ಬೆಳಕಿನ ವೈಭವದೊಂದಿಗೆ ಕಂಗೊಳಿಸಿದ ಭರಚುಕ್ಕಿ ಜಲಪಾತ

| Published : Aug 11 2024, 01:33 AM IST

ಬೆಳಕಿನ ವೈಭವದೊಂದಿಗೆ ಕಂಗೊಳಿಸಿದ ಭರಚುಕ್ಕಿ ಜಲಪಾತ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲ: ತಾಲೂಕಿನ ಭರಚುಕ್ಕಿ ಜಲಪಾತದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಜಲಪಾತೋತ್ಸವದಲ್ಲಿ ಬೆಳಕಿನ ವೈಭಗಳೊಂದಿಗೆ ಜಲಪಾತೋತ್ಸವ ನೆರೆದಿದ್ದ ಗಣ್ಯರು ಹಾಗೂ ಪ್ರವಾಸಿಗರನ್ನು ಆಕರ್ಷಿಸಿತು.

ಕೊಳ್ಳೇಗಾಲ: ತಾಲೂಕಿನ ಭರಚುಕ್ಕಿ ಜಲಪಾತದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಜಲಪಾತೋತ್ಸವದಲ್ಲಿ ಬೆಳಕಿನ ವೈಭಗಳೊಂದಿಗೆ ಜಲಪಾತೋತ್ಸವ ನೆರೆದಿದ್ದ ಗಣ್ಯರು ಹಾಗೂ ಪ್ರವಾಸಿಗರನ್ನು ಆಕರ್ಷಿಸಿತು.

ಕೆಂಪು, ಹಸಿರು, ನೀಲಿ, ಹಳದಿ ಸೇರಿದಂತೆ ಅನೇಕ ಬಣ್ಣ ಬಣ್ಣಗಳ ಚಿತ್ತಾರಗಳುಳ್ಳ ಲೇಸರ್ ದೀಪಗಳು ಉಕ್ಕಿ ಹರಿಯುತ್ತಿದ್ದ ಭರಚುಕ್ಕಿ ಜಲಪಾತದ ಅಂದಕ್ಕೆ ಇನ್ನಷ್ಟು ಮೆರುಗು ನೀಡಿತು.

ಪ್ರತಿ ಬಾರಿಯೂ ಲೇಸರ್ ದೀಪದ ಚಿತ್ತಾರಕ್ಕೆ ಪ್ರವಾಸಿಗರು ಮೈಪುಳಕಗೊಂಡರು.ಕೆಲಕಾಲ ಬಣ್ಣ ಬಣ್ಣಗಳಿಂದ ಹರಿಯುತ್ತಲೆ ವೈಭವ ಸೂಸಿದ ಭರಚುಕ್ಕಿ ಜಲಪಾತದ ಅಂದವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸವಿದರು.

ಜಲಪಾತೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಾ ಪ್ರೇಕ್ಷಕರಿಗೆ ರಸದೌತಣ ಒದಗಿಸಿತು. ಜಲಪಾತೋತ್ಸವ ವೀಕ್ಷಣೆಗೆ ಸಾವಿರಾರು ಪ್ರವಾಸಿಗರ ದಂಡೆ ಆಗಮಿಸಿತ್ತು. ಈ ಹಿನ್ನೆಲೆ ಇಂದಿನ ಜಲಪಾತೋತ್ಸವ ನಾನಾ ಕಾರಣಗಳಿಗಾಗಿ ಗಮನ ಸೆಳೆಯಿತು. ಕಾರ್ಯಕ್ರಮ ಪ್ರಾರಂಭ 2 ಗಂಟೆ ವಿಳಂಬವಾದರೂ ಪ್ರವಾಸಿಗರು ಜಗ್ಗದೆ ಭರಚುಕ್ಕಿಯ ವೈಭವವನ್ನು ಕಣ್ ತುಂಬಿಕೊಳ್ಳಲು ಕಾದು ಕುಳಿತಿದ್ದು ಗಮನ ಸೆಳೆಯಿತು.10ಕೆಜಿಎಲ್ 72, 73 ಮತ್ತು 74ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತೋತ್ಸವವು ವಿವಿಧ ಬಣ್ಣ ಬಣ್ಣದ ಚಿತ್ತಾರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯಿತು.