ಭಗವದ್ಗೀತೆಗೆ ಜಾತಿ ಧರ್ಮವಿಲ್ಲ

| Published : Aug 29 2024, 01:02 AM IST

ಸಾರಾಂಶ

ಭಗವದ್ಗೀತೆ ಕೇವಲ ಹಿಂದುಗಳ ಆಸ್ತಿಯಲ್ಲ ಅದು ಎಲ್ಲ ಧರ್ಮದವರನ್ನೂ ಎಚ್ಚರಿಸುವ ಗೀತೆಯಾಗಿದೆ ಎಂದು ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್‌ ತಿಳಿಸಿದರು.

ದೇವನಹಳ್ಳಿ: ಭಗವದ್ಗೀತೆ ಕೇವಲ ಹಿಂದುಗಳ ಆಸ್ತಿಯಲ್ಲ ಅದು ಎಲ್ಲ ಧರ್ಮದವರನ್ನೂ ಎಚ್ಚರಿಸುವ ಗೀತೆಯಾಗಿದೆ ಎಂದು ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್‌ ತಿಳಿಸಿದರು.

ತಾಲೂಕಿನ ವಿಜಯಪುರದ ಶ್ರೀ ಕೃಷ್ಣ ಯತೀಂದ್ರ ಸತ್ಸಂಗ ಸೇವಾ ಸಮಿತಿಯವರು ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಭಗವದ್ಗೀತಾ ಪಾರಾಯಣ ಮತ್ತು ಸಂಕೀರ್ತನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವದ್ಗೀತೆಗೆ ಯಾವುದೇ ಜಾತಿ ಧರ್ಮವಿಲ್ಲ ಅದರೊಳಗಿನ ಸಾರ ಎಲ್ಲರೂ ಅರಿಯಬೇಕು ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭಾ ಸದಸ್ಯೆ ಶಿಲ್ಪ ಅಜಿತ್‌ರವರು ಮಾತನಾಡಿ ಅಯೋಧ್ಯೆಯಲ್ಲಿ ರಾಮ ಮಂದಿರವಾದಂತೆ ಶ್ರೀ ಕೃಷ್ಣ ಮಂದಿರವನ್ನು ಮಥುರಾದಲ್ಲಿ ನಿರ್ಮಾಣವಾಗಬೇಕು ಎಂದರು.

ಸಮಾರಂಭದಲ್ಲಿ ಎಸ್‌ ಆರ್‌ ಎಸ್‌, ದೇವರಾಜ್‌ ಮಾತನಾಡಿದರು.ಸೇವಾ ಟ್ರಸ್ಟ್‌ಜಿ. ಎಸ್‌. ರಾಮಚಂದ್ರಪ್ಪ. ಪುರಸಭಾ ಸದಸ್ಯ ನಂದಕುಮಾರ್‌, ಎಂ. ರಾಜಣ್ಣ, ಜೆ ಆರ್‌. ಮುನಿವೀರಣ್ಣ ಕೆ. ವಿ. ಮುನಿರಾಜು ಹಾಗೂ ಮುನಿ ನಾರಾಯಣಪ್ಪ ಉಪಸ್ಥಿತರಿದ್ದರು.