ದುಬಾರೆ ಸಾಕಾನೆ ಪಡೆಗಳ ಜೊತೆಗೆ ಆಗಮಿಸಿದ ಕಾವಾಡಿಗರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾಗುತ್ತಿದ್ದಂತೆಯೇ, ಚತುರತೆಯಿಂದ ತಪ್ಪಿಸಿಕೊಂಡ ಒಂಟಿಕೊರೆ ಕಾಡಾನೆ ಕಾಡಿನೊಳಗೆ ಓಡಿಹೋಗಿತ್ತು. ಇದರಿಂದಾಗಿ ಕಾರ್ಯಾಚರಣೆಗೆ ವಿಘ್ನವಾಗಿ ಮಟಕ ಕೋಳಿಸಲಾಗಿತ್ತು. ತಲೆ ತಪ್ಪಿಸಿಕೊಂಡಿದ್ದ ಕಾಡಾನೆ ಶೋಧನೆ ತೀವ್ರಗೊಂಡಿದ್ದು, ಇಟಿಎಫ್ ತಂಡ ಕಾಡಾನೆಯನ್ನು ಹಿಂಬಾಲಿಸುತ್ತಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಚೀಕನಹಳ್ಳಿ ಗ್ರಾಮದ ಸುತ್ತಮುತ್ತ ನರಹಂತಕ ಒಂಟಿಕೋರೆ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹಾಗೂ ಇಟಿಎಫ್ ಸಿಬ್ಬಂದಿಯಿಂದ ಎರಡನೇ ದಿನದ ಕಾರ್ಯಾಚರಣೆ ಶುಕ್ರವಾರ ಮಧ್ಯಾಹ್ನದಿಂದ ಚಾಲನೆ ನೀಡಲಾಯಿತು.ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ ಕಾಡಾನೆ:

ಗುರುವಾರ ದುಬಾರೆ ಸಾಕಾನೆ ಪಡೆಗಳ ಜೊತೆಗೆ ಆಗಮಿಸಿದ ಕಾವಾಡಿಗರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಮುಂದಾಗುತ್ತಿದ್ದಂತೆಯೇ, ಚತುರತೆಯಿಂದ ತಪ್ಪಿಸಿಕೊಂಡ ಒಂಟಿಕೊರೆ ಕಾಡಾನೆ ಕಾಡಿನೊಳಗೆ ಓಡಿಹೋಗಿತ್ತು. ಇದರಿಂದಾಗಿ ಕಾರ್ಯಾಚರಣೆಗೆ ವಿಘ್ನವಾಗಿ ಮಟಕ ಕೋಳಿಸಲಾಗಿತ್ತು. ತಲೆ ತಪ್ಪಿಸಿಕೊಂಡಿದ್ದ ಕಾಡಾನೆ ಶೋಧನೆ ತೀವ್ರಗೊಂಡಿದ್ದು, ಇಟಿಎಫ್ ತಂಡ ಕಾಡಾನೆಯನ್ನು ಹಿಂಬಾಲಿಸುತ್ತಿದೆ.ಮದವೇರಿದ ಸುಗ್ರೀವ, ಲಕ್ಷ್ಮಣ ಆನೆಗಳು:

ಗುರುವಾರ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಒಂಟಿ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಹಗ್ಗದಿಂದ ಬಂಧಿಸಲು ಸಿಬ್ಬಂದಿ ಮುಂದಾಗುತ್ತಿದ್ದಂತೆಯೇ, ಚತುರತೆಯಿಂದ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡ ಒಂಟಿಕೋರೆ ಕಾಡಾನೆ ಕಾಡಿನೊಳಗೆ ಓಡಿಹೋಗಿತ್ತು. ಇದಲ್ಲದೆ ಬಿಕ್ಕೋಡು ಸಮೀಪದ ಆನೆ ಬಿಡಾರದಲ್ಲಿ ಸುಗ್ರೀವ ಎಂಬ ಸಾಕಾನೆಯೊಂದು ತನ್ನ ಮೈ ತೊಳೆಯುತ್ತಿದ್ದ ಕಾವಾಡಿಗನ ಮೇಲೆ ತೀವ್ರವಾಗಿ ಹಲ್ಲೆ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿರುವ ರಾಜು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪುಂಡಾನೆ ಸೆರೆಗೆ ಭೀಮನ ಆಗಮನ :

ಈ ನಡುವೆ ಕಾರ್ಯಾಚರಣೆ ಗುಂಪಿನಲ್ಲಿದ್ದ ಸುಗ್ರೀವ ಹಾಗೂ ಲಕ್ಷ್ಮಣ ಆನೆಗಳಿಗೆ ಮದ ಏರಿದೆ ಎನ್ನುವ ಕಾರಣಕ್ಕೆ ಎರಡು ಆನೆಗಳನ್ನು ಬಿಕ್ಕೋಡು ಆನೆ ಬಿಡಾರದಿಂದ ದುಬಾರೆ ಆನೆ ಶಿಬಿರಕ್ಕೆ ವಾಪಸ್ಸು ಕಳಿಸಲಾಗಿದೆ. ಈ ಎರಡು ಆನೆಗಳ ಬದಲಿಗೆ ಭೀಮ ಹಾಗೂ ಶ್ರೀಕಂಠ ಎಂಬ ಆನೆಗಳು ಶುಕ್ರವಾರ ಆಗಮನವಾಗಿವೆ. ಕ್ಯಾಪ್ಟನ್ ಭೀಮನ ಆಗಮನದಿಂದ ಕಾಡಾನೆ ಕಾರ್ಯಾಚರಣೆಗೆ ಹೊಸ ಹುರುಪು ಬಂದಂತಾಗಿದೆ. ಇದರಿಂದಾಗಿ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಂಡಿದ್ದು, ಇಟಿಎಫ್ ತಂಡ ಕಾಡಾನೆಯನ್ನು ಹಿಂಬಾಲಿಸುತ್ತಿದೆ. ಕಾರ್ಯಾಚರಣೆಯಲ್ಲಿ ಕುಮ್ಕಿ ಆನೆಗಳಾದ ಭೀಮ, ಶ್ರೀಕಂಠ, ಧನಂಜಯ, ಅಯ್ಯಪ್ಪ, ಶ್ರೀರಾಮ ಹಾಗೂ ಹರ್ಷ ಭಾಗವಹಿಸಿವೆ. ಗುರುವಾರ ನಡೆದ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಶುಕ್ರವಾರ ಬೆಳಿಗ್ಗೆಯೇ ಇಟಿಎಫ್ ಸಿಬ್ಬಂದಿ ಪುಂಡಾನೆಯ ಚಲನವಲನವನ್ನು ಪತ್ತೆಹಚ್ಚಿ ಟ್ರ್ಯಾಕ್ ಮಾಡಿದ್ದಾರೆ.ಈ ಮಧ್ಯೆ, ಕಾರ್ಯಾಚರಣೆಗೆ ಹೆಚ್ಚುವರಿ ಬಲ ನೀಡಲು ಸಾಕಾನೆಗಳಾದ ಸುಗ್ರೀವ ಹಾಗೂ ಲಕ್ಷ್ಮಣ ಬದಲಿಗೆ ಶ್ರೀಕಂಠ ಮತ್ತು ಭೀಮ ಅವರನ್ನು ಕರೆತರಲಾಗಿದೆ. ಕಾಡಾನೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವ ಉದ್ದೇಶದಿಂದ ಅರಣ್ಯ ಇಲಾಖೆ ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯಾಚರಣೆ ಮುಂದುವರಿಸಿದೆ. ಗ್ರಾಮಸ್ಥರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.* ಮುಖ್ಯಾಂಶ ಭೀಮನ ಆಗಮನದಿಂದ ಕಾಡಾನೆ ಕಾರ್ಯಾಚರಣೆಗೆ ಹೊಸ ಹುರುಪು

ಕಾರ್ಯಾಚರಣೆಯಲ್ಲಿ ಕುಮ್ಕಿ ಆನೆಗಳಾದ ಭೀಮ, ಶ್ರೀಕಂಠ, ಧನಂಜಯ, ಅಯ್ಯಪ್ಪ, ಶ್ರೀರಾಮ ಹಾಗೂ ಹರ್ಷ ಭಾಗಿ