ಸಾರಾಂಶ
ಗಂಗೆಯನ್ನು ಭೂಮಿ ತರಿಸಿದನಲ್ಲದೆ ರಾಜನಾಗಿ ಭರತ ಖಂಡವನ್ನಾಳಿದ ಕೀರ್ತಿ ಭಗೀರಥ ಮಹರ್ಷಿಗಳಿಗೆ ಸಲ್ಲುತ್ತದೆ
ಕನಕಗಿರಿ: ತಪಸ್ಸಿನ ಫಲವಾಗಿ ಗಂಗೆಯನ್ನು ಧರೆಗಿಳಿಸಿ ಜನ ಸಾಮಾನ್ಯರಿಗೆ ಪಶು, ಪಕ್ಷಿಗಳಿಗೆ ನೀರಿನ ದಾಹ ತೀರಿಸಿದ ಭಗೀರಥ ಮಹರ್ಷಿ ಕಾಯಕ ಬಹುದೊಡ್ಡದಾಗಿದೆ ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ಹೇಳಿದರು.
ಪಟ್ಟಣದ ೧೫ನೇ ವಾರ್ಡ್‌ನ ಭಗೀರಥ ಮಹರ್ಷಿ ಜಯಂತ್ಯುತ್ಸವ ನಿಮಿತ್ತ ಅವರ ವೃತ್ತಕ್ಕೆ ಪೂಜೆ ಸಲ್ಲಿಸಿ ಭಾನುವಾರ ಮಾತನಾಡಿದರು.ಗಂಗೆಯನ್ನು ಭೂಮಿ ತರಿಸಿದನಲ್ಲದೆ ರಾಜನಾಗಿ ಭರತ ಖಂಡವನ್ನಾಳಿದ ಕೀರ್ತಿ ಭಗೀರಥ ಮಹರ್ಷಿಗಳಿಗೆ ಸಲ್ಲುತ್ತದೆ. ಇಂತಹ ಮಹನೀಯರ ತಪಸ್ಸು, ಸಾಧನೆ ಸ್ಪೂರ್ತಿಯಾಗಿದ್ದು, ಅವರ ತತ್ವಾದರ್ಶ ಮೈಗೂಡಿಸಿಕೊಂಡು ಬದುಕನ್ನು ಸಾರ್ಥಕವಾಗಿಸಿಕೊಳ್ಳೋಣ ಎಂದರು.
ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಮಾತನಾಡಿದರು.ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಹನುಮಂತ ಬಸರಿಗಿಡದ, ಅಭಿಷೇಕ ಕಲುಬಾಗಿಲಮಠ, ಸುರೇಶ ಗುಗ್ಗಳಶೆಟ್ರ, ಭಗೀರಥ ಸಮಾಜದ ತಾಲೂಕಾಧ್ಯಕ್ಷ ಚಿನ್ನಪ್ಪ ಉಪ್ಪಾರ, ಗಂಗಾಧರಸ್ವಾಮಿ, ಶರಣಪ್ಪ ಭತ್ತದ, ಸದಾನಂದ ಸಮಗಂಡಿ, ನಾಗೇಶ ಉಪ್ಪಾರ, ಪ್ರಾಣೇಶ ಪೂಜಾರ, ಕನಕದಾಸ ಪೂಜಾರಿ, ಮರಿಸ್ವಾಮಿ ಯಾದವ ಇತರರಿದ್ದರು.