ಭೋವಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ: ರವಿಕುಮಾರ್

| Published : Jul 07 2024, 01:19 AM IST

ಭೋವಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ: ರವಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಭೋವಿ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಜನಾಂಗವಾಗಿದ್ದು, ಅವರ ಅಭಿವೃದ್ಧಿಗೆ ಶ್ರಮಿಸುವುದಾಗಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಎಸ್. ರವಿಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಭೋವಿ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಜನಾಂಗವಾಗಿದ್ದು, ಅವರ ಅಭಿವೃದ್ಧಿಗೆ ಶ್ರಮಿಸುವುದಾಗಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಎಸ್. ರವಿಕುಮಾರ ಹೇಳಿದರು.

ಕನ್ನಡ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸಮಾಜದ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಉದ್ಯೋಗ ಸೃಷ್ಟಿ ಹೊಲಿಗೆ ಯಂತ್ರ ವಿತರಣೆ, ಸ್ವ ಉದ್ಯೋಗಕ್ಕಾಗಿ ಸಹಾಯ ಧನದ ಕಾರ್ಯಮಾಡಲಾಗುತ್ತದೆ. ಈಗಾಗಲೇ ಸರ್ಕಾರದಿಂದ 20ರಿಂದ 20 ಪ್ರತಿಶತ ಹಣ ಬಿಡುಗಡೆ ಬಾಕಿ ಇದ್ದು ಅದನ್ನು ಸಹ ಅದಷ್ಟು ಬೇಗ ಬಿಡುಗಡೆ ಮಾಡುವ ಕೆಲಸವಾಗುತ್ತದೆ ಎಂದರು.

ಮುಂಬರುವ ದಿನಗಳಲ್ಲಿ ಭೋವಿ ಸಮಾಜದವರ ಕುಲಕಸುಬಾಗಿರುವ ಕಲ್ಲು ಒಡೆಯವ ಕಾಯಕದವರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿರುವ 2 ಲಕ್ಷ ಭೋವಿ ಜನಾಂಗದ ವರಿಗೆ ಸರಕಾರದದಿಂದ ಸಿಗುವ ಸೌಲಭ್ಯಗಳನ್ನು ಕುರಿತು ಅರಿವು ಮೂಡಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಒಂದು ಅಭಿವೃದ್ಧಿ ಮಂಡಳಿಯಲ್ಲಿ ಸಿಗುವ ವಾಹನಗಳನ್ನು ಮೂರರಿಂದ ನಾಲ್ಕು ವರ್ಷಗಳಾದ ಮೇಲೆ ಗುಜರಿಗೆ ಹಾಕಲಾಗುತ್ತದೆ ಹೀಗಾಗಿ ಮಹಿಳೆಯರಿಗೆ ಸಹಾಯ ಧನ ನೀಡಿದಾಗ ಅವರು ಯಾವುದೋ ಒಂದು ವ್ಯಾಪಾರವನ್ನು ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

101 ಉಪ-ಜಾತಿಗಳ ಅಧಿಸೂಚನೆ ಆಧಾರದ ಮೇಲೆ ಭೋವಿ ಜಾತಿಯ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಒಡನಾಟ, ಸಾಂಪ್ರದಾಯಿಕ ಉದ್ಯೋಗ, ಪ್ರಾದೇಶಿಕ ಭಾಷೆಗಳು, ಹಬ್ಬಗಳು ಆಚರಣೆಗಳನ್ನು ಆಧರಿಸಿ ಪರಿಶಿಷ್ಟ ಜಾತಿಯ 08 ಉಪ ಜಾತಿಗಳನ್ನು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಗುರುತಿಸಲಾಗಿದೆ ಎಂದರು.

ಬಳಿಕ ಜೇವರ್ಗಿ ಕ್ರಾಸ್ ರಸ್ತೆ ಗೋಧುತಾಯಿ ಕಾಲೋನಿ ಹತ್ತಿರದಲ್ಲಿರುವ ಕಲ್ಲು ಹೊಡೆಯುವ ಜನಾಂಗದವರನ್ನು ಅಧ್ಯಕ್ಷರು ಭೇಟೆ ನೀಡಿದರು. ಸಮುದಾಯ ಜನಾಂಗದವರ ಮಾತನಾಡಿ, ಸರ್ಕಾರಕ್ಕೆ ನಮಗೆ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿರುವುದಿಲ್ಲ ನಾವು 10-15 ವರ್ಷದಿಂದ ಇಲ್ಲಿಯ ಕಾಲ ಕಳೆಯುತ್ತಿದ್ದೇವೆ ಕುಡಿಯಲು ನೀರು ಶೌಚಾಲಯ ಇರುವುದಿಲ್ಲ ಎಂದರು.

ಜಿಲ್ಲೆಯಲ್ಲಿರುವ ಭೋವಿ ಜನಾಂಗದವರ ಸಮಸ್ಯೆಗಳಿಗೆ ಸ್ಫಂದನೆ ನೀಡಲಾಗುತ್ತದೆ ಅವರ ಬಳಿ ಹೋಗಿ ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳವಂತಹ ಕೆಲಸ ಮಾಡಲಾಗುತ್ತದೆ. ಗಂಗಾಕಲ್ಯಾಣ ಯೋಜನೆಯಲ್ಲಿಯೂ ಈ ಸಮುದಾಯದ ರೈತರಿಗೆ ಸಾಮಗ್ರಿಗಳನ್ನು ವಿತರಿಸುವ ಯೋಜನೆಗೆ ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ ನಾವು ಏನು ಮಾಡಲಾಗಲ್ಲವೆಂದು ಅಸಹಾಯಕತೆಯನ್ನು ತೊಡಿಕೊಂಡಿದ್ದಾರೆ.

ಉಳಿದ 26 ಜಿಲ್ಲೆಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಮೂಲಕ ಭೋವಿ ಅಭಿವೃದ್ಧಿ ನಿಗಮದ ಯೋಜನೆಗಳಾದ ಸ್ವಯಂ ಉದ್ಯೋಗ (ನೇರಸಾಲ) ಉದ್ಯಮಶೀಲತಾ ಯೋಜನೆ ಐಎಸ್ ಬಿ (ಬ್ಯಾಂಕ್ ಸಹಯೋಗದಲ್ಲಿ) ಸ್ವಾವಲಂಬಿ ಸಾರಥಿ ಯೋಜನೆ, ಮೈಕ್ರೋ ಕ್ರೆಡಿಟ್ (ಪ್ರೇರಾಣ) ಯೋಜನೆ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಏತ ನೀರಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತದೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮರಲಿಂಗ ಹೊನ್ನಗುಟ್ಟಿ ತಾಲೂಕು ಅಧಿಕಾರಿ ಲಘಮಣ್ಣ ಕರಣಗಿ, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಗುಂಡಪ್ಪ ಸಾಳಕೆ ಉಪಸ್ಥಿತರಿದ್ದರು.