ಭಗವದ್ಗೀತಾ ಜಯಂತಿ: ಡಿ.2ರಿಂದ ವಿವಿಧ ಸ್ಪರ್ಧೆ

| Published : Nov 16 2024, 12:38 AM IST

ಸಾರಾಂಶ

ಡಿ.11ರಂದು ಸಂಜೆ 4.30ಕ್ಕೆ ನವನಗರದ 55ನೇ ಸೆಕ್ಟರ್‌ನಲ್ಲಿರುವ ಶ್ರೀವಿಠ್ಠಲ ಕೃಷ್ಣ, ಚಿದಂಬರ ದೇವಸ್ಥಾನದಲ್ಲಿ ಗೀತಾ ಜಯಂತಿ ಸಭಾ ಕಾರ್ಯಕ್ರಮ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶ್ರೀಮದ್ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ, ಸಂಸ್ಕೃತ ಭಾರತಿ, ಶುಕ್ಲಯಜುರ್ವೇದ ಸಂಘ ಹಾಗೂ ಚಿದಂಬರ ಭಜನಾ ಮಂಡಳಿ ಸಹಯೋಗದಲ್ಲಿ ಶ್ರೀಮದ್ ಭಗವದ್ಗೀತಾ ಜಯಂತಿ ಅಂಗವಾಗಿ ಡಿ.2ರಿಂದ ವಿವಿಧ ಸ್ಪರ್ಧೆ ಹಾಗೂ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಂ.ಬಿಂದುಮಾಧವಾಚಾರ್ಯ ನಾಗ ಸಂಪಿಗೆ, ಅಭಿಯಾನದ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಗಿರೀಶ ಮಾಸೂರಕರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.11ರಂದು ಸಂಜೆ 4.30ಕ್ಕೆ ನವನಗರದ 55ನೇ ಸೆಕ್ಟರ್‌ನಲ್ಲಿರುವ ಶ್ರೀವಿಠ್ಠಲ ಕೃಷ್ಣ, ಚಿದಂಬರ ದೇವಸ್ಥಾನದಲ್ಲಿ ಗೀತಾ ಜಯಂತಿ ಸಭಾ ಕಾರ್ಯಕ್ರಮ ನಡೆಯಲಿದೆ. ಚರಂತಿಮಠದ ಶ್ರೀಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪಂ.ಬಿಂದುಮಾಧವಾಚಾರ್ಯ ನಾಗಸಂಪಿಗೆ ಹಾಗೂ ಪಂ.ಅಜೀ ತಾಚಾರ್ಯ ಹನಗಂಡಿ ಪ್ರವಚನ ನೀಡಲಿದ್ದಾರೆ ಎಂದರು.

ಅರ್ಜುನನ ಮೂಲಕ ಭಗವಂತ ಇಡೀ ಮನಕುಲಕ್ಕೆ ನೀಡಿದ ಶ್ರೇಷ್ಠ ಸಂದೇಶವೇ ಗೀತೆ. ಅದರ ಬಗ್ಗೆ ಮಕ್ಕಳಲ್ಲಿ ಈಗಿನಿಂದಲೇ ಜ್ಞಾನ ಮೂಡಿಸುವುದರ ಜತೆಗೆ ಸಂಸ್ಕಾರವಂತರನ್ನಾಗಿಸಲು ಶ್ರೀಸೋಂದಾ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ 2002ರಿಂದಲೂ ನಿರಂತರ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗುತ್ತಿದೆ ಎಂದರು.

ಮಕ್ಕಳಿಗಾಗಿ ಭಗದ್ಗೀತೆ 9ನೇ ಅಧ್ಯಾಯದ ಕಂಠಪಾಠ ಸ್ಪರ್ಧೆ ನಡೆಯಲಿದೆ. ಡಿ.2ರಂದು ತಾಲೂಕು, 8ರಂದು ಜಿಲ್ಲಾಮಟ್ಟದ ಸ್ಪರ್ಧೆಗಳು ನವನಗರದ ಶ್ರೀಚಿದಂಬರ ದೇವಸ್ಥಾನದಲ್ಲಿ ನಡೆಯಲಿದೆ. 4ನೇ ತರಗತಿವರೆಗಿನ ಮಕ್ಕಳಿಗೆ ಜಿಲ್ಲಾಮಟ್ಟದ ವರೆಗಿನ ಸ್ಪರ್ಧೆಗೆ ಮಾತ್ರವೇ ಅವಕಾಶವಿರಲಿದ್ದು, 5ರಿಂದ 10ನೇ ತರಗತಿ ವರೆಗಿನ ಮಕ್ಕಳು 9ನೇ ಅಧ್ಯಾಯದ ಎಲ್ಲ ಶ್ಲೋಕಗಳನ್ನು ಕಂಠಪಾಠ ಮಾಡಿ 5 ನಿಮಿಷದ ಅವಧಿಯಲ್ಲಿ ಹೇಳಬೇಕು. ನಂತರ 5 ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಭಗವದ್ಗೀತೆಯಿಂದ ಸಾಮಾಜಿಕ ಸಾಮರಸ್ಯ ವಿಚಾರವಾಗಿ ಭಾಷಣ ಸ್ಪರ್ಧೆ, 8ರಿಂದ 20ನೇ ತರಗತಿ ವಿದ್ಯಾರ್ಥಿಗಳಿಗೆ ಭಗದ್ಗೀತೆಯಿಂದ ದೇಶದ ಸಮಗ್ರತೆ (ರಾಷ್ಟ್ರೀಯ ಭಾವೈಕ್ಯ), ಪದವಿಪೂರ್ವ, ಪದವಿ ವಿದ್ಯಾರ್ಥಿಗಳು ಹಾಗೂ ಎಲ್ಲ ವಯೋಮಾನದವರಿಗೆ ಶ್ರೀಭಗವದ್ಗೀತೆಯಿಂದ ವಿಶ್ವಭ್ರಾತೃತ್ವ ವಿಷಯವಾಗಿ ಸ್ಪರ್ಧೆಗಳು ಜರುಗಲಿವೆ ಎಂದರು.

ಡಿ.7ರೊಳಗಾಗಿ ವಿದ್ಯಾರ್ಥಿಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ವಿದ್ಯಾರ್ಥಿ ಪಡೆದವರು ಡಿ.13ರಂದು ವಿಜಯಪುರದಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು. ಅಭಿಯಾನದ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಡಾ.ಸಿ.ಎಸ್. ಪಾಟೀಲ, ಹಿರಿಯ ಲೆಕ್ಕಪರಿಶೋಧಕ ಶಿವರಾಮ ಹೆಗಡೆ, ಎಸ್.ಆರ್. ದೇಸಾಯಿ ಉಪಸ್ಥಿತಿದ್ದರು.

ಒಂದು ವಾರ ಭಗವದ್ಗೀತೆ ಪಾರಾಯಣ

ಡಿ.4ರಿಂದ ಒಂದು ವಾರಗಳ ಕಾಲ ಪ್ರತಿ ಮನೆಯಲ್ಲಿ ಭಗವದ್ಗೀತೆ 9ನೇ ಅಧ್ಯಾಯ ಪಠಿಸಲು ಸಾಮೂಹಿಕ ಪಾರಾಯಣ ಹಮ್ಮಿಕೊಳ್ಳಲಾಗಿದ್ದು, ಹೆಸರು ನೋಂದಾಯಿಸಲು 9342458122ಗೆ ಸಂಪಕಿಸಲು ಕೋರಲಾಗಿದೆ.