸುಭಾಷಚಂದ್ರ ಬೋಸ್ ಮುಂಚುಣಿಯಲ್ಲಿದ್ದವರು ಎಂದು ಹೇಳಿದರು.ಕಾರ್ಮಿಕ ಮುಖಂಡ ವೀರೇಶ ಎನ್.ಎಸ್, ಎಐಡಿಎಸ್ಒ ಜಿಲ್ಲಾ ಘಟಕದ ಉಪಾಧ್ಯಕ್ಷ ಪೀರ್ ಸಾಬ್ ಮಾತನಾಡಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜ, ಅಮೋಘ, ಶಿವಪ್ಪ, ಮೌನೇಶ್, ಚೋಟು ಬಾಯ್, ಜೈದ್, ಮೌನೇಶ ನಾಯಕ, ಕೃಷ್ಣ, ವೀರೇಶ, ನಂದು, ಅಶೋಕ, ಶಿವು, ಮಹಿಳಾ ಸಂಘಟನಾ ಕಾರ್ಯಕರ್ತೆ ನಾಗವೇಣಿ ಇದ್ದರು.
ಟಿಯುಸಿಐ ಕಚೇರಿ ಭಗತ್ ಸಿಂಗ್ ಜನ್ಮದಿನ: ನಗರದ ಆಶಾಪೂರ ರಸ್ತೆಯ ಟಿಯುಸಿಐ ಕಾರ್ಮಿಕ ರಾಜ್ಯ ಕಾರ್ಯಾಲಯದಲ್ಲಿ ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ (ಎಐಆರ್‌ಎಸ್ಒ) ಹಾಗೂ ಅಖಿಲ ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ (ಆರ್‌ವೈಎಫ್‌ಐ) ಜಂಟಿ ಸಂಘಟನೆಗಳ ನೇತೃತ್ವದಲ್ಲಿ ಭಗತ್ ಸಿಂಗ್ ಅವರ 117 ನೇ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಿತು.ಸಂಘಟನೆ ರಾಜ್ಯ ಮುಖಂಡ ಅಜೀಜ್ ಜಾಗಿರದಾರ ಮಾತನಾಡಿದರು. ವಿದ್ಯಾರ್ಥಿ ಮುಖಂಡರಾದ ನಿರಂಜನ ಕುಮಾರ, ಯಲ್ಲಪ್ಪ, ರವಿಚಂದ್ರನ್, ಆನಂದ ಕುಮಾರ, ಹನೀಫ್ ಅಬಕಾರಿ, ಸಂತೋಷ, ಮಾರೆಪ್ಪ ಸೇರಿ ಇತರರು ಉಪಸ್ಥಿತರಿದ್ದರು.