ಸಾರಾಂಶ
ರೈತರು ನಮ್ಮ ದೇಶದ ಬೆನ್ನಲಭು ಬ್ಯಾಂಕಿನಲ್ಲಿ ಸಾಲ ಪಡೆದು ವ್ಯವಸಾಯ ಮಾಡಿ ಕಷ್ಟು ಪಡುತ್ತಾರೆ.
ಕನ್ನಡಪ್ರಭ ವಾರ್ತೆ ಮೈಸೂರುಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ನಂಜನಗೂಡು ತಾ ಘಟಕ ಹಾಗೂ ಹೊಸಕೋಟೆ ಗ್ರಾಮ ಘಟಕದಿಂದ ರೈತ ದಿನಾಚರಣೆ ಅಂಗವಾಗಿ ಹೊಸಕೋಟೆ ಗ್ರಾಮದಲ್ಲಿ ಸಂಘದ ಕಚೇರಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು.ಕೆರೆಹಳ್ಳಿ ಬಿ. ದೊರೆಸ್ವಾಮಿ, ಹೊಸಕೋಟೆ ಸಿದ್ಧಪ್ಪ, ದೇವನೂರು ನಾಗೇಂದ್ರ, ಬಸವಟ್ಟಿಗೆ ಪ್ರಭುಸ್ವಾಮಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಸವಟ್ಟಿಗೆ ಪ್ರಭುಸ್ವಾಮಿ, ರೈತರು ನಮ್ಮ ದೇಶದ ಬೆನ್ನಲಭು ಬ್ಯಾಂಕಿನಲ್ಲಿ ಸಾಲ ಪಡೆದು ವ್ಯವಸಾಯ ಮಾಡಿ ಕಷ್ಟು ಪಡುತ್ತಾರೆ. ಆದರೆ ಸರ್ಕಾರ ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಲೇಬೇಕು. ಸರ್ಕಾರ ಉತ್ತಮ ಬೆಲೆ ನೀಡಿದ್ದೆ ಆದ್ದಲ್ಲಿ ರೈತನ ಕುಟುಂಬದ ಜೊತೆ, ನಾಡಿನ ಜನತೆ ಆರೋಗ್ಯವಾಗಿ ಕ್ಷೇಮವಾಗಿರುತ್ತದೆ ಎಂದು ಅವರು ಹೇಳಿದರು.
ನಂತರ ಮಾತನಾಡಿದ ಸಿದ್ದಪ್ಪ ಮಾತನಾಡಿ, ಇಂದು ಭಾರತದ 5ನೇ ಪಧಾನಿ ಚೌಧರಿ ಚರಣ್ ಸಿಂಗ್ ಅವರ ಜನುಮದಿನದ ಅಂಗವಾಗಿ ರೈತ ದಿನಾಚರಣೆ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ರೈತರು ಜಮೀನನ್ನು ಮಾರಿಕೊಳ್ಳದೆ ಸೂಕ್ತವಾಗಿ ಪರಿಣಿತರಿಂದ ಮಹಿತಿ ಪಡೆದು ಬೆಳೆಯನ್ನು ಬೆಳೆಯುವುದರಿಂದ ಹಾಗೂ ಸಾವಯವ ಜೈವಿಕ ಅಂಶದಿಂದ ಬೆಳೆ ಬೆಳೆಯುವುದರಿಂದ ಪ್ರತಿಯೊಬ್ಬರ ಆರೋಗ್ಯ ಹಾಗೂ ಬೆಳೆ ಕೊಡ ಭಾರಿ ಪ್ರಮಾಣದ ಬೆಳೆ ಹೆಚ್ಚುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಭಾರತೀಯ ಕಿಸಾನ್ ಸಂಘದ ನಂಜನಗೂಡು ತಾಲೂಕು ಉಪಾಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಇಂದೂಧರ, ಗ್ರಾಮದ ರೈತರಾದ ಶಿವಮಲ್ಲಪ್ಪ, ರಾಜಶೇಖರ್ ಮೂರ್ತಿ, ಸ್ವಾಮಿ, ಮಹೇಶ್, ವಿಜಯ, ಬಿಜೆಪಿ ಮುಖಂಡರಾದ ಲೋಹಿತ್, ಮಧು ಮೊದಲಾದವರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))