ಭೀಮನ ಅಮಾವಾಸ್ಯೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ

| Published : Jul 25 2025, 12:31 AM IST

ಭೀಮನ ಅಮಾವಾಸ್ಯೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ
Share this Article
  • FB
  • TW
  • Linkdin
  • Email

ಸಾರಾಂಶ

ಮಾದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ರಮೇಶ್ ಗೌಡ ಕಳೆದ ನಾಲ್ಕು ವರ್ಷಗಳಿಂದ ದೇವಾಲಯ ಆವರಣವನ್ನು ವಿಶೇಷ ಬಗೆ ಬಗೆಯ ಹೂಗಳಿಂದ ಅಲಂಕಾರಗೊಳಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಶ್ರೀ ಮಲೆ ಮಾದೇಶ್ವರ ಕ್ಷೇತ್ರದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತ ಸಮೂಹ ಉಘೇ ಉಘೇ ಮಾದಪ್ಪ ಎಂದು ಘೋಷಣೆ ಕೂಗುತ್ತಾ ದೇವರ ದರ್ಶನ ಪಡೆದು ಪುನೀತರಾದರು.

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಭೀಮನ ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಲೂರು ಬೃಹನ್ ಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಬೇಡಗಂಪಣ ಸರದಿ ಅರ್ಚಕರಿಂದ ಮಾದೇಶ್ವರನಿಗೆ ಪೂಜಾ ಕಾರ್ಯಗಳು ಧಾರ್ಮಿಕ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ನಡೆಯಿತು.ಟನ್‌ಗಟ್ಟಲೆ ಹೂವಿನ ಅಲಂಕಾರ:ಭೀಮನ ಅಮಾವಾಸ್ಯೆ ಅಂಗವಾಗಿ ಮಲೆ ಮಾದೇಶ್ವರ ಬೆಟ್ಟ ದೇವಸ್ಧಾನಕ್ಕೆ ತಮಿಳುನಾಡಿನ ಹೊಸೂರಿನ ಉದ್ಯಮಿ ಹಾಗೂ ಹೂವಿನ ವ್ಯಾಪಾರಿ ರಮೇಶ್ ಗೌಡ ಟನ್‌ಗಟ್ಟಲೆ ವಿವಿಧ ಬಗೆಯ ಹೂಗಳನ್ನು ತಂದು ನೂರಾರು ಕಾರ್ಮಿಕರನ್ನು ಕರೆತಂದು ದೇವಾಲಯಕ್ಕೆ ವಿವಿಧ ಬಗೆಯ ಅಲಂಕಾರ ಮಾಡಿಸಿ ಮಾದಪ್ಪನ ಭಕ್ತರು ಗಮನ ಸೆಳೆಯುವಂತೆ ಮಾಡಿದ್ದರು. ಮಾದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ರಮೇಶ್ ಗೌಡ ಕಳೆದ ನಾಲ್ಕು ವರ್ಷಗಳಿಂದ ದೇವಾಲಯ ಆವರಣವನ್ನು ವಿಶೇಷ ಬಗೆ ಬಗೆಯ ಹೂಗಳಿಂದ ಅಲಂಕಾರಗೊಸತ್ತಿದ್ದು, ಮಲೆ ಮಾದೇಶ್ವರ ಬೆಟ್ಟದ ರೀತಿಯೇ ದೇಶದ ಪ್ರಸಿದ್ಧ ತಿರುಪತಿ ತಿರುಮಲ, ಶಬರಿಮಲೆ, ಗುರುವಾಯೂರು ತಿರುನಲ್ಲಾರ್ ಸೇರಿದಂತೆ ನಾನಾ ದೇಗುಲಗಳಿಗೆ ಹೂವಿನ ಅಲಂಕಾರ ಮಾಡಿಸುವ ಮೂಲಕ ಭಕ್ತಿ ಸಮರ್ಪಿಸುತ್ತಿದ್ದಾರೆ.ಮಲೆಮಾದೇಶ್ವರ ಬೆಟ್ಟದಲ್ಲಿ ಬೆಳ್ಳಿ ಉತ್ಸವ ತೇರಿನ ಮುಂದೆ ತಮಿಳುನಾಡಿನ 40 ಹೆಣ್ಣು ಮಕ್ಕಳು ಕೋಲಾಟವಾಡುವ ಮೂಲಕ ಗಮನ ಸೆಳೆದರು.ವಿಶೇಷ ದಾಸೋಹ ವ್ಯವಸ್ಥೆ:

ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಭೀಮನ ಅಮಾವಾಸ್ಯೆ ಪೂಜೆಗೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಮಾದಪ್ಪನ ಭಕ್ತಾದಿಗಳಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಶೇಷ ದಾಸೋಹ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಬೆಳಗ್ಗೆ ಭಕ್ತರಿಗೆ ಕೇಸರಿಬಾತ್‌, ಉಪ್ಪಿಟ್ಟು, ಬಾತ್, ಮಧ್ಯಾಹ್ನದ ಭೋಜನ ವ್ಯವಸ್ಥೆ ಅನ್ನ ಸಾಂಬಾರ್ ಮತ್ತು ತರಕಾರಿ ಪಲ್ಯ, ಮಜ್ಜಿಗೆ ಹುಳಿ, ರಸಂ, ಸಾಂಬಾರ್ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.ಗಮನಸೆಳೆದ ಉರುಳು ಸೇವೆ:

ಮಲೆ ಮಾದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಯುವಕರೇ ಹೆಚ್ಚಾಗಿ ಮಾದೇಶ್ವರನಿಗೆ ಹರಕೆ ಹೊತ್ತು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿ ಉರುಳು ಸೇವೆ ಮಾಡುವ ಮೂಲಕ ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನಲ್ಲಿ ನಿವೇದನೆ ಮಾಡಿಕೊಂಡ ಭಕ್ತರು ಹಾಗೂ ರುದ್ರಾಕ್ಷಿ ಮಂಟಪೋತ್ಸವ ಹುಲಿ ವಾಹನ ಉತ್ಸವ ಮಲೆ ಮಾದೇಶ್ವರ ಉತ್ಸವ ಹಾಗೂ ಬೆಳ್ಳಿ ರಥೋತ್ಸವದಲ್ಲಿ ಭಾಗವಹಿಸಿ ಭಕ್ತಾದಿಗಳು ಗಮನ ಸೆಳೆಯಿತು.ಬಿಗಿ ಬಂದೋಬಸ್ತ್:

ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಭೀಮನ ಅಮಾವಾಸ್ಯೆ ಪೂಜೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಟಿ. ಕವಿತಾ ಹಾಗೂ ಉಪ ವಿಭಾಗ ಅಧೀಕ್ಷಕ ಧರ್ಮೇಂದರ್ ಮಾರ್ಗದರ್ಶನದಲ್ಲಿ ಮಲೆ ಮಾದೇಶ್ವರ ಬೆಟ್ಟದಲ್ಲಿ ಆಯಾಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಕೋಟ್‌....

ನನಗೆ ಮಲೆಮದೇಶ್ವರನನ್ನು ಕಂಡರೆ ವಿಶೇಷ ಭಕ್ತಿ ಪ್ರತಿ ಭೀಮನ ಅಮಾವಾಸ್ಯೆಗೆ ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಿಸಿರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತಿದೆ ಎಲ್ಲವೂ ಮಲೆ ಮಾದೇಶ್ವರನ ದಯೆ.ರಮೇಶ್ ಗೌಡ, ಹೂವಿನ ವ್ಯಾಪಾರಿ, ಹೊಸೂರು.ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆಗೆ ಬರುವ ಭಕ್ತಾದಿಗಳಿಗೆ ವಿಶೇಷ ದಾಸೋಹ ವ್ಯವಸ್ಥೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯಗಳ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿದೆ ಬರುವ ಭಕ್ತಾದಿಗಳಿಗೆ 300 ಬಸ್ ಗಳನ್ನು ಸಹ ವ್ಯವಸ್ಥೆ ಮಾಡಲಾಗಿದೆ.

ಎ.ಇ. ರಘು, ಕಾರ್ಯದರ್ಶಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆ ಮಾದೇಶ್ವರ ಬೆಟ್ಟ----------------

24ಸಿಎಚ್ಎನ್‌12- ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರಿಂದ ಉರುಳು ಸೇವೆ

24ಸಿಎಚ್ಎನ್‌13- ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರಿಂದ ಕೋಲಾಟ

24ಸಿಎಚ್ಎನ್‌11- ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಿರುವುದು.

23ಸಿಎಚ್ಎನ್‌14- ಮಲೆ ಮಹದೇಶ್ವರ ಸ್ವಾಮಿ