* ಶ್ರೀ ಭಕ್ತ ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತ: ಶಾಸಕ ಜೆ.ಎಚ್.ಶ್ರೀನಿವಾಸ್

| Published : Dec 01 2023, 12:45 AM IST

* ಶ್ರೀ ಭಕ್ತ ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತ: ಶಾಸಕ ಜೆ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕನಕದಾಸರ ಚಿಂತನೆ ಇಂದಿಗೂ ಪ್ರಸ್ತುತ: ಜೆ.ಎಚ್.ಶ್ರೀನಿವಾಸ್

ಕನ್ನಡಪ್ರಭ ವಾರ್ತೆ, ತರೀಕೆರೆ

ಶ್ರೀ ಭಕ್ತ ಕನಕದಾಸರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಗುರುವಾರ ತಾಲೂಕು ಅಡಳಿತ, ತಾಲೂಕು ಪಂಚಾಯಿತಿ ಮತ್ತು ಪುರಸಭೆ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶ್ರೀ ಭಕ್ತ ಕನಕದಾಸರ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀ ಭಕ್ತ ಕನಕದಾಸರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀ ಭಕ್ತ ಕನಕದಾಸರ ಕೀರ್ತನೆಗಳು, ಚಿಂತನೆಗಳು ಇವತ್ತಿಗೂ ಪ್ರಸ್ತುತ. ಶ್ರೀ ಭಕ್ತ ಕನಕದಾಸರು ದೈವಭಕ್ತಿ ಆಪಾರವಾಗಿದೆ. ಕನಕದಾಸರು ಕೃತಿಗಳ ಮೂಲಕ ಮೂಢ ನಂಬಿಕೆ ವಿರುದ್ದ ಹೋರಾಡಿದರು, ಅಂತ ರಂಗದ ಶುದ್ಧಿಯಾಗಬೇಕು. ಬೆಳವಣಿಗೆಗಳನ್ನು ಪ್ರೊತ್ಸಾಹಿಸಬೇಕು ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಪರಮೇಶ್ ಮಾತನಾಡಿ ಶ್ರೇಷ್ಠ ದಾಸ ಪರಂರೆಯಲ್ಲಿ ಶ್ರೀ ಭಕ್ತ ಕನಕದಾಸರು ಅಶ್ವಿನಿ ದೇವತೆ ಗಳು, ಶ್ರೀ ಭಕ್ತ ಕನಕದಾಸರು ಶ್ರೀಕೃಷ್ಮನ ಪರಮ ಭಕ್ತರಾಗಿದ್ದಾರೆ ಎಂದು ಹೇಳಿದರು.

ತಾಲೂಕು ಕುರುಬ ಸಮಾಜದ ಅಧ್ಯಕ್ಷ ಡಿ.ವಿ.ಪದ್ಮರಾಜು ಮಾತನಾಡಿ ಶ್ರೀ ಭಕ್ತಕನಕದಾಸರ ಜಯಂತಿಯನ್ನು ಶಾಲಾ ಕಾಲೇಜುಗಳಲ್ಲಿ ಆಯೋಜಿಸಬೇಕು ಎಲ್ಲರನ್ನು ಒಳಗೊಂಡಂತಹ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದರು.

ಕಡೂರು ತಾಲೂಕು ಜೋಡಿತಿಮ್ಮಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ವಿಜಯಕುಮಾರ್ ಎಂ.ಕೆ.ವಿಶೇಷ ಉಪನ್ಯಾಸ ನೀಡಿದರು. ಶ್ರೀ ಭಕ್ತಕನಕದಾಸರು ಅದ್ಬುತವಾದ ಸಾಹಿತ್ಯ ರಚಿಸಿದ್ದಾರೆ. ಶ್ರೀ ಭಕ್ತಕನಕದಾಸರು ದಾಸ ಸಾಹಿತ್ಯದ ಪಿತಾಮಹರು ಎಂದು ಹೇಳಿದರು.

ಇದೇ ವೇಳೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿತ್ತು

ತಹಸೀಲ್ದಾರ್ ವಿ.ಎಸ್.ರಾಜೀವ್ , ಪುರಸಭೆ ಉಪಾಧ್ಯಕ್ಷೆ ರಿಹಾನ ಪರ್ವಿನ್, ಸದಸ್ಯರು, ತಹಸೀಲ್ದಾರ್ ರಾಜೀವ್, ಡಿವೈಎಸ್.ಪಿ.ಹಾಲಮೂರ್ತಿರಾವ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಗೋವಿಂದಪ್ಪ, ಪೊಲೀಸ್ ಇನ್ಸಪೆಕ್ಟರ್ ವೀರೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಗೋವಿಂದಪ್ಪ , ಲಕ್ಷ್ಮಿ ವಿಶ್ವನಾಥ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.30ಕೆಟಿಆರ್.ಕೆ041ಃ

ತರೀಕೆರೆಯಲ್ಲಿ ಏರ್ಪಡಿಸಿದ್ದ ಶ್ರೀ ಭಕ್ತಕನಕ ದಾಸರ ಜಯಂತ್ಯುತ್ಸವದ ಉದ್ಘಾಟನೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ನೆರವೇರಿಸಿದರು. ಪುರಸಭೆ ಅಧ್ಯಕ್ಷ ಪರಮೇಶ್, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಡಿ.ವಿ.ಪದ್ಮರಾಜ್, ತಹಸೀಲ್ದಾರ್ ವಿ.ಎಸ್.ರಾಜೀವ್ ಮತ್ತಿತರರು ಇದ್ದರು.